ಕರ್ನಾಟ ವಿಧಾನಸಭೆ ಚುನಾವಣೆ: ಕಾಂಗ್ರೆಸ್ 224 ಅಭ್ಯರ್ಥಿಗಳ ಪಟ್ಟಿ
ಕೊನೇ ಕ್ಷಣದಲದಲ್ಲಿ ಮುಳಬಾಗಿಲು ಅಭ್ಯರ್ಥಿ ಡಾ. ಬಿ.ಸಿ. ಮುದ್ದುಗಂಗಾಧರ್‌ಗೆ ಅವರನ್ನು ಬದಲಾಯಿಸಿದ ಕಾಂಗ್ರೆಸ್ ಆದಿ ನಾರಾಯಣ್‌ಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಮೊದಲ ಪಟ್ಟಿ, ಕಾಂಗ್ರೆಸ್ ಎರಡನೇ ಪಟ್ಟಿ, ಕಾಂಗ್ರೆಸ್ ಮೂರನೇ ಪಟ್ಟಿ, ಕಾಂಗ್ರೆಸ್ ನಾಲ್ಕನೇ ಪಟ್ಟಿ, ಕಾಂಗ್ರೆಸ್ ಐದನೇ ಪಟ್ಟಿ, ಕಾಂಗ್ರೆಸ್ ಆರನೇ ಪಟ್ಟಿ, ಕಾಂಗ್ರೆಸ್ ಅಭ್ಯರ್ಥಿಗಳ ಬದಲಾವಣೆ,
ಬೆಂಗಳೂರು (ಏ.20): ಮುಳಬಾಗಿಲು ಅಭ್ಯರ್ಥಿಯನ್ನು ಕೊನೇ ಕ್ಷಣದಲ್ಲಿ ಬದಲಾವಣೆ ಮಾಡಿ ಕಾಂಗ್ರೆಸ್ ಘೋಷಣೆ ಮಾಡಿದೆ. ಈ ಮೊದಲು ಡಾ. ಬಿ.ಸಿ. ಮುದ್ದುಗಂಗಾಧರ್‌ಗೆ ಅವರಿಗೆ ಮುಳಬಾಗಿಲು ಟಿಕೆಟ್ ನೀಡಲಾಗಿದ್ದು, ಈಗ ಬದಲಿಸಿ ಆದಿ ನಾರಾಯಣ್‌ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಜೊತೆಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆದಿ ನಾರಾಯಣ್‌ಗೆ ಬಿ ಫಾರಂ ನೀಡಿದ್ದಾರೆ.
ಸ್ಥಳೀಯ ಹೋರಾಟಕ್ಕೆ ಮಣಿದ ಕಾಂಗ್ರೆಸ್: ಮುದ್ದು ಗಂಗಾಧರ್‌ಗೆ ಮುಳುಗಾಗಿಲು ಟಿಕೆಟ್ ನೀಡಿದ್ದರಿಂದ ಸ್ಥಳೀಯವಾಗಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಿಸಿದೆ. ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೊತ್ತನೂರು ಮಂಜುನಾಥ್ ಅವರು ಮುಳಬಾಗಿಲು ಕ್ಷೇತ್ರಕ್ಕೆ ತಮ್ಮ ಬೆಂಬಲಿಗ ಆದಿನಾರಾಯಣ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ, ಹೈಕಮಾಂಡ್ ಡಾ.ಬಿ.ಸಿ. ಮುದ್ದುಗಂಗಾಧರ್ ಅವರಿಗೆ ಮಣೆ ಹಾಕಿ 5ನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿತ್ತು. ಇದರಿಂದ ಕೊತ್ತನೂರು ಮಂಜುನಾಥ್ ಸೇರಿದಂತೆ ಸ್ಥಳೀಯ ನಾಯಕರು ತೀವ್ರ ಅಸಮಾಧಾನಗೊಂಡಿದ್ದರು. ಬಂಡಾಯದ ಬಿಸಿ ಕಾವೇರುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್ ಕೊನೇ ಕ್ಷಣದಲ್ಲಿ ಅಭ್ಯರ್ಥಿಯನ್ನು ಬದಲಿಸಿ ಆದಿನಾರಾಯಣಗೆ ಟಿಕೆಟ್ ಕೊಟ್ಟಿದೆ.
ಕಾಂಗ್ರೆಸ್‌ನ ಕೊನೆಯ ಐವರ ಪಟ್ಟಿ ಬಿಡುಗಡೆ : ಮಂಗಳೂರಿಗೆ ಇನಾಯತ್ ಅಲಿಗೆ ಟಿಕೆಟ್
ಕಾಂಗ್ರೆಸ್ 223 ವಿಧಾನಸಭಾ ಕ್ಷೇತ್ರಗಳ ಪಟ್ಟಿ ನೋಡಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ 223 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉಳಿದಂತೆ ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ವೋದಯ ಪಕ್ಷದ (ರೈತ ಸಂಘ) ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬಾಹ್ಯ ಬೆಂಬಲವನ್ನು ನೀಡಲಾಗಿದೆ. ಉಳಿದಂತೆ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ.
ಮಾ.25ರಂದು ಬಿಡುಗೆ ಮಾಡಿದ ಕಾಂಗ್ರೆಸ್ ಮೊದಲ ಪಟ್ಟಿಯ ಅಭ್ಯರ್ಥಿಗಳು:
- ಕಾಂಗ್ರೆಸ್ ಸಂಪೂರ್ಣ ಪಟ್ಟಿ
- ಚಿಕ್ಕೋಡಿ - ಗಣೇಶ್ ಹುಕ್ಕೇರಿ
- ಕಾಗವಾಡ - ಭೀಮಗಗೌಡ ಕಾಗೆ
- ಕುಡಚಿ - ಮಹೇಂದ್ರ ಕೆ
- ಹುಕ್ಕೇರಿ - ಎ.ಬಿ.ಪಾಟೀಲ್
- ಯಮಕನಮಡಿ - ಸತೀಶ್ ಜಾರಕಿಹೊಳಿ
- ಬೆಳಗಾವಿ ಗ್ರಾಮೀಣ - ಲಕ್ಷ್ಮಿ ಹೆಬ್ಬಾಳ್ಕರ್
- ದೇವನಹಳ್ಳಿ - ಕೆ.ಎಚ್.ಮುನಿಯಪ್ಪ
- ಖಾನಾಪು - ಅಂಜಲಿ ನಿಂಬಾಳ್ಕರ್
- ಬೈಲಹೊಂಗಲ - ಮಹಾಂತೇಶ್ ಕೌಜಲಗಿ
- ರಾಮದುರ್ಗ - ಅಶೋಕ್ ಪಟ್ಟಣ್
- ಜಮಖಂಡಿ - ಆನಂದ್ ನ್ಯಾಮಗೌಡ
- ಹುನಗುಂದ - ವಿಜಯಾನಂದ ಕಾಶಪ್ಪನವರ್
- ಮುದ್ದೇಬಿಹಾಳ - ಅಪ್ಪಾಜಿ ನಾಡಗೌಡ
- ಬಸವನ ಬಾಗೇವಾಡಿ - ಶಿವಾನಂದ ಪಾಟೀಲ್
- ಬಬಲೇಶ್ವರ್ - ಎಂ.ಬಿ.ಪಾಟೀಲ್
- ಇಂಡಿ - ಯಶವಂತರಾಯ ಗೌಡ ಪಾಟೀಲ್
- ಜೇವರ್ಗಿ - ಅಜಯ್ ಸಿಂಗ್
- ಸುರಪುರ - ರಾಜಾವೆಂಕಟಪ್ಪ ನಾಯಕ
- ಶಹಪುರ_ಶರಣಬಸಪ್ಪ ಗೌಡ
- ಚಿತ್ತಾಪುರ - ಪ್ರಿಯಾಂಕ್ ಖರ್ಗೆ
- ಸೇಡಂ - ಶರಣಪ್ರಕಾಶ್ ಪಾಟೀಲ್
- ಚಿಂಚೋಳಿ - ಸುಭಾಷ್ ರಾಠೋಡ್
- ಕಲಬುರಗಿ ಉತ್ತರ - ಕನಿಜ ಫಾತಿಮಾ
- ಆಳಂದ - ಬಿ.ಎಆರ್.ಪಾಟೀಲ್
- ಹುಮ್ನಾಬಾದ್ - ರಾಜಶೇಖರ್ ಪಾಟೀಲ್
- ಬೀದರ್ ದಕ್ಷಿಣ - ಅಶೋಕ್ ಖೇಣಿ
- ಬೀದರ್ - ರಹೀಂ ಖಾನ್
- ಬಾಲ್ಕಿ - ಈಶ್ವರ್ ಖಂಡ್ರೆ
- ರಾಯಚೂರು ಗ್ರಾಮೀಣ - ಬಸನಗೌಡ ದದ್ದಲ್
- ಮಸ್ಕಿ - ಬಸನಗೌಡ ತುರ್ವಿಹಾಳ
- ಕುಷ್ಟಗಿ - ಅಮರೇಗೌಡ ಬಯ್ಯಾಪುರ
- ಕನಕಗಿರಿ - ಶಿವರಾಜ್ ತಂಗಡಗಿ
- ಯಲಬುರ್ಗಾ - ಬಸವರಾಜ ರಾಯರೆಡ್ಡಿ
- ಕೊಪ್ಪಳ - ರಾಘವೇಂದ್ರ ಹಿಟ್ನಾಳ್
- ಗದಗ - ಎಚ್.ಕೆ.ಪಾಟೀಲ್
- ರೋಣ - ಜಿ.ಎಸ್.ಪಾಟೀಲ್
- ಹುಬ್ಬಳ್ಳಿ-ಧಾರವಾಡ (ಪೂರ್ವ) - ಪ್ರಸಾದ್ ಅಬ್ಬಯ್ಯ
- ಹಳಿಯಾಳ- ಆರ್.ವಿ.ದೇಶಪಾಂಡೆ
- ಕಾರವಾರ - ಸತೀಶ್ ಸೈಲ್
- ಭಟ್ಕಳ - ಮಂಕಾಳ ವೈದ್ಯ
- ಹಾನಗಲ್ - ಶ್ರೀನಿವಾಸ್ ಮಾನೆ
- ಹಾವೇರಿ - ರುದ್ರಪ್ಪ ಲಮಾಣಿ
- ಬ್ಯಾಡಗಿ - ಬಸವರಾಜ ಶಿವಣ್ಣನವರ್
- ಹಿರೆಕೇರೂರು - ಯು.ಬಿ.ಬಣಕಾರ್
- ರಾಣೆಬೆನ್ನೂರು - ಪ್ರಕಾಶ್ ಕೋಳಿವಾಡ
- ಹೂವಿನ ಹಡಗಲಿ - ಪರಮೇಶ್ವರ್ ನಾಯ್ಕ್
- ಹಗರಿಬೊಮ್ಮನಹಳ್ಳಿ - ಭೀಮಾನಾಯ್ಕ್
- ವಿಜಯನಗರ - ಎಚ್.ಆರ್.ಗವಿಯಪ್ಪ
- ಕಂಪ್ಲಿ - ಗಣೇಶ್
- ಬಳ್ಳಾರಿ ಗ್ರಾಮೀಣ - ನಾಗೇಂದ್ರ
- ಸಂಡೂರು - ತುಕಾರಾಂ
- ಚಳ್ಳಕೆರೆ - ರಘುಮೂರ್ತಿ
- ಹಿರಿಯೂರು - ಡಿ.ಸುಧಾಕರ್
- ಹೊಸದುರ್ಗ - ಗೋವಿಂದಪ್ಪ
- ದಾವಣಗೆರೆ ಉತ್ತರ- ಎಸ್.ಎಸ್ ಮಲ್ಲಿಕಾರ್ಜುನ್
- ದಾವಣಗೆರೆ ದಕ್ಷಿಣ - ಶಾಮನೂರು ಶಿವಶಂಕರಪ್ಪ
- ಮಾಯಕೊಂಡ - ಕೆ.ಎಸ್.ಬಸವರಾಜ್
- ಭದ್ರಾವತಿ - ಸಂಗಮೇಶ್ವರ್
- ಸೊರಬ - ಮಧು ಬಂಗಾರಪ್ಪ
- ಸಾಗರ - ಬೇಳೂರು ಗೋಪಾಲಕೃಷ್ಣ
- ಬೈಂದೂರು - ಗೋಪಾಲ್ ಪೂಜಾರಿ
- ಕುಂದಾಪುರ - ದಿನೇಶ್ ಹೆಗಡೆ
- ಕಾಪು - ವಿನಯ್ ಕುಮಾರ್ ಸೊರಕೆ
- ಶೃಂಗೇರಿ - ಟಿಡಿ ರಾಜೇಗೌಡ
- ಚಿಕ್ಕನಾಯಕನಹಳ್ಳಿ - ಕಿರಣ್ ಕುಮಾರ್
- ತಿಪಟೂರು - ಷಡಕ್ಷರಿ
- ತುರುವೆಕೆರೆ - ಬೆಮೆಲ್ ಕಾಂತರಾಜ್
- ಕುಣಿಗಲ್ - ರಂಗನಾಥ್
- ಕೊರಟಗೆರೆ - ಪರಮೇಶ್ವರ್
- ಶಿರಾ - ಟಿಬಿ ಜಯಚಂದ್ರ
- ಪಾವಗಡ - ಎಚ್ವಿ ವೆಂಕಟೇಶ್
- ಮಧುಗಿರಿ - ಕೆಎನ್ ರಾಜಣ್ಣ
- ಗೌರಿಬಿದನೂರು ಶಿವಶಂಕರ ರೆಡ್ಡಿ
- ಬಾಗೇಪಲ್ಲಿ - ಎಸ್.ಎನ್.ಸುಬ್ಬಾರೆಡ್ಡಿ
- ಚಿಂತಾಮಣಿ - ಎಂಸಿ ಸುಧಾಕರ್
- ಶ್ರೀನಿವಾಸಪುರ - ರಮೇಶ್ ಕುಮಾರ್
- ಕೆಜಿಎಫ್ - ರೂಪಾ ಶಶೀಧರ್
- ಬಂಗಾರಪೇಟೆ - ನಾರಾಯಣಸ್ವಾಮಿ
- ಮಾಲೂರು - ನಂಜೇಗೌಡ
- ಬ್ಯಾಟರಾಯನಪುರ - ಕೃಷ್ಣಭೈರೇಗೌಡ
- ಆರ್.ಆರ್.ನಗರ - ಕುಸುಮಾ
- ಮಲ್ಲೇಶ್ವರಂ - ಅನೂಪ್ ಅಯ್ಯಂಗಾರ್
- ಹೆಬ್ಬಾಳ - ಭೈರತಿ ಸುರೇಶ್
- ಸರ್ವಜ್ಞನಗರ - ಕೆಜೆ ಜಾರ್ಜ್
- ಶಿವಾಜಿನಗರ - ರಿಜ್ವಾನ್ ಅರ್ಷದ್
- ಶಾಂತಿನಗರ - ಎನ್.ಎಹ್ಯಾರಿಸ್
- ಗಾಂಧಿನಗರ - ದಿನೇಶ್ ಗುಂಡೂರಾವ್
- ರಾಜಾಜಿನಗರ - ಪುಟ್ಟಣ್ಣ
- ಗೋವಿಂದರಾಜನಗರ - ಪ್ರಿಯಾಕೃಷ್ಣ
- ವಿಜಯನಗರ - ಎಂ.ಕೃಷ್ಣಪ್ಪ
- ಚಾಮರಾಜಪೇಟೆ - ಜಮೀರ್ ಅಹ್ಮದ್ ಖಾನ್
- ಬಸವನಗುಡಿ - ಯುಬಿ ವೆಂಕಟೇಶ್
- ಬಿಟಿಎಂ ಲೇಔಟ್ - ರಾಮಲಿಂಗಾರೆಡ್ಡಿ
- ಜಯನಗರ - ಸೌಮ್ಯಾ ರೆಡ್ಡಿ
- ಮಹದೇವಪುರ - ನಾಗೇಶ್
- ಆನೇಕಲ್ - ಶಿವಣ್ಣ
- ಹೊಸಕೋಟೆ - ಶರತ್ ಬಚ್ಚೇಗೌಡ
- ದೇವನಹಳ್ಳಿ - ಕೆ.ಎಚ್.ಮುನಿಯಪ್ಪ
- ದೊಡ್ಡಬಳ್ಳಾಪುರ - ವೆಂಕಟರಾಮಯ್ಯ
- ನೆಲಮಂಗಲ - ಶ್ರೀನಿವಾಸ್ ಎನ್
- ಮಾಗಡಿ - ಬಾಲಕೃಷ್ಣ
- ರಾಮನಗರ - ಇಕ್ಬಾಲ್ ಹುಸೇನ್
- ಕನಕಪುರ - ಡಿಕೆ ಶಿವಕುಮಾರ್
- ಮಳವಳ್ಳಿ - ನರೇಂದ್ರ ಸ್ವಾಮಿ
- ಶ್ರೀರಂಗಪಟ್ಟಣ - ರಮೇಶ್ ಬಂಡಿಸಿದ್ದೇಗೌಡ
- ನಾಗಮಂಗಲ - ಚಲುವರಾಯಸ್ವಾಮಿ
- ಹೊಳೆನರಸೀಪುರ - ಶ್ರೇಯಸ್ ಪಟೇಲ್
- ಸಕಲೇಶಪುರ - ಮುರಳಿ ಮೋಹನ್
- ಬೆಳ್ತಂಗಡಿ - ರಕ್ಷಿತ್ ಶಿವರಾಮ್
- ಮೂಡಬಿದ್ರೆ - ಮಿಥುನ್ ರೈ
- ಮಂಗಳೂರು - ಯುಟಿ ಖಾದರ್
- ಬಂಟ್ವಾಳ - ರಮಾನಾಥ್ ರೈ
- ಸುಳ್ಯ - ಕೃಷ್ಣಪ್ಪ ಜಿ
- ವಿರಾಜಪೇಟೆ - ಪೊನ್ನಣ್ಣ
- ಪಿರಿಯಾಪಟ್ಟಣ - ಕೆ.ವೆಂಕಟೇಶ್
- ಕೆ.ಆರ್.ನಗರ - ಡಿ.ರವಿಶಂಕರ್
- ಹುಣಸೂರು - ಎಚ್.ಪಿ.ಮಂಜುನಾಥ್
- ಎಚ್.ಡಿ.ಕೋಟೆ - ಅನಿಲ್ ಚಿಕ್ಕಮಾದು
- ನಂಜನಗೂರು -ದರ್ಶನ್ ಧ್ರುವನಾರಾಯಣ
- ನರಸಿಂಹರಾಜ - ತನ್ವೀರ್ ಸೇಠ್
- ವರುಣಾ - ಸಿದ್ದರಾಮಯ್ಯ
- ಟಿ.ನರಸಿಪುರ - ಎಚ್.ಸಿ.ಮಹದೇವಪ್ಪ
- ಹನೂರು - ನರೇಂದ್ರ
- ಚಾಮರಾಜನಗರ - ಪುಟ್ಟರಂಗಶೆಟ್ಟಿ
- ಗುಂಡ್ಲುಪೇಟೆ - ಗಣೇಶ್ ಪ್ರಸಾದ್
ಜೆಡಿಎಸ್ ನೆಲಕಚ್ಚಿದ ಮಂಡ್ಯದಲ್ಲಿ ನಾನು ಸ್ಪರ್ಧಿಸೊಲ್ಲ: ಸ್ಪಷ್ಟನೆ ಕೊಟ್ಟ ಸುಮಲತಾ ಅಂಬರೀಶ್
ಏ.6ರಂದು ಬಿಡುಗಡೆ ಮಾಡಿದ ಕಾಂಗ್ರೆಸ್ ಎರಡನೇ ಪಟ್ಟಿಯ ಅಭ್ಯರ್ಥಿಗಳು:
1. ನಿಪ್ಪಾಣಿ- ಕಾಕಾಸಾಹೇಬ್ ಪಾಟೀಲ್
2. ಗೋಕಾಕ್- ಮಹಂತೇಶ್ ಕಡಾಡಿ
3. ಕಿತ್ತೂರು- ಬಾಬಾಸಾಹೇಬ್ ಬಿ.ಪಾಟೀಲ್
4. ಸೌದತ್ತಿ ಯಲ್ಲಮ್ಮ- ವಿಶ್ವಾಸ್ ವಸಂತ್ ವೈದ್ಯ
5. ಮುಧೋಳ (ಎಸ್‌ಸಿ)- ರಾಮಪ್ಪ ಬಾಲಪ್ಪ ತಿಮ್ಮಾಪುರ
6. ಬೀಳಗಿ- ಜೆ.ಟಿ. ಪಾಟೀಲ್
7.ಬದಾಮಿ- ಭೀಮಸೇನ್ ಬಿ. ಚಿಮ್ಮನಕಟ್ಟಿ
8. ಬಾಗಲಕೋಟೆ - ಹುಲ್ಲಪ್ಪ ವೈ. ಮೇಟಿ
9. ಬಿಜಾಪುರ ನಗರ- ಅಬ್ದುಲ್ ಹಮೀದ್ ಖಾಜಾಸಾಹೇಬ್ ಮುಶ್ರಿಫ್
10. ನಾಗಠಾಣ (ಎಸ್‌ಸಿ)- ವಿಠ್ಠಲ ಕಟಕದೊಂಡ
11. ಅಫ್ಜಲ್‌ಪುರ - ಎಂ.ವೈ. ಪಾಟೀಲ್
12. ಯಾದಗಿರಿ- ಚನ್ನರೆಡ್ಡಿ ಪಾಟೀಲ್ ತುಣ್ಣೂರ್
13. ಗುರಮಿಠ್‌ಕಲ್- ಬಾಬುರಾವ್ ಚಿಂಚನಸೂರ
14. ಗುಲ್ಬರ್ಗ ದಕ್ಷಿಣ - ಅಲ್ಲಮಪ್ರಭು ಪಾಟೀಲ್
15.ಬಸವಕಲ್ಯಾಣ-ವಿಜಯ್ ಧರಮ್ ಸಿಂಗ್
16.ಗಂಗಾವತಿ-ಇಕ್ಬಾಲ್ ಅನ್ಸಾರಿ
17.ನರಗುಂದ-ಬಿ.ಆರ್.ಯಾವಗಲ್
18. ಧಾರವಾಡ-ವಿನಯ್ ಕುಲಕರ್ಣಿ
19. ಕುಲಘಟಗಿ-ಸಂತೋಷ್ ಎಸ್. ಲಾಡ್
20.ಸಿರ್ಸಿ- ಭೀಮಣ್ಣ ನಾಯ್ಕ್
21. ಯಲ್ಲಾಪುರ-ವಿ.ಎಸ್.ಪಾಟೀಲ್
22. ಕುಡ್ಲಿಗಿ ಎಸ್ಟಿ-ಡಾ.ಶ್ರೀನಿವಾಸ್ ಎಂ.ಟಿ.
23. ಮೊಳಕಾಲ್ಮೂರು-ಎಸ್ಟಿ-ಎನ್.ವೈ. ಗೋಪಾಲಕೃಷ್ಣ
24. ಚಿತ್ರದುರ್ಗ-ಕೆ.ಸಿ.ವೀರೇಂದ್ರ (ಪಪ್ಪಿ)
25. ಹೊಳಲ್ಕೆರೆ ಎಸ್ಸಿ- ಆಂಜನೇಯ ಎಚ್.
26. ಚೆನ್ನಗಿರಿ-ಬಸವರಾಜು ವಿ. ಶಿವಗಂಗ
27. ತೀರ್ಥಹಳ್ಲಿ-ಕಿಮ್ಮನೆ ರತ್ನಾಕರ್
28. ಉಡುಪಿ- ಪ್ರಸಾದ್‌ರಾಜ್ ಕಾಂಚನ್
29. ಕಡೂರು-ಆನಂದ್ ಕೆ.ಎಸ್
30. ತುಮಕೂರು ನಗರ-ಇಕ್ಬಾಲ್ ಅಹ್ಮದ್
31. ಗುಬ್ಬಿ-ಎಸ್.ಆರ್.ಶ್ರೀನಿವಾಸ್
32. ಯಲಹಂಕ- ಕೇಶವ ರಾಜಣ್ಣ ಬಿ.
33.ಯಶವಂತಪುರ- ಎಸ್. ಬಾಲರಾಜ್ ಗೌಡ
34. ಮಹಾಲಕ್ಷ್ಮಿ ಲೇ ಔಟ್- ಕೇಶವಮೂರ್ತಿ
35. ಪದ್ಮನಾಭ ನಗರ- ವಿ.ರಘುನಾಥ ನಾಯ್ಡು
36.ಮೇಲುಕೋಟೆ- ಸರ್ವೋದಯ ಪಾರ್ಟಿಯ ದರ್ಷನ್ ಪುಟ್ಟಣ್ಣಯ್ಯ
37. ಮಂಡ್ಯ- ಪಿ.ರವಿಕುಮಾರ್
38. ಕೃಷ್ಣರಾಜಪೇಟೆ-ಬಿ.ಎಲ್.ದೇವರಾಜ್
39. ಬೇಲೂರು-ಬಿ.ಶಿವರಾಮ್
40. ಮಡಿಕೇರಿ- ಡಾ.ಮಂತರ್ ಗೌಡ
41. ಚಾಮುಂಡೇಶ್ವರಿ-ಸಿದ್ದೇಗೌಡ
42. ಕೊಳ್ಳೇಗಾಲ ಎಸ್ಸಿ ಮೀಸಲು- ಎ.ಆರ್.ಕೃಷ್ಣಮೂರ್ತಿ
ಏ.15ರಂದು ಬಿಡುಗಡೆ ಮಾಡಿದ ಕಾಂಗ್ರೆಸ್ ಮೂರನೇ ಪಟ್ಟಿಯ ಅಭ್ಯರ್ಥಿಗಳು:
1. ಅಥಣಿ - ಲಕ್ಷ್ಮಣ್ ಸವದಿ
2. ಮೂಡಿಗೆರೆ - ನಯನ ಮೋಟಮ್ಮ
3. ಅರಸೀಕೆರೆ - ಶಿವಲಿಂಗೇಗೌಡ
4. ರಾಯಭಾಗ - ಮಹಾವೀರ್ ಮೋಹಿತ್
5. ಅರಬಾವಿ - ಅರವಿಂದ ದಳವಾಯಿ
6. ಬೆಳಗಾವಿ ಉತ್ತರ - ಆಸೀಫ್ ಸೇಠ್
7. ಬೆಳಗಾವಿ ದಕ್ಷಿಣ - ಪ್ರಭಾವತಿ ಮಾಸ್ತಿಮರಡಿ
8. ತೇರದಾಳ - ಸಿದ್ದಪ್ಪ ಕೊಣ್ಣೂರು
9. ದೇವರ ಹಿಬ್ಬರಗಿ - ಶರಣಪ್ಪ ಸುಣಗಾರ್
10. ಸಿಂಧಗಿ - ಅಶೋಕ್ ಮನಗೊಳಿ
11. ಕಲಬುರಗಿ ಗ್ರಾಮೀಣ - ರೇವೂನಾಯಕ್ ಬೆಳಮಗಿ
12. ಔರಾದ್ - ಭೀಮ್ ಸೇನ್ ರಾವ್ ಶಿಂಧೆ
13. ಮಾನ್ವಿ - ಹಂಪಯ್ಯ ನಾಯಕ್
14. ದೇವದುರ್ಗ - ಶ್ರೀದೇವಿ ನಾಯಕ್
15. ಸಿಂಧನೂರು - ಹಂಪನಗೌಡ ಬಾದರ್ಲಿ
16. ಶಿರಹಟ್ಟಿ - ಸುಜಾತ ದೊಡ್ಡಮನಿ
17. ನವಲಗುಂದ - ಕೋನರೆಡ್ಡಿ
18. ಕುಂದಗೋಳ - ಕುಸುಮಾ ಶಿವಳ್ಳಿ
19. ಕುಮಟಾ - ನಿವೇದಿತ್ ಆಳ್ವಾ
20. ಸಿರಗುಪ್ಪ - ಬಿಎಂ ನಾಗರಾಜ್
21. ಬಳ್ಳಾರಿ ನಗರ - ನಾ.ರ ಭರತ್ ರೆಡ್ಡಿ
22. ಜಗಳೂರು - ದೇವೇಂದ್ರಪ್ಪ
23. ಹರಪನಹಳ್ಳಿ - ಎನ್. ಕೊಟ್ರೇಶ್
24. ಹೊನ್ನಾಳಿ - ಶಾಂತನಗೌಡ
25. ಶಿವಮೊಗ್ಗ ಗ್ರಾಮೀಣ - ಶ್ರೀನಿವಾಸ್ ಕರಿಯಣ್ಣ
26. ಶಿವಮೊಗ್ಗ - ಎಚ್.ಸಿ ಯೋಗೇಶ್
27. ಶಿಕಾರಿಪುರ - ಜಿಬಿ ಮಾಲತೇಶ್
28. ಕಾರ್ಕಳ - ಉದಯ್ ಶೆಟ್ಟಿ
29. ತರೀಕೆರೆ - ಶ್ರೀನಿವಾಸ್
30. ತುಮಕೂರು ಗ್ರಾಮೀಣ - ಷಣ್ಮುಗಪ್ಪ ಯಾದವ್
31. ಚಿಕ್ಕಬಳ್ಳಾಪುರ - ಪ್ರದೀಪ್ ಈಶ್ವರ್
32. ಕೋಲಾರ - ಕೊತ್ತೂರು ಮಂಜುನಾಥ್
33. ದಾಸರಹಳ್ಳಿ - ಧನಂಜಯ್ ಗೌಡ
34. ಚಿಕ್ಕಪೇಟೆ - ಆರ್.ವಿ ದೇವರಾಜ್
35. ಬೊಮ್ಮನಹಳ್ಳಿ - ಉಮಾಪತಿ ಶ್ರೀನಿವಾಸ್ ಗೌಡ
36. ಬೆಂಗಳೂರು ದಕ್ಷಿಣ - ಆರ್.ಕೆ ರಮೇಶ್
37. ಚನ್ನಪಟ್ಟಣ - ಗಂಗಾಧರ್
38. ಮದ್ದೂರು - ಉದಯ್ ಗೌಡ
39. ಹಾಸನ - ಬನವಾಸಿ ರಂಗಸ್ವಾಮಿ
40. ಮಂಗಳೂರು ದಕ್ಷಿಣ - ಜೆ.ಆರ್ ಲೋಬೋ
41. ಪುತ್ತೂರು - ಅಶೋಕ್ ರೈ
42. ಕೃಷ್ಣರಾಜ - ಎಂ.ಕೆ ಸೋಮಶೇಖರ್
43. ಚಾಮರಾಜ - ಹರೀಶ್ ಗೌಡ
ಏ.18ರಂದು ಬಿಡುಗಡೆ ಮಾಡಿದ ಕಾಂಗ್ರೆಸ್ 4ನೇ ಪಟ್ಟಿಯ ಅಭ್ಯರ್ಥಿಗಳು:
- ಲಿಂಗಸೂರು : ದುರ್ಗಪ್ಪ ಎಸ್. ಹೊಲಗೇರಿ
- ಹುಬ್ಬಳ್ಳಿ ಧಾರವಾಡ ಸೆಂಟ್ರಲ್ : ಜಗದೀಶ್ ಶೆಟ್ಟರ್
- ಹುಬ್ಬಳ್ಳಿ ಧಾರವಾಡ ಪಶ್ಚಿಮ : ದೀಪಕ್ ಚಿಂಚೋಳಿ
- ಶಿಗ್ಗಾಂವಿ : ಮಹಮ್ಮದ್ ಯೂಸುಫ್ ಸವಣೂರು
- ಹರಿಹರ : ನಂದಗಾವಿ ಶ್ರೀನಿವಾಸ್
- ಚಿಕ್ಕಮಗಳೂರು : ಎಚ್.ಡಿ. ತಮ್ಮಯ್ಯ
- ಶ್ರವಣಬೆಳಗೊಳ: ಎಂಎ. ಗೋಪಾಲಸ್ವಾಮಿ
ಏ.19ರಂದು ಬಿಡುಗಡೆ ಮಾಡಿದ ಕಾಂಗ್ರೆಸ್ ಐದನೇ ಪಟ್ಟಿಯ ಅಭ್ಯರ್ಥಿಗಳು
- ಕೆ.ಆರ್. ಪುರಂ- ಡಿ.ಕೆ. ಮೋಹನ್
- ಪುಲಕೇಶಿ ನಗರ - ಎ.ಸಿ. ಶ್ರೀನಿವಾಸ್
- ಮುಳಬಾಗಿಲು - ಡಾ. ಬಿ.ಸಿ. ಮುದ್ದುಗಂಗಾಧರ್ (ಆದಿನಾರಾಯಣ)
- ಶಿಗ್ಗಾವಿ - ಯಾಸಿರ್ ಅಹಮದ್ ಖಾನ್ ಪಠಾಣ್ (ಮೊಹಮ್ಮದ್ ಸವಣೂರು)
ಏ.20ರಂದು ಬಿಡುಗಡೆ ಮಾಡಿದ ಕಾಂಗ್ರೆಸ್ ಆರನೇ ಪಟ್ಟಿಯ ಅಭ್ಯರ್ಥಿಗಳು
- ರಾಯಚೂರು - ಮೊಹಮ್ಮದ್ ಶಾಲಮ್
- ಶಿಡ್ಲಘಟ್ಟ - ಬಿ ವಿ ರಾಜೀವ್ ಗೌಡ
- ಸಿ.ವಿ. ರಾಮನ್ ನಗರ - ಎಸ್ ಆನಂದ್ ಕುಮಾರ್
- ಅರಕಲಗೂಡು - ಎಚ್.ಪಿ. ಶ್ರೀಪಾದ್ ಗೌಡ
- ಮಂಗಳೂರು ಉತ್ತರ - ಇನಾಯತ್ ಅಲಿ
ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಬದಲು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ದೆ ಮಾಡಲು ಮೊದಲು ಹುಬ್ಬಳ್ಳಿ ಮೂಲದ ಮೊಹಮ್ಮದ್ ಸವಣೂರು ಅವರಿಗೆ ಟಿಕೆಟ್ ನಿಡಲಾಗಿತ್ತು. ಆದರೆ, ಸ್ತಳೀಯರಿಂದ ಮುಖ ಪರಿಚಯವೇ ಇಲ್ಲದ ಅಭ್ಯರ್ಥಿಗೆ ಟಿಕೆಟ್ ನಿಡಿದ್ದರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಇದರಿಂದ ಎಚ್ಚತ್ತ ಕಾಂಗ್ರೆಸ್ ನಾಲ್ಕನೇ ಪಟ್ಟಿಯಲ್ಲಿ ಘೋಷಣೆ ಮಾಡಿದ್ದ ಅಭ್ಯರ್ಥಿ ಮೊಹಮ್ಮದ್ ಸವಣೂರು ಅವರನ್ಉ ಬದಲಿಸಿ 5ನೇ ಪಟ್ಟಿಯಲ್ಲಿ ಯಾಸಿರ್ ಅಹಮದ್ ಖಾನ್ ಪಠಾಣ್ ಅವರ ಹೆಸರನ್ನು ಘೋಷಣೆ ಮಾಡಿ ಬಿ- ಫಾರಂ ನೀಡಿದೆ.