Asianet Suvarna News Asianet Suvarna News

RR ನಗರ ಉಪಕದನ: ಕುತೂಹಲ ಮೂಡಿಸಿದ ಡಿಕೆಶಿ-ಕುಸುಮಾ ಭೇಟಿ, ಯಾರಿಗೆ ಸಿಗಲಿದೆ ಕೈ ಟಿಕೆಟ್‌?

ಕುತೂಹಲ ಮೂಡಿಸಿರುವ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ| ಕಾಂಗ್ರೆಸ್ ನಾಯಕರ ಜೊತೆಗೆ ಡಿಕೆಶಿ ಭೇಟಿಯಾಗಲಿರುವ ಕುಸುಮಾ ರವಿ| ಕುಸುಮಾ ರವಿ ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ‌ ನಿರ್ಧಾರ ಘೋಷಣೆ ಸಾಧ್ಯತೆ| 

Kusuma Ravi Will Be Meet With KPCC President D K Shivakumargrg
Author
Bengaluru, First Published Oct 3, 2020, 12:52 PM IST

ಬೆಂಗಳೂರು(ಅ.03): ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಹೌದು, ಬಿಜೆಪಿ ಅಭ್ಯರ್ಥಿ ವಿರುದ್ಧ ದಿ. ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ಪತ್ರಿ ಕುಸುಮಾ ಅವರನ್ನ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿಲು ಕಾಂಗ್ರೆಸ್‌ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಉಪಚುನಾವಣಾ ಕದನ ದಿನೇ ಸದಿನೆ ಕುತುಹೂಲ ಕೆರಳಿಸುತ್ತಿದೆ. 

ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ರವಿ ಅವರನ್ನ ಕಣಕ್ಕಿಳಿಸಲು ನಡೆದಿರುವ ಅಂತಿಮ ಹಂತಕ್ಕೆ ಬಂದು ತಲುಪಿದೆ ಎನ್ನಲಾಗಿದೆ. ಈ ಸಂಬಂಧ ಇಂದು(ಶನಿವಾರ) ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಕುಸುಮಾ ರವಿ ಮಾತುಕತೆ ನಡೆಸಲಿದ್ದಾರೆ. 

ಕಾಂಗ್ರೆಸ್ ನಾಯಕರ ಜೊತೆಗೆ ಕುಸುಮಾ ರವಿ ಭೇಟಿ ಡಿಕೆಶಿಯನ್ನ ಭೇಟಿಯಾಗಲಿದ್ದಾರೆ. ಜೊತೆಗೆ ಪ್ರಮುಖ ಒಕ್ಕಲಿಗ ನಾಯಕರು ಮತ್ತು ಜೆಡಿಎಸ್ ಮುಖಂಡ ಕುಸುಮಾ ರವಿ ಅವರ ತಂದೆ ಹನುಮಂತರಾಯಪ್ಪ‌ ಸಹ ಮಾತುಕತೆ ವೇಳೆ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. 

RR ನಗರ ಬೈಎಲೆಕ್ಷನ್‌: ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಡಿ.ಕೆ.ರವಿ ಪತ್ನಿ ಕುಸುಮಾ

ಕುಸುಮಾ ರವಿ ಕಾಂಗ್ರೆಸ್ ಸೇರ್ಪಡೆ ಕುರಿತು ಅಂತಿಮ‌ ನಿರ್ಧಾರ ಘೋಷಣೆ ಸಾಧ್ಯತೆ ಇದೆ. ಸೋಮವಾರ ಕಾಂಗ್ರೆಸ್ ಸೇರಲು ವೇದಿಕೆ ಕೂಡ ಸಿದ್ಧಗೊಳ್ಳುತ್ತಿದೆ. ಹನುಮಂತರಾಯಪ್ಪ ಅವರು ಜೆಡಿಎಸ್‌ನಿಂದ ಹೊರಗೆ ಬರೋದನ್ನು ಸಹ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.  ಈ ಸಂಬಂಧ ಹನುಮಂತರಾಯಪ್ಪ ಅವರು ಕ್ಷೇತ್ರ ವ್ಯಾಪ್ತಿಯ ಒಕ್ಕಲಿಗ ನಾಯಕರಿಗೆ ಸಭೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಇಂದು ಸಂಜೆ ನಡೆಯುವ ಮಾತುಕತೆ ತೀವ್ರ ಕುತೂಹಲ ಕೆರಳಿಸಿದೆ.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ.

Follow Us:
Download App:
  • android
  • ios