Asianet Suvarna News Asianet Suvarna News

ನಮ್ಮಿಂದಲೇ ಯಡಿಯೂರಪ್ಪ ಸಿಎಂ ಆಗಿದ್ದು: ಎಂಟಿಬಿ

ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ನಾವೇ ಕಾರಣ ಎಂದು ಇದೀಗ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ. 

Kurubas  Behind CM BS Yediyurappa Says MTB Nagaraj snr
Author
Bengaluru, First Published Oct 12, 2020, 7:48 AM IST
  • Facebook
  • Twitter
  • Whatsapp

ಬೆಂಗಳೂರು (ಅ.12):  ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಹಾಗೂ ಈಶ್ವರಪ್ಪ ಸಚಿವರಾಗಲು ನಾನು, ಎಚ್‌.ವಿಶ್ವನಾಥ್‌, ಬೈರತಿ ಬಸವರಾಜು, ಆರ್‌.ಶಂಕರ್‌ ಕಂಬಳಿ ಬೀಸಿದ್ದೇ ಕಾರಣ ಎಂದು ವಿಧಾನಪರಿಷತ್‌ ಸದಸ್ಯ ಎಂ.ಟಿ.ಬಿ. ನಾಗರಾಜ್‌ ತಿಳಿಸಿದರು.

ನಮ್ಮ ತ್ಯಾಗದ ಫಲವಾಗಿ ಬಿಜೆಪಿ ಸರ್ಕಾರ ರಚನೆಯಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ನಮ್ಮ ಸಮುದಾಯವನ್ನು ಎಸ್‌.ಟಿ.ಗೆ ಪರಿಗಣಿಸಬೇಕು ಎಂದು ಒತ್ತಾಯ ಮಾಡಿದರು.

ನನ್ನದೇ ನೇತೃತ್ವ

ಕುರುಬ ಸಮುದಾಯಕ್ಕೆ ಎಸ್‌.ಟಿ. ಮೀಸಲಾತಿ ಹಾಗೂ ಮಾನ್ಯತೆ ಸಿಗುವವರೆಗೂ ಹೋರಾಟ ಮಾಡುತ್ತೇವೆ. 1935ರಿಂದ ಹೋರಾಟ ನಡೆಸುತ್ತಿದ್ದರೂ ಮೀಸಲಾತಿ ಸಿಕ್ಕಿಲ್ಲ. ರಾಜ್ಯದಿಂದ ಕೇಂದ್ರಕ್ಕೆ ಹಾಗೂ ಕೇಂದ್ರದಿಂದ ರಾಜ್ಯಕ್ಕೆ ಕಡತ ಓಡಾಡುತ್ತಿತ್ತು. ಆದರೆ, ನಮಗೆ ನ್ಯಾಯ ಸಿಕ್ಕಿಲ್ಲ.

ಸಂಪುಟ ವಿಸರಣೆಯೋ.? ಪುನಾರಚನೆಯೋ.? ಈ ಪ್ರಶ್ನೆ ಮಧ್ಯೆ ಇಬ್ಬರಿಗೆ ಮಂತ್ರಿಗಿರಿ ಫಿಕ್ಸ್..? .

ಇದೀಗ ನಾನು ಕೇಂದ್ರ ಸಚಿವರು ಹಾಗೂ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಎಲ್ಲ ಹಿರಿಯರನ್ನೂ ಬಳಸಿಕೊಂಡು ಎಸ್‌.ಟಿ. ಮೀಸಲಾತಿ ಸಿಗುವವರೆಗೂ ಹೋರಾಟ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿ​ದರು.

ಭಾನುವಾರ ಅರಮನೆ ಮೈದಾನದಲ್ಲಿ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕುರುಬ ಸಮುದಾಯದ ಜನಪ್ರತಿನಿಧಿಗಳ ಹಾಗೂ ನಾಯಕರ ಸಭೆಯಲ್ಲಿ ಈಶ್ವ​ರಪ್ಪ ಈ ಹೋರಾಟಕ್ಕೆ ನೇತೃ​ತ್ವ ವಹಿ​ಸುವ ಭರ​ವಸೆ ನೀಡಿ​ದರು.

Follow Us:
Download App:
  • android
  • ios