Ticket Fight: ಕ್ಲೈಮ್ಯಾಕ್ಸ್ ಹಂತ ತಲುಪಿದ ಹಾಸನ ಟಿಕೆಟ್ ಫೈಟ್: ನಾಳೆಯೇ ಗೊಂದಲಕ್ಕೆ ತೆರೆ?

ಕಳೆದ ಕೆಲವು ದಿನಗಳಿಂದ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿ ಎದ್ದಿರುವ ಗೊಂದಲಗಳಿಗೆ ನಾಳೆ ನಡೆಯಲಿರುವ ಸಭೆಯಲ್ಲೇ ಅಂತ್ಯ ಹಾಡಲು ಮಾಸ್ಟರ್ ಪ್ಲಾನ್. ಪದೇ ಪದೇ ಅಭ್ಯರ್ಥಿ ಆಯ್ಕೆ ಗೊಂದಲದಿಂದ ಪಕ್ಷಕ್ಕೆ ಹಿನ್ನಡೆ ಬಗ್ಗೆ ಕಾರ್ಯಕರ್ತರಿಗೆ ಅರ್ಥಮಾಡಿಸಿ ಒಮ್ಮತದ ಅಭ್ಯರ್ಥಿ ಘೋಷಣೆಗೆ ಈ ಸಭೆಯಲ್ಲಿ ಪ್ಲಾನ್.

Hassan ticket issue; HDK has called a meeting of JDS workers tomorrow at bengaluru rav

ಹಾಸನ (ಫೆ.25) ರಾಜ್ಯದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.

ಹಾಸನ ವಿಧಾನಸಭಾ ಕ್ಷೇತ್ರ(Hassan Assembly Constituency)ದ ಟಿಕೆಟ್ ಗೊಂದಲ ಹಿನ್ನೆಲೆ  ಟಿಕೆಟ್ ಹಂಚಿಕೆ ಬಗ್ಗೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಕೇಳಲು  ಬೆಂಗಳೂರಿನ ಜೆಪಿ ನಗರ(JP Nagar)ದಲ್ಲಿ ನಾಳೆ ಸಂಜೆ 4 ಗಂಟೆ ವೇಳೆಗೆ ಸಭೆ  ಕರೆದಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ(HD Kumaraswamy). 

ಬಿಜೆಪಿ, ಕಾಂಗ್ರೆಸ್‌ಗೆ ಅವಕಾಶ ಕೊಟ್ಟಿದ್ದೀರಿ; ಈ ಬಾರಿ ಜೆಡಿ​ಎ​ಸ್‌ಗೆ ಪೂರ್ಣ ಬಹುಮತ ನೀಡಿ: ಎಚ್‌ಡಿಕೆ

ಹಾಸನ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸೋ ಶಕ್ತಿಯಿರೊ ಕಾರ್ಯಕರ್ತರ ಪಡೆಯೇ ಇದೆ ಎಂದಿರುವ ಎಚ್‌ಡಿಕೆ ಕುಮಾರಸ್ವಾಮಿ. ಹೀಗಾಗಿ ಈ ಬಾರಿ ಹಾಸನ ಕ್ಷೇತ್ರಕ್ಕೆ ಯುವ ನಾಯಕನಿಗೆ ಟಿಕೆಟ್ ಸಿಗುತ್ತಾ ಎಂಬ ಕುತೂಹಲವೂ ಇದೆ. ಇದಕ್ಕೆ ಇಂಬು ಕೊಡುವಂತೆ ಜೆಡಿಎಸ್‌ನ ಪ್ರಮುಖರಿಗೆ ತಮ್ಮ ಕಛೇರಿಯಿಂದ ಖುದ್ದು ಕರೆ ಮಾಡಿ ಆಹ್ವಾನ ನೀಡಿರುವ ಎಚ್‌ಡಿ ಕುಮಾರಸ್ವಾಮಿ. ಸ್ಚರೂಪ್ ಹಾಗು ಭವಾನಿ ಜೊತೆ ಗುರ್ತಿಸಿಕೊಂಡಿರೊ ಎಲ್ಲಾ ಕಾರ್ಯಕರ್ತರು ಸಭೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಗೊಂದಲಕ್ಕೆ ಅಂತ್ಯ ಹಾಡಲು ಮಾಸ್ಟರ್ ಪ್ಲಾನ್:

ಕಳೆದ ಕೆಲವು ದಿನಗಳಿಂದ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿರುವ ಎದ್ದಿರುವ ಗೊಂದಲಗಳಿಗೆ ನಾಳೆ ನಡೆಯಲಿರುವ ಸಭೆಯಲ್ಲೇ ಅಂತ್ಯ ಹಾಡಲು ಮಾಸ್ಟರ್ ಪ್ಲಾನ್. ಪದೇ ಪದೇ ಅಭ್ಯರ್ಥಿ ಆಯ್ಕೆ ಗೊಂದಲದಿಂದ ಪಕ್ಷಕ್ಕೆ ಹಿನ್ನಡೆ ಬಗ್ಗೆ ಕಾರ್ಯಕರ್ತರಿಗೆ ಅರ್ಥಮಾಡಿಸಿ ಒಮ್ಮತದ ಅಭ್ಯರ್ಥಿ ಘೋಷಣೆಗೆ ಈ ಸಭೆಯಲ್ಲಿ ಪ್ಲಾನ್.

 ಟಿಕೆಟ್ ಯಾರಿಗೆ ನೀಡಬೇಕು ಎಂಬ ನಿರ್ಣಯ ಕೈಗೊಳ್ಳುವ ಬಗ್ಗೆ ಪ್ರಮುಖ ಕಾರ್ಯಕರ್ತರ ಅಭಿಪ್ರಾಯ ಮತ್ತು ಹಾಸನ ಕ್ಷೇತ್ರದ ಗೌಪ್ಯ ಸರ್ವೇ ಆಧರಿಸಿ ಟಿಕೆಟ್ ನೀಡಲು ಮುಂದಾಗಿರುವ ಕುಮಾರಸ್ವಾಮಿ. ಎಲ್ಲರ ಅಭಿಪ್ರಾಯ ಪಡೆದೇ ಟಿಕೆಟ್ ಘೋಷಣೆ ಮಾಡಿದರೆ ಎಲ್ಲರೂ ಒಪ್ಪುತ್ತಾರೆ. ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಾರೆ ಎಂಬ ಪ್ಲಾನ್. ಆ ಪ್ರಕಾರವೇ ನಾಳೆ ನಡೆಯಲಿರುವ ಸಭೆಯಲ್ಲಿ  ಕಾರ್ಯಕರ್ತ ರ ಅಭಿಪ್ರಾಯ ಪಡೆಯೋ ಜೊತೆಗೆ ಕ್ಷೇತ್ರದಲ್ಲಿ ಪಕ್ಷದ ಗೆಲುವಿನ ಮಹತ್ವ ಮತ್ತು ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಲು ಕುಮಾರಸ್ವಾಮಿ ಪ್ಲಾನ್.

ಕೈಬಿಟ್ಟು ಹೋಗಿರೊ ಕ್ಷೇತ್ರ ಮರಳಿ ಪಡೆಯಲು ಯಾವತಂತ್ರ ಅನುಸರಿಸಿದ್ರೆ ಅನುಕೂಲ ಎಂಬ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಲು ಚಿಂತನೆ ಹಾಗಾಗಿಯೇ ನಾಳೆ ನಡೆಯಲಿರುವ ತುಂಬಾ ಮಹತ್ವ ಪಡೆದುಕೊಂಡಿದೆ.

Karnataka Election 2023: ಅಮಿತ್‌ ಶಾ ಭಾಷಣ 8ನೇ ಅದ್ಭುತ: ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯ

ಈಗಾಗಲೆ ತಾವೇ ಹಾಸನದ ಅಭ್ಯರ್ಥಿ ಎಂಬ ಅಚಲ ವಿಶ್ವಾಸದಿಂದ ಕ್ಷೇತ್ರದಲ್ಲಿ ಪ್ರಚಾರ ನಡೆಸಿತ್ತಿರೋ ಭವಾನಿ ರೇವಣ್ಣ(HD Revanna) ಇನ್ನೊಂದೆಡೆ  ಕುಮಾರಸ್ವಾಮಿ ಆಶೀರ್ವಾದ ತಮ್ಮ ಮೇಲಿದೆ ಎನ್ನೋ ನಂಬಿಕೆಯಿಂದ ತಾವೇ ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿ ಇರೋ ಸ್ಚರೂಪ್ ಪ್ರಕಾಶ್(Swaroop Prakash). ಇಬ್ಬರ ನಡುವೆ ರೇವಣ್ಣರೇ ಅಭ್ಯರ್ಥಿ ಆಗ್ತಾರೆ ಎನ್ನೋ ಬಗ್ಗೆ ಕೂಡ ತೀವ್ರಗೊಂಡಿರೊ ಚರ್ಚೆ. ರೇವಣ್ಣನವರೇ ಅಭ್ಯರ್ಥಿಯಾಗಿ ಘೋಷಣೆಯಾದರೆ ಅಸಮಾಧಾನ ಭುಗಿಲೇಳುವ ಸಾಧ್ಯತೆಯೂ ತಳ್ಳಿಹಾಕುವಂತಿಲ್ಲ. ಹೀಗಾಗಿ ತುಂಬಾ ಎಚ್ಚರಿಕೆ ನಡೆ ಇಡುತ್ತಿರುವ ಎಚ್‌ಡಿ ಕುಮಾರಸ್ವಾಮಿ.

Latest Videos
Follow Us:
Download App:
  • android
  • ios