Asianet Suvarna News Asianet Suvarna News

ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ ಹರಿಬಿಟ್ಟ ಹೆಚ್.ಡಿ. ಕುಮಾರಸ್ವಾಮಿ: ಮೋದಿ, ಅಮಿತ್‌ ಶಾಗೆ ಟಾಂಗ್

ರಾಜ್ಯ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ  ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವ ಪಟ್ಟಿ ನೀಡಿದ್ದೇವೆ, ಬಿಜೆಪಿ ನಾಯಕರು ನೈತಿಕತೆಯನ್ನು ಪ್ರಶ್ನಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಬಿಜೆಪಿಗೆ ಟಾಂಗ್‌ ನೀಡಿದ್ದಾರೆ.

Kumaraswamy released the list of BJP family politics Tong to Modi and Amit Shah sat
Author
First Published Apr 13, 2023, 5:07 PM IST | Last Updated Apr 13, 2023, 5:14 PM IST

ಬೆಂಗಳೂರು (ಏ.13): ಕರ್ನಾಟಕಕ್ಕೆ ಬಂದಾಗೆಲ್ಲಾ ಕುಟುಂಬ ರಾಜಕಾರಣ ಎಂದು ನಿರಂತರ ಬೊಬ್ಬಿರಿಯುವ ಅಮಿತ್‌ ಶಾ ಮತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹೇಳುವುದು ಒಂದು, ಮಾಡುವುದು ಒಂದು. ರಾಜ್ಯ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ  ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವ ಪಟ್ಟಿ ನೀಡಿದ್ದೇವೆ, ಬಿಜೆಪಿ ನಾಯಕರು ನೈತಿಕತೆಯನ್ನು ಪ್ರಶ್ನಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

  1. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕುಟುಂಬ ರಾಜಕಾರಣದ ಕೂಸು, ಅವರ ತಂದೆ ಮಾಜಿ ಸಿಎಂ ಆಗಿದ್ದವರು.
  2. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತನ್ನ ಪುತ್ರನಿಗೆ ಶಾಸಕ ಟಿಕೆಟ್ ಕೊಡಿಸಲು ಯಶಸ್ವಿಯಾಗಿದ್ದು, ಅವರ ಮತ್ತೊಬ್ಬ ಪುತ್ರ ಸಂಸದರಾಗಿದ್ದಾರೆ.
  3. ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದ್ದು, ಅವರ ಸೋದರನ ಮಗ ತೇಜಸ್ವಿ ಸೂರ್ಯ ಸಂಸದರಾಗಿದ್ದಾರೆ. 
  4. ಶಾಸಕ ಜ್ಯೋತಿ ಗಣೇಶ್‌ಗೆ ಮತ್ತೆ ಟಿಕೆಟ್ ನೀಡಲಾಗಿದೆ, ಅವರ ತಂದೆ ಬಸವರಾಜ್ ಸಂಸದರಾಗಿದ್ದಾರೆ.
  5. ಇಬ್ಬರು ಜಾರಕಿಹೊಳಿ ಸಹೋದರರಿಗೆ ಮತ್ತೆ ಎಂಎಲ್‌ಎ ಟಿಕೆಟ್ ನೀಡಲಾಗಿದೆ.
  6. ಕತ್ತಿ ಕುಟುಂಬದಲ್ಲಿ, ಉಮೇಶ್ ಕತ್ತಿ ಅವರ ಮಗ ಹಾಗೂ ಸಹೋದರನಿಗೆ ಎಂಎಲ್‌ಎ ಟಿಕೆಟ್ ನೀಡಲಾಗಿದೆ.
  7. ಇಬ್ಬರು ರೆಡ್ಡಿ ಸಹೋದರರಿಗೆ ಎಂಎಲ್ಎ ಟಿಕೆಟ್ ನೀಡಲಾಗಿದೆ. 
  8. ಹರ್ಷವರ್ಧನ್‌ಗೆ ಎಂಎಲ್‌ಎ ಟಿಕೆಟ್ ನೀಡಲಾಗಿದ್ದು, ಅವರ ಮಾವ ಶ್ರೀನಿವಾಸ್ ಪ್ರಸಾದ್ ಸಂಸದರಾಗಿದ್ದಾರೆ.
  9. ಬಿಜೆಪಿ ಸಂಸದ ಅಣ್ಣಾಸಾಹೇಬರ ಪತ್ನಿ ಶಶಿಕಲಾ ಜೊಲ್ಲೆಗೆ ಟಿಕೆಟ್ ನೀಡಲಾಗಿದೆ.
  10. ಮಾಜಿ ಸಚಿವರ ಪುತ್ರ ಪ್ರೀತಂ ನಾಗಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.
  11. ಸಂಸದ ಉಮೇಶ್ ಜಾಧವ್ ಮಗ ಅವಿನಾಶ್ ಜಾಧವ್‌ಗೆ ಟಿಕೆಟ್ ನೀಡಲಾಗಿದೆ. 
  12. ಮಾಜಿ ಸಿಎಂ ಮಗ ಕುಮಾರ್ ಬಂಗಾರಪ್ಪ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ.
  13. ಮಾಜಿ ಸಚಿವರ ಮಗ ದತ್ತಾತ್ರೇಯ ಪಾಟೀಲ್‌ಗೆ ಮತ್ತೆ ಟಿಕೆಟ್ ನೀಡಲಾಗಿದೆ.
  14. ಸುರೇಶ್ ಬಾಬು ಮತ್ತು ಶ್ರೀರಾಮುಲು, ಅವರ ಸೋದರಳಿಯ ಮತ್ತು ಚಿಕ್ಕಪ್ಪನಿಗೆ ಟಿಕೆಟ್ ನೀಡಲಾಗಿದೆ.
  15. ಮಾಜಿ ಶಾಸಕನ ಪುತ್ರ ಅರವಿಂದ್ ಬೆಲ್ಲದ್‌ಗೆ ಮತ್ತೆ ಟಿಕೆಟ್ ನೀಡಲಾಗಿದೆ. 
  16. ಚಂದ್ರಕಾಂತ ಪಾಟೀಲ್‌ಗೆ ಟಿಕೆಟ್ ನೀಡಲಾಗಿದ್ದು, ಅವರ ತಂದೆ ವಿಧಾನ ಪರಿಷತ್‌ ಸದಸ್ಯ ಆಗಿದ್ದಾರೆ.
  17. ಮಾಜಿ ಸಚಿವರ ಮಗ ಸಪ್ತಗಿರಿ ಗೌಡರಿಗೆ ಟಿಕೆಟ್.
  18. ಮಾಜಿ ಶಾಸಕರ ಪುತ್ರ ಅಮೃತ್ ದೇಸಾಯಿಗೆ ಮತ್ತೆ ಟಿಕೆಟ್.
  19. ಸಚಿವ ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ್ ಸಿಂಗ್‌ಗೆ ಟಿಕೆಟ್.
  20. ಮಾಜಿ ಸಚಿವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್‌ಗೆ ಮತ್ತೆ ಟಿಕೆಟ್ ನೀಡಲಾಗಿದೆ.

ಎರಡೂ ಪಕ್ಷಗಳಿಂದ ನನ್ನ ಮುಗಿಸಲು ಯತ್ನ: ನಾನು ಮಾಡಿದ ತಪ್ಪೇನು?

Latest Videos
Follow Us:
Download App:
  • android
  • ios