ರಾಮನಗರ, [ಜ.28]: ಕೊಡಗು ಪ್ರವಾಹ ಸಂತ್ರಸ್ತರಿಗೆ ಹೆಚ್ಡಿಕೆ ಸರ್ಕಾರದಲ್ಲಿ ಪರಿಹಾರ ಘೋಷಣೆಯ್ತು ಅಷ್ಟೇ. ಕೊಟ್ಟಿದ್ದು ಮಾತ್ರ ಬಿಜೆಪಿ ಸರ್ಕಾರದಲ್ಲಿ ಎನ್ನುವ ಪ್ರತಾಪ್ ಸಿಂಹ ಹೇಳಿಕೆಗೆ ಕುಮಾರಸ್ವಾಮಿ ಗರಂ ಆಗಿದ್ದಾರೆ.

ರಾಮನಗರದ ಚನ್ನಪಟ್ಟಣದಲ್ಲಿ ಮಾತನಾಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಆ ಪ್ರತಾಪ್ ಸಿಂಹನಿಗೆ ಏನಾದ್ರು ತಿಳುವಳಿಕೆ ಇದ್ರೆ ನಾನೇನು ಪರಿಹಾರ ಕೊಟ್ಟಿದ್ದೆ, ಎಷ್ಟು ಹಣ ಕೊಟ್ಟಿದ್ದೆ ಹೋಗಿ ನೋಡಿ ಬರಬೇಕು ಎಂದು ಗುಡುಗಿದರು.

ಅಶ್ವಥ್ ನಾರಾಯಣನವರ ಆ ಒಂದೇ ಒಂದು ಮಾತಿಗೆ ರೊಚ್ಚಿಗೆದ್ದ HDK

ಕೆಲಸ ಯಾವ ರೀತಿ ಮಾಡಬೇಕು ಅಂತಾ ಬರವಣಿಗೆ ಮುಖ್ಯ ಅಲ್ಲ. ಜನರಿಗೆ ಯಾವ ರೀತಿ ಸ್ಪಂದಿಸಬೇಕೆಂದು ತಿಳಿದಿರುವವನು ನಾನು. ಪ್ರತಾಪ್ ಸಿಂಹನ ಕೈಯಲ್ಲಿ ನಾನು ಹೇಳಿಸಿಕೊಳ್ಳಬೇಕೆ ಎಂದು ತಿರುಗೇಟು ನೀಡಿದರು.

ಪ್ರತಾಪ್ ಸಿಂಹಗೆ ಯೋಗ್ಯತೆ ಇದ್ದರೆ ಅವರ ಸಿಎಂಗೆ, ಪ್ರಧಾನಮಂತ್ರಿಗೆ ಹೇಳಲಿ. ರಾಜ್ಯದಲ್ಲಿರುವ ಜನರ ಸಮಸ್ಯೆಗಳನ್ನ ಬಗೆಹರಿಸಲಿ ಎಂದು ಸವಾಲು ಹಾಕಿದರು.

ಕೊಡಗು ಪ್ರವಾಹ ಸಂತ್ರಸ್ತರಿಗೆ ಹೆಚ್ಡಿಕೆ ಸರ್ಕಾರದಲ್ಲಿ ಪರಿಹಾರ ಘೋಷಣೆಯ್ತು ಅಷ್ಟೇ. ಪರಿಹಾರ ಕೊಟ್ಟಿದ್ದು ಮಾತ್ರ ಬಿಜೆಪಿ ಸರ್ಕಾರದಲ್ಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದರು.