ಕೊನೆಗೂ ಹಾಸನ ಟಿಕೆಟ್ ನಿರ್ಧಾರ ಪ್ರಕಟಿಸಿದ ಕುಮಾರಸ್ವಾಮಿ: ಬ್ಲಾಕ್‌ಮೇಲ್‌ಗೆ ಬಗ್ಗೋದಿಲ್ಲ
ಹಾಸನದಲ್ಲಿ ಜೆಡಿಎಸ್ ಟಿಕೆಟ್ ಹಂಚಿಕೆಯಲ್ಲಿ ಕಾರ್ಯಕರ್ತರ ಅಭಿಪ್ರಾಯವೇ ನಮ್ಮ ಅಭಿಪ್ರಾಯವಾಗಿದೆ. ಪಕ್ಷದ ಕಾರ್ಯಕರ್ತರಿಗೇ ಟಿಕೆಟ್ ನೀಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು (ಏ.08): ಹಾಸನದಲ್ಲಿ ಜೆಡಿಎಸ್ ಟಿಕೆಟ್ ಹಂಚಿಕೆಯಲ್ಲಿ ಕಾರ್ಯಕರ್ತರ ಅಭಿಪ್ರಾಯವೇ ನಮ್ಮ ಅಭಿಪ್ರಾಯವಾಗಿದೆ. ಪಕ್ಷದ ಕಾರ್ಯಕರ್ತರಿಗೇ ಟಿಕೆಟ್ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಈ ಮೂಲಕ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲವೆಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಚಿಕ್ಕೇಗೌಡನ ಪಾಳ್ಯದಲ್ಲಿ ಜೆಡಿಎಸ್‌ನ ಪಂಚರತ್ನ ಯಾತ್ರೆಯ ವೇಳೆ ಹಾಸನದಲ್ಲಿ ಸ್ವರೂಪ್‌ಗೌಡಗೆ ಜೆಡಿಎಸ್ ಟಿಕೆಟ್ ನೀಡುವಂತೆ ಕಾರ್ಯಕರ್ತರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಮಾಧ್ಯಮಮಿತ್ರರಿಗೂ ಹೇಳ್ತೀನಿ ಕೇಳಿಸಿಕೊಳ್ಳಿ, ಕಾರ್ಯಕರ್ತರ ಅಭಿಪ್ರಾಯವೇ ನಮ್ಮ ಅಭಿಪ್ರಾಯವಾಗಿದೆ. ಕಾರ್ಯಕರ್ತನಿಗೆ ಟಿಕೆಟ್ ಕೊಡೋದು ಅಂತ ಹೇಳಿದ್ದೇನೆ. ಅದರಲ್ಲಿ ಬದಲಾವಣೆ ಇಲ್ಲ. ಈಗಾಗಲೇ ತೀರ್ಮಾನ ಮಾಡಿಯಾಗಿದೆ. ಶಿಘ್ರದಲ್ಲಿಯೇ ಘೋಷಣೆ ಮಾಡಲಾಗುವುದು ಎಂದು ಹೇಳುವ ಮೂಲಕ ಪರೋಕ್ಷವಾಗಿ ಸ್ವರೂಪ್‌ಗೆ ಟಿಕೆಟ್ ಘೋಷಣೆ ಎಂಬುದನ್ನು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧ: ಡಿಕೆಶಿ
ಯಾವುದೇ ಬ್ಲಾಕ್‌ಮೇಲ್ ನಡೆಯುವುದಿಲ್ಲ: ನನ್ನತ್ರ ಯಾವ ಬ್ಲಾಕ್ ಮೇಲ್ ಕೂಡ ನಡೆಯಲ್ಲ. ದೇವೆಗೌಡರ ಬಳಿ ಹೋಗಿ ಬ್ಲಾಕ್ ಮೇಲ್ ಮಾಡಬಹುದು. ನಾನು ಪಕ್ಷದ ಜವಾಬ್ದಾರಿ ತಗೆದುಕೊಂಡ ಮೇಲೆ ಕಾರ್ಯಕರ್ತರನ್ನ ಉಳಿಸಿಕೊಂಡಿದ್ದೇನೆ. ಕುಟುಂಬದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಈವರೆಗೂ ಕಾಪಾಡಿಕೊಂಡು ಬಂದಿದ್ದೇನೆ. ಇನ್ಮುಂದೆ ಆ ರೀತಿ ಆಗಲ್ಲ, ಕಾರ್ಯಕರ್ತರಿಗೆ ಟಿಕೆಟ್ ಅಂತ ಹೇಳಿದ್ದೇನೆ. ಈಗಾಗಲೇ ತೀರ್ಮಾನ ಆಗಿದೆ, ಆಗುತ್ತೆ ಕೂಡ ಎಂದು ಭವಾನಿ ರೇವಣ್ಣನಿಗೆ ಟಾಂಗ್ ನೀಡಿದರು.
ಕಷ್ಟಪಟ್ಟಿದ್ದರೆ ಮಾತ್ರ ಬೆಲೆ ಗೊತ್ತಾಗುತ್ತೆ.?: ಕೆಲ ನಾಯಕರು ಅಮುಲ್ ಹಾಲನ್ನು ರಾಜ್ಯದಲ್ಲಿ ಮಾರಾಟ ಮಾಡುವ ಒಪ್ಪಿಗೆ ಸೂಚಿಸುವ ಮೂಲಕ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಜಾಗತಿಕ ಪ್ರಪಂಚದಲ್ಲಿ ಪರಿಸ್ಥಿತಿ ಎಲ್ಲಿಗೆ ಹೋಗುತ್ತೆ ಅನ್ನೋದನ್ನ ಅರ್ಥ ಮಾಡಿಕೊಂಡಿಕೊಂಡಿದ್ದೀರಾ..? ಇವರಿಗೆ ಅದರ ಬೆಲೆ ಏನು ಅಂತ ಗೊತ್ತಾ? ಇವರೇನಾದರೂ ಕಷ್ಟ ಪಟ್ಟು ಸಂಪಾದನೆ ಮಾಡಿದ್ದರೆ ಅದರ ಬೆಲೆ ಗೊತ್ತಾಗುತ್ತಿತ್ತು. ಯಾರೋ ದುಡಿಮೆ ಮಾಡಿದರೆ ನಾವು ಮಾಡಿದ್ವಿ ಅಂತ ಪ್ರಚಾರ ಮಾಡಿಕೊಳ್ಳೋದು ಬಿಟ್ಟರೆ ಏನಿದೆ ಇವರ ಕಾಂಟ್ರಿಬ್ಯೂಷನ್ ..? ಅವರಿಗೆ ವ್ಯವಹಾರ ಜ್ಞಾನವಿಲ್ಲ. ಬಿಜೆಪಿ ಆಡಳಿತದಲ್ಲಿ ಎಲ್ಲಾ ನಾಶ ಮಾಡೋಕೆ ಹೊರಟಿರೋದನ್ನ ಜನರಿಗೆ ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಟೀಕೆ ಮಾಡಿದರು.
ಬೆಂಗಳೂರಲ್ಲಿ ಅಮುಲ್‌ಗೆ ಜಾಗ ಕೊಡಲಾಗಿದೆ: ರಾಜ್ಯದಲ್ಲಿ ಅಮುಲ್ ಹಾಲು ಸರಬರಾಜು ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯದ ನಮ್ಮ ಆಸ್ತಿಗಳನ್ನ ಉಳಿಸುವ ಯಾವುದೇ ಜವಾಬ್ದಾರಿ ಸರ್ಕಾರಕ್ಕೆ ಇಲ್ಲ. KMF ಬೆಳವಣಿಗೆಯನ್ನ ಕಡೆಗಣಿಸಿ ಅಮೂಲ್ ಮೇಲೆ ಎತ್ತಲೂ ಹೊರಟಿದ್ದಾರೆ. ಬೆಂಗಳೂರಿನಲ್ಲೇ ಅಮೂಲ್ ಗೆ ಜಮೀನು ಕೊಡಲಾಗಿದೆ. ಯಾವಾಗ ಕೊಟ್ಟಿದ್ದಾರೋ ಗೊತ್ತಿಲ್ಲ ಅದನ್ನ ತೆಗೆಸುತ್ತಿದ್ದೇನೆ. ಒಂದು ಕಾಲದಲ್ಲಿ ನಷ್ಟದಲ್ಲಿದ್ದ ನಂದಿನಿಯನ್ನ ಲಾಭದಾಯಕ ಮಾಡಿದ್ದು ಪ್ರಧಾನಿ ದೇವೆಗೌಡರು ಮತ್ತು ಹೆಚ್.ಡಿ ರೇವಣ್ಣನವರು. ಈಗ ಅದನ್ನೇ ದಿವಾಳಿ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರು ಕೆಪಿಸಿಸಿ ಇಂದಿರಾಗಾಂಧಿ ಭವನ ಏ.16ಕ್ಕೆ ಉದ್ಘಾಟನೆ: ಡಿ.ಕೆ. ಶಿವಕುಮಾರ್ ಮಾಹಿತಿ
ಪಕ್ಷ ಬಿಟ್ಟು ಹೋದವರು ಅವಶ್ಯಕತೆ ಇಲ್ಲ: ನಿಮ್ಮ ಮುಂದೆ ಬ್ಲಾಕ್ ಮೇಲ್ ಮಾಡಿದ್ರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮುಂದೆ ಇದುವರೆಗೂ ಯಾವ ಬ್ಲಾಕ್ ಮೇಲ್ ಸಹ ಬಂದಿಲ್ಲ. ಆದ್ರೆ ಪತ್ರಿಕೆಗಳಲ್ಲಿ ಬಂದಿದೆ. ಬರೆದಿಟ್ಟುಕೊಳ್ಳಿ ಆ ತಾಯಿ ಆಶೀರ್ವಾದದಿಂದ 120 ಸ್ಥಾನ ಮುಟ್ಟಬೇಕು ಅಂತ ಏನು ಹೊರಟಿದ್ದೇನೆ. ಜನರ ಆಶಿರ್ವಾದಿಂದ 120 ಸ್ಥಾನ ಗೆದ್ದೆ ಗೆಲ್ಲುವ ವಿಶ್ವಾಸವಿದೆ. ಅದಕ್ಕೆ ಪೂರಕವಾಗಿ ಕಠಿಣ ನಿರ್ಧಾರಗಳನ್ನ ಮಾಡುತ್ತಿದ್ದೇನೆ. ವರುಣಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಎದರಿಸಿದ್ದಾರೆ. ಅಲ್ಲಿ ಸಮರ್ಥ ಅಭ್ಯರ್ಥಿ ಹಾಕ್ತೇವೆ. ಪಕ್ಷ ಬಿಟ್ಟು ಹೋದವರು ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.