ಅರುಣ್‌ ಸಿಂಗ್‌ ರಾಜ್ಯ ಭೇಟಿ ನಂತರ ಎಲ್ಲ ಸಮಸ್ಯೆ ಪರಿಹಾರ: ಈಶ್ವರಪ್ಪ

* ಜು.16 ಕ್ಕೆ ಕರ್ನಾಟಕಕ್ಕೆ ಆಗಮಿಸಲಿರುವ ಅರುಣ್‌ ಸಿಂಗ್‌
* ಹೇಳುವವರು, ಕೇಳುವವರು ಇದ್ದಾರೆ ಎನ್ನುವುದಕ್ಕೆ ಅರುಣ್‌ ಸಿಂಗ್‌ ರಾಜ್ಯಕ್ಕೆ ಬರುತ್ತಿರುವುದೇ ಸಾಕ್ಷಿ
* ಶಾಸಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ

KS Eshwarappa Talks Over Problems in BJP grg

ಶಿವಮೊಗ್ಗ(ಜೂ.14): ರಾಜ್ಯ ಬಿಜೆಪಿ ಪ್ರಭಾರ ಉಸ್ತುವಾರಿ ಅರುಣ್‌ ಸಿಂಗ್‌ ರಾಜ್ಯಕ್ಕೆ ಭೇಟಿ ನೀಡಲಿದ್ದು, ಅವರ ಭೇಟಿ ನಂತರ ಪಕ್ಷದ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಅರುಣ್‌ ಸಿಂಗ್‌ ಅವರು ಜು.16, 17, 18ರಂದು ಕರ್ನಾಟಕಕ್ಕೆ ಆಗಮಿಸಲಿದ್ದು, ಕ್ಯಾಬಿನೆಟ್‌ ಸಚಿವರು ಹಾಗೂ ಕೋರ್‌ ಕಮಿಟಿಯೊಂದಿಗೆ ಸಭೆ ನಡೆಸಲಿದ್ದಾರೆ. ಶಾಸಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶವಿದೆ. ಇದು ಬಿಜೆಪಿಯ ವಿಶೇಷ.

ಬಿಎಸ್‌ವೈ ಅವರೇ ಸಿಎಂ: 100% ವರಿಷ್ಠರ ಅಭಿಪ್ರಾಯ!

ಹೇಳುವವರು, ಕೇಳುವವರು ಇದ್ದಾರೆ ಎನ್ನುವುದಕ್ಕೆ ಅರುಣ್‌ ಸಿಂಗ್‌ ಅವರು ರಾಜ್ಯಕ್ಕೆ ಬರುತ್ತಿರುವುದೇ ಸಾಕ್ಷಿ. ಅರುಣ್‌ ಸಿಂಗ್‌ ಬರುತ್ತಿದ್ದಂತೆ ಬಿಜೆಪಿಯ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತವೆ. ಇದು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರ ನಂಬಿಕೆ ಎಂದರು.
 

Latest Videos
Follow Us:
Download App:
  • android
  • ios