ಉದ್ದಕ್ಕೆ ಎಲ್ಲ ಇಲಾಖೆ ಹೆಸರು ಹಾಕಿ 30, 40 ಪರ್ಸೆಂಟೇಜ್‌ ಕಮಿಷನ್‌ ಎಂದು ಆರೋಪವನ್ನು ಒಂದನೇ ಕ್ಲಾಸ್‌ ಮಗುವೂ ಮಾಡುತ್ತದೆ. ಕಾಂಗ್ರೆಸ್‌ನವರು ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುವುದನ್ನು ಬಿಟ್ಟು ದಾಖಲೆ ಬಿಡುಗಡೆ ಮಾಡಲಿ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು. 

ಶಿವಮೊಗ್ಗ (ಸೆ.17): ಉದ್ದಕ್ಕೆ ಎಲ್ಲ ಇಲಾಖೆ ಹೆಸರು ಹಾಕಿ 30, 40 ಪರ್ಸೆಂಟೇಜ್‌ ಕಮಿಷನ್‌ ಎಂದು ಆರೋಪವನ್ನು ಒಂದನೇ ಕ್ಲಾಸ್‌ ಮಗುವೂ ಮಾಡುತ್ತದೆ. ಕಾಂಗ್ರೆಸ್‌ನವರು ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುವುದನ್ನು ಬಿಟ್ಟು ದಾಖಲೆ ಬಿಡುಗಡೆ ಮಾಡಲಿ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕ್ಷಿ ಇಲ್ಲದೇ ಆರೋಪವನ್ನು ಯಾರು ಬೇಕಾದರೂ ಮಾಡುತ್ತಾರೆ. ಗುತ್ತಿಗೆದಾರರ ಸಂಘದ ಕೆಂಪಣ್ಣ 40 ಪರ್ಸೆಂಟೇಜ್‌ ಆರೋಪ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಇಂತಹ ಇಲಾಖೆ, ಇಂತಹ ಕಾಮಗಾರಿ, ಇಂತಹ ಯೋಜನೆ, ಇಷ್ಟು ಹಣ, ಇದರಲ್ಲಿ ಇಷ್ಟುದುಡ್ಡು ಹೊಡೆದಿದ್ಥಾರೆ ಎಂದು ಕೆಂಪಣ್ಣ ದಾಖಲೆ ಬಿಡುಗಡೆ ಮಾಡಲಿ ನೋಡೋಣ ಎಂದು ಚಾಟಿ ಬೀಸಿದರು.

ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ನಮ್ಮ ಪಕ್ಷದ ಬಗ್ಗೆ ಆರೋಪ ಮಾಡುವ ಅಗತ್ಯ ಇಲ್ಲ. ದಾಖಲೆ ಸಮೇತ ಬಿಡುಗಡೆ ಮಾಡಿದರೆ ನಾನು ಒಪ್ಪುತ್ತೇನೆ. ಕಾಂಗ್ರೆಸ್‌ನವರು ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುವುದನ್ನು ಬಿಟ್ಟು ದಾಖಲೆ ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಆರೋಪ ಮಾಡುವುದು ಸರಿಯಲ್ಲ. ದಾಖಲೆ ಸಮೇತ ಕೊಟ್ಟರೆ ನಾನೇ ಮುಖ್ಯಮಂತ್ರಿ ಬಳಿ ಮಾತನಾಡುತ್ತೇನೆ. ಕೆಂಪಣ್ಣ ಕಾಂಗ್ರೆಸ್‌ ಪಕ್ಷದ ಏಜೆಂಟ್‌ ಎಂದು ಆರೋಪಿಸಿದರು.

ಬಿಜೆಪಿ ಜನಸ್ಪಂದನಾ ಸಮಾವೇಶಕ್ಕೆ ಗೈರು: ಸ್ಪಷ್ಟ ಕಾರಣ ಕೊಟ್ಟ ಈಶ್ವರಪ್ಪ

ಹಿಂದಿ ಭಾಷೆಗೆ ಏಕೆ ರಾಜಕೀಯ?: ಹಿಂದಿ ಸಂಪರ್ಕ ಭಾಷೆ, ಇದರಲ್ಲಿ ಯಾಕೆ ವಿರೋಧ ಪಕ್ಷದರು ರಾಜಕೀಯ ಮಾಡುತ್ತಿದ್ದಾರೆ ಎಂಬುದು ನನಗೆ ಗೋತ್ತಾಗುತ್ತಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ಇಡೀ ದೇಶದ ಯಾವುದೇ ಜಾಗಕ್ಕೆ ಹೋದರೂ ಇಂಗ್ಲಿಷ್‌. ಹಾಗಾಗಿ ಹಿಂದಿನ ಅರ್ಥ ಮಾಡಿಕೊಳ್ಳುವ ಜನ ಜಾಸ್ತಿ. ಹಾಗಾಗಿ ಹಿಂದಿ ಇಡೀ ದೇಶದಲ್ಲಿ ಸಂಪರ್ಕ ಭಾಷೆ, ರಾಷ್ಟ್ರ ಭಾಷೆ ಅಂತ ಇನ್ನೂ ಡಿಕ್ಲೇರ್‌ ಮಾಡಿಲ್ಲ. ಆದರೆ ಯಾಕೆ ಇದನ್ನು ವಿರೋಧ ಮಾಡುತ್ತಿದ್ದಾರೆ, ನನಗೆ ಗೊತ್ತಿಲ್ಲ ಎಂದರು. ಪ್ರತಿಯೊಂದಕ್ಕೂ ರಾಜಕೀಯ ತರುವ ವ್ಯವಸ್ಥೆ ಇದೆಯಲ್ಲಾ ಖಂಡಿತ ಒಳ್ಳೆಯದಲ್ಲ. ಹಿಂದಿಭಾಷೆ ಬಗ್ಗೆ ದ್ವೇಷ ಮಾಡೋದು ಒಳ್ಳೆಯದಲ್ಲ. ಕನ್ನಡ ನಮ್ಮ ಮಾತೃಭಾಷೆ, ತಾಯಿ ಭಾಷೆ ಕನ್ನಡವನ್ನು ದ್ವೇಷ ಮಾಡೋ ಪ್ರಶ್ನೆಯೇ ಉದ್ಭವ ಆಗಲ್ಲ. ಹಾಗಾಗಿ ದ್ವೇಷ ಮಾಡುವುದು ಒಳ್ಳೆಯದಲ್ಲ ಎಂದು ಕುಟುಕಿದರು.

ಕಗ್ಗೊಲೆಗಳ ಹಿನ್ನೆಲೆ ಕರ್ನಾಟಕದಲ್ಲಿ ಹಿಂದುತ್ವ ಜಾಗೃತಿ: ಈಶ್ವರಪ್ಪ ಹೇಳಿಕೆ

ಕಾಲುನೋವಿಂದ ಅಧಿವೇಶನಕ್ಕೆ ಗೈರು: ವಿಧಾನಸಭೆ ಅಧಿವೇಶನ ಆರಂಭವಾಗಿ ಎರಡು ದಿನ ಕಳೆದರೂ ಶಿವಮೊಗ್ಗದಲ್ಲೇ ಉಳಿದಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ನಡೆ ತೀವ್ರ ಕುತೂಹಲ ಮೂಡಿಸಿದೆ. ಆದರೆ, ತಾವು ಕಾಲುನೋವಿನಿಂದ ಅಧಿವೇಶನಕ್ಕೆ ಗೈರಾಗಿರುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ಗುತ್ತಿಗೆದಾರನ ಆತ್ಮಹತ್ಯೆ ಕೇಸ್‌ನಲ್ಲಿ ದೋಷಮುಕ್ತರಾಗಿದ್ದರೂ ಮತ್ತೆ ವಾಪಸ್‌ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡಿದ್ದಾರೆಂಬ ಗಾಳಿ ಸುದ್ದಿಗಳ ನಡುವೆಯೇ ಅವರು ತಮ್ಮ ಗೈರಿಗೆ ಈ ರೀತಿ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಅಧಿವೇಶನದಲ್ಲಿ ಪರ್ಸಂಟೇಜ್‌ ವ್ಯವಹಾರಕ್ಕೆ ಸಂಬಂಧಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಕಾಂಗ್ರೆಸ್‌ ಆರೋಪಗಳಿಗೆ ಒಂದೇ ಒಂದು ಸಾಕ್ಷಿ ಒದಗಿಸಿಲ್ಲ. ರಾಜ್ಯದ ಜನತೆ ಕಾಂಗ್ರೆಸ್‌ ಆರೋಪವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರತಿಕ್ರಿಯಿಸಿದರು.