Asianet Suvarna News Asianet Suvarna News

ಬಡವರಿಗೆ, ಪದವೀಧರರಿಗೆ, ಮನೆ ಯಜಮಾನಿಗೆ ಸರ್ಕಾರದ ಮೋಸ: ಈಶ್ವರಪ್ಪ ಆಕ್ರೋಶ

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಕಿಡಿಕಾರಿರುವ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ, ಅಕ್ಕ ಕೊಡದೇ ಬಡಜನರಿಗೆ, ಡಿಗಿ ಓದಿದ ವಿದ್ಯಾರ್ಥಿಗಳಿಗೆ ಹಾಗೂ ಮನೆ ಯಜಮಾನಿಗೆ ರಾಜ್ಯ ಸರ್ಕಾರ ಮೋಸ ಮಾಡಿದೆ ಎಂದಿದ್ದಾರೆ.

KS Eshwarappa says on Congress government guarantee schemes san
Author
First Published Jul 1, 2023, 1:35 PM IST | Last Updated Jul 1, 2023, 1:35 PM IST

ಬೆಂಗಳೂರು (ಜು.1): ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರ ಬಂದಿದ್ದು ಘೋಷಣೆ ಮಾಡಿರುವ ಗ್ಯಾರಂಟಿ ಕಾರ್ಡ್‌ನಿಂದ. ಆದರೆ, ಇದನ್ನು ಜಾರಿ ಮಾಡಲು ವಿಫಲವಾಗಿರುಬ ಬಗ್ಗೆ ನಾವು ಹೋರಾಟ ಮಾಡುತ್ತೇವೆ. ನಮ್ಮಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಮಾತನಾಡುತ್ತಿದ್ದಾರೆ. ಆಪಾದನೆ ಮಾಡೋದು ಸೂಕ್ತ ಅಲ್ಲ ಎಂದು ಸಭೆ ಮಾಡಿ ತೀರ್ಮಾನ ಮಾಡಿದ್ದೇನೆ. ಇಂದಿಗೆ ನಮ್ಮ ಪಕ್ಷದ ಎಲ್ಲಾ ಬಹಿರಂಗ ಹೇಳಿಕೆ ಮುಕ್ತಾಯ ಆಗಿದೆ ಎಂದು ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ. ಫ್ರೀ ಗ್ಯಾರಂಟಿ ಇಂದಾಗಿ ಜನ ಅಪಹಾಸ್ಯ ಮಾಡುತ್ತಿದ್ದಾರೆ. ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದೆ. ಕೈಗಾರಿಕೋದ್ಯಮಿಗಳು ಪತ್ರಿಭಟನೆ ಮಾಡಿದ್ದಾರೆ. ಅಕ್ಕಿ ಕೊಡ್ತೇನೆ ಅಂದಿದ್ದ ಸರ್ಕಾರ ಇನ್ನೂ ಬಡ ಜನರಿಗೆ ಅಕ್ಕಿ ಕೊಟ್ಟಿಲ್ಲ. ಅಕ್ಕಿ ಇಲ್ಲ ಅಂದರೆ ಹಣ ಕೊಡಿ ಅಂದಿದ್ದೆವು. ಆದರೆ, ಸಿದ್ಧರಾಮಯ್ಯ ಹಣ ತಿನ್ನೋಕೆ ಆಗುತ್ತಾ ಎಂದು ನಮಗೇ ಕೇಳಿದ್ದರು. ಈಗ ತಾವು ಅಕ್ಕಿ ಬದಲು ಹಣವನ್ನೇ ಕೊಡ್ತೀವಿ ಅಂದಿದ್ದಾರೆ. ಹಣ ಕೊಡೋದು ಸರಿ, ಆದರೆ, 10 ಕೆಜಿ ಅಕ್ಕಿಯ ಹಣ ಕೊಡುತ್ತಿಲ್ಲ. ನೀವು ಹೇಳಿದ ಮಾತಿನಂತೆ 10 ಕೆಜಿ ಅಕ್ಕಿಯ ಹಣ ಕೊಡಿ. ಅದು ಮಾರುಕಟ್ಟೆಯ ಬೆಲೆಯಲ್ಲಿ ಕೊಡಿ.  ಐದು ಕೆಜಿಗೆ ಹಣ‌ ಕೊಡುತ್ತಿದ್ದೇನೆ ಎನ್ನುವುದು ಮೋಸ ಎಂದು ಹೇಳಿದ್ದಾರೆ.

ಗೃಹಲಕ್ಷ್ಮೀ ಯೋಜನೆಯ  ಎರಡು ಸಾವಿರ ಯಾವಾಗ ಕೊಡ್ತೀರಿ ಅನ್ನೋದನ್ನ ಸ್ಪಷ್ಟವಾಗಿ ಹೇಳಿ. ಡಿಗ್ರಿ ಓದಿದವರಿಗೆ ಮೋಸ ಮಾಡಿದ್ದೀರಿ, ಮನೆ ಒಡತಿಗೆ ಮೋಸ ಮಾಡಿದ್ದೀರಿ. ಪಾಪ ಖಾಸಗಿ ಬಸ್ ನವರ ಕಥೆ ಏನು? ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ನೀವು ಎಲ್ಲಾ ಯೋಜನೆ ಘೋಷಣೆ ಮಾಡೊ ತನಕ ನಾವು ಹೋರಾಟ ಮಾಡುತ್ತೇವೆ. ವಿಧಾನಮಂಡಲ ಹೊರಗೆ ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ನಡೆಯಲಿದೆ. ಜುಲೈ 4 ರಿಂದ ನಮ್ಮ ಹೋರಾಟ ಆರಂಭವಾಗಲಿದೆ. ಮೊದಲ ಕ್ಯಾಬಿನೆಟ್‌ನಲ್ಲಿಯೇ ಎಲ್ಲಾ ಘೋಷಣೆ ಜಾರಿ ಮಾಡ್ತೇವೆ ಎಂದು ಹೇಳಿದ್ದು ನೀವೇ. ಇಲ್ಲಿ ತನಕ ಸಮಯ ಆಗಿದೆ. ಹೀಗಾಗಿ ಯೋಜನೆ ಜಾರಿಗೆ ಹೋರಾಟ. ಭರವಸೆ ನೀಡಿದ್ದನ್ನು ಹೇಳಿದಂತೆ ನೀಡಿ. ನಿಮ್ಮ ಪಾರ್ಟಿಗೆ ಒಳ್ಳೆಯ ಹೆಸರು ಬರುತ್ತದೆ. ಬಂದರೆ ನಮಗೆ ಸಂತೋಷ. ಇಲ್ಲವಾದರೆ ಮುಂಬರುವ ಚುನಾವಣೆಯಲ್ಲಿ ಜನ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಗೋಹತ್ಯೆ ನಿಷೇದ ಕಾನೂನು ಮತಾಂತರ ಕಾಯ್ದೆ ರದ್ದು ಮಾಡೋಕೆ ಹೋರಟಿದ್ದೀರಿ. ಸಾಧು ಸಂತರು ಈ ಕುರಿತಾಗಿ ಹೋರಾಟ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಮತಾಂತರ ನಿಷೇದ ಕಾಯ್ದೆ  ರದ್ದು ಮಾಡಬೇಡಿ. ಬೇಕಿದ್ದರೆ ಕೇರಳ ಫೈಲ್ಸ್‌ ಸಿನಿಮಾ ನೋಡಿ ಎಂದು ಹೇಳಿದ್ದಾರೆ.

ಬಿಜೆಪಿ ಆಂತರಿಕ ವಿಷಯಗಳನ್ನು ಹೊರಗಡೆ ಮಾತಾಡ್ಬೇ​ಡಿ: ಈಶ್ವರಪ್ಪ ಮನವಿ

ಇನ್ನು ಬಿಜೆಪಿಯಲ್ಲಿ ಮೂಲ-ವಲಸಿಗ ಕುರಿತಾದ ಹೇಳಿಕೆ ಸಂಬಂಧ ಆಗಿರುವ ವಿವಾದದ ಬಗ್ಗೆ ಮಾತನಾಡಿದ ಈಶ್ವರಪ್ಪ, ನಾನು ಬಾಂಬೆ ಬಾಯ್ಸ್ ಅನ್ನೋ ಪದವೇ ಬಳಸಿಲ್ಲ. ಯಾರು ನಮ್ಮ ಪಾರ್ಟಿಗೆ ಬಂದ್ರೋ ಅವರಿಂದ ನಾನು ಮಂತ್ರಿಯಾದೆ ನಮ್ಮ ಪಕ್ಷ ಅಧಿಕಾರಕ್ಕೆ ಬಂತು. ಹೀಗಾಗಿ ‌ನಾನು ಅವರ ವಿರುದ್ದ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

 

ಬಿಜೆಪಿ ವಿದ್ಯಮಾನದಿಂದ ನೋವು: ವಲಸಿಗರ ಬಗ್ಗೆ ಈಶ್ವರಪ್ಪ ಹೇಳಿಕೆಗೆ ಸದಾನಂದಗೌಡ ಪ್ರತಿಕ್ರಿಯೆ

Latest Videos
Follow Us:
Download App:
  • android
  • ios