Asianet Suvarna News Asianet Suvarna News

ಖುದ್ದು ಭೇಟಿ ಮಾಡಿ ಜೆಡಿಎಸ್ ನಾಯಕನನ್ನು ಕಾಂಗ್ರೆಸ್‌ಗೆ ಆಹ್ವಾಸಿದ ಕಾರ್ಯಾಧ್ಯಕ್ಷ

ಖುದ್ದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಜೆಡಿಎಸ್ ಮುಖಂಡರೊಬ್ಬರನ್ನು ಕಾಂಗ್ರೆಸ್‌ಗೆ ಸೆಳೆಯಲು ಬಲೆ ಬೀಸಿದ್ದು, ಬೈ ಎಲೆಕ್ಷನ್‌ ಸಮಯದಲ್ಲಿ ಇದು ಭಾರೀ ಕುತೂಹಲ ಮೂಡಿಸಿದೆ.

KPCC Working President satish-jarkiholi invites JDS Leader ashok poojary-to-congress rbj
Author
Bengaluru, First Published Feb 16, 2021, 3:16 PM IST

ಬೆಳಗಾವಿ, (ಫೆ.16): ಇನ್ನೇನು ಶೀಘ್ರದಲ್ಲೇ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳು ಇವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಬೇರೆ-ಬೇರೆ ಪಕ್ಷಗಳ ನಾಯಕರುಗಳಿಗೆ ಗಾಳ ಹಾಕುವ ಪ್ರಯತ್ನಗಳ ನಡೆದಿವೆ.

ಹೌದು... ಮಹತ್ವದ ಬೆಳವಣಿಗೆಯೊಂದರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಗೋಕಾಕದಲ್ಲಿ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಅಹ್ವಾನ ಮಾಡಿದ್ದಾರೆ.

ಬೆಳಗಾವಿ ಲೋಕಸಭಾ ಉಪಚುನಾವಣೆ ದಿನಾಂಕ ಯಾವುದೇ ಕ್ಷಣದಲ್ಲಿ ಘೋಷಣೆ ಆಗಲಿರುವ ಸಂದರ್ಭದಲ್ಲಿಈ ಭೇಟಿ ಬಹಳ ಮಹತ್ವ ಪಡೆದುಕೊಂಡಿದೆ.

ಬಸವಕಲ್ಯಾಣ, ಮಸ್ಕಿ, ಬೆಳಗಾವಿ ಉಪ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳ ನೇಮಕ

ಅಶೋಕ ಪೂಜಾರಿ ಜೊತೆ ಚರ್ಚೆ ನಡೆಸಿದ ಸತೀಶ ಜಾರಕಿಹೊಳಿ, ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದರು. ಇದಕ್ಕೆ ಸ್ಪಂದಿಸಿದ ಪೂಜಾರಿ ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಕೇಳಿದ್ದಾರಂತೆ

ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷ ಸೇರಲು ಅಶೋಕ ಪೂಜಾರಿ ಸೇರಿದಂತೆ ಗೋಕಾಕದ ಹಲವು ಮುಖಂಡರಿಗೆ ಆಹ್ವಾನ ನೀಡಲಾಗಿದೆ. ನಿರ್ಧಾರ ಅವರಿಗೆ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇನ್ನು ಇದೇ ಸಂದರ್ಭದಲ್ಲಿ ಮನಸ್ಸು ಮಾಡಿದ್ರೆ 24 ಗಂಟೆಗಳಲ್ಲಿ 5 ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸಬಲ್ಲೇ ಅಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ,  ಐದು ಜನ ಶಾಸಕರ ಯಾವಾಗ, ಎಲ್ಲಿ ಬರುತ್ತಾರೆ ಎಂಬುವುದನ್ನು ಅವರನ್ನೇ ಕೇಳಬೇಕು. ರಾಜಕೀಯದಲ್ಲಿ ಹೀಗೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಪಕ್ಷದಲ್ಲಿಯೇ ಸರಿ ಇಲ್ಲ. ಮತ್ಯಾರು ಕಾಂಗ್ರೆಸ್‌ನವರು ಹೋಗುತ್ತಾರೆ ?  ನಮ್ಮಲ್ಲಿ ಯಾವ ಶಾಸಕರು ಬಿಜೆಪಿಗೆ ಹೋಗುವುದಿಲ್ಲ ಎಂದು ಪರೋಕ್ಷವಾಗಿ ಸಚಿವ ರಮೇಶ ಜಾರಕಿಹೊಳಿಗೆ ಟಾಂಗ್ ಕೊಟ್ಟರು.

 ಜಿಲ್ಲಾ ಉಸ್ತುವಾರಿ ಸಚಿವರು ಮೊದಲಿಗೆ 10 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಬರುತ್ತಾರೆ ಎಂದು ಹೇಳಿದ್ದರು. ಆದರೆ ಈಗ ಸದ್ಯ 5ಕ್ಕೆ ಬಂದು ನಿಂತಿದೆ. ಮತ್ತೆ ಈಗ ಅದನ್ನೆ ಹೇಳುತ್ತಿದ್ದಾರೆ. ಯಾವ ಶಾಸಕರು ಅಂt ನೀವೆ ಅವರನ್ನು ಕೇಳಿ ಎಂದರು. ಯಾರು ಎಂಬುವುದನ್ನು ಅವರೇ ಬಹಿರಂಗ ಪಡಿಸಬೇಕು ಎಂದರು.

Follow Us:
Download App:
  • android
  • ios