ಬೀದರ್[ನ. 15]  ಉಪಚುನಾವಣೆ ಬಳಿಕ ರಾಜ್ಯದಲ್ಲಿ ಏನುಬೇಕಾದರೂ ಆಗಬಹುದು ಎಂದು  ಭಾಲ್ಕಿಯಲ್ಲಿ KPCC ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ಪ್ರಜಾಪ್ರಭುತ್ವ ಕೊಲೆ ಮಾಡುವ ಕೆಲಸ ಮಾಡುತ್ತಿದೆ. ವೈಯಕ್ತಿಕ ದ್ವೇಷ ಸಾಧಿಸುವ ಕೆಲಸ ಮಾಡುತ್ತಿದೆ ಎಂದು ಕೇಸರಿ ಪಡೆ ವಿರುದ್ಧ ಕಾಂಗ್ರೆಸ್ ನಾಯಕ ಆಕ್ರೋಶ ಹೊರಹಾಕಿದರು.

ಮೈತ್ರಿ ಪಕ್ಷಗಳಿಂದ ಕಾರ್ಯಕ್ರಮಗಳು ರಾಜ್ಯಕ್ಕೆ ಮಾರಕವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ವಿರೋಧಿ ಅಲೆ ಇದೆ. ಯಾರೆಲ್ಲಾ ಪಕ್ಷಾಂತರಗೊಂಡಿದ್ದಾರೆ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ. ಇದಕ್ಕೆ ಒಳ್ಳೆಯ ಉದಾಹರಣೆ ಮಹರಾಷ್ಟ್ರ, ಗುಜರಾತ್‌, ಹರಿಯಾಣ ಎಂದು ತುಲನೆ ಮಾಡಿ ಜನ ಪಕ್ಷಾಂತರಿಗಳನ್ನು ಸಹಿಸಿಕೊಳ್ಳಲ್ಲ ಎಂದರು.

ವೀರ ಸಾವರ್ಕರ್ ಗೆ ಭಾರತ ರತ್ನ‌ ನೀಡಿಕೆ ವಿಚಾರದ ಬಗ್ಗೆಯೂ ಮಾತನಾಡಿದ ಖಂಡ್ರೆ, NCP, ಶಿವಸೇನಾ, ಕಾಂಗ್ರೆಸ್ ತನ್ನದೇ ಆದ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮೂರು ಪಕ್ಷ ಕುಳಿತು ಯಾವ ರೀತಿ ಚರ್ಚೆಯಾಗಿದೆ ಗೊತ್ತಿಲ್ಲ.  ಸಾವರ್ಕರ್ ಅವರಿಗೆ ಭಾರತರತ್ನ ಕೊಟ್ಟರು ಕೋಡಬಹುದು..! ಎಂದರು.

ಮಹಾರಾಷ್ಟ್ರದಲ್ಲಿ ಅತಂತ್ರ ರಾಜಕೀಯವಾಗಿದೆ. ಆಡಳಿತವಿಲ್ಲ ಅಲ್ಲಿ ಶೂನ್ಯವಾದ ಆಡಳಿತವಿದೆ. ಆಪರೇಷನ್ ಕಮಲದಿಂದ ರಾಜ್ಯದಲ್ಲಿ ರಾಜಕೀಯ ಹದಗೆಟ್ಟಿದೆ ಎಂದು ವಿಶ್ಲೇಷಣೆ ಮಾಡಿದರು.