Asianet Suvarna News Asianet Suvarna News

ಮೊಬೈಲ್ ಸ್ವಿಚ್ ಆಫ್‌ ಆಗಿದ್ದರಿಂದಲೇ ಮೈಸೂರು ಮೇಯರ್ ಜೆಡಿಎಸ್‌ ಪಾಲಾಯ್ತು..

ಮೈಸೂರು ಪಾಲಿಕೆ ಮೇಯರ್ ಚುನಾವಣೆ ಸಂಬಂಧ ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಇನ್ನು ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ವಾಸ್ತವಾಂಶ ಹೇಳಿದ್ದಾರೆ.

KPCC Working President Dhruvanarayana Gives clarifications about Mysuru Mayor Poll
Author
Bengaluru, First Published Feb 27, 2021, 7:56 PM IST

ಚಾಮರಾಜನಗರ,( ಫೆ.27): ಮೈಸೂರು ಪಾಲಿಕೆ ಮೇಯರ್ ಸ್ಥಾನ ಜೆಡಿಎಸ್‌ ಪಾಲಾಗಿರುವುದಕ್ಕೆ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಜೆಡಿಎಸ್‌ ಅಭ್ಯರ್ಥಿ ಮೇಯರ್ ಆಗಿದ್ದೇಗೆ ಎನ್ನುವ ಪ್ರಶ್ನೆ ಕಾಂಗ್ರೆಸ್‌ ನಾಯಕರಲ್ಲಿ ಕಾಡುತ್ತಿದೆ.

ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧ್ರುವನಾರಾಯಣ್ ಅವರು ಹೇಳಿರುವಂತೆ ಜೆಡಿಎಸ್‌ ಶಾಸಕರೊಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದ್ದೇ ಮೇಯರ್ ಹುದ್ದೆ ಜೆಡಿಎಸ್‌ ಪಾಲಾಗಿದೆ.

ಹೌದು ಈ ಬಗ್ಗೆ ಚಾಮರಾಜನಗರದಲ್ಲಿ  ಇಂದು (ಶನಿವಾರ) ನಡೆದ ಅಭಿನಂದನಾ ಸಮಾರಂಭ  ಮಾತಾನಾಡಿದ ಧ್ರುವನಾರಾಯಣ್, ಮೈಸೂರು ಮೇಯರ್ ಚುನಾವಣೆಯಲ್ಲಿ ಸ್ವಲ್ಪಗೊಂದಲ ಆಗಿದೆ. ಇದು ನಮ್ಮ ಮನೆಯಲ್ಲಿ ಆಗಿರುವ ಸಣ್ಣ ಪುಟ್ಟ ವ್ಯತ್ಯಾಸ. ಅದನ್ನು ಬಹಳ ಗಂಬೀರವಾಗಿ ಪರಿಗಣಿಸಿ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದರು.

ಮೈಸೂರು ಮೇಯರ್ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ಯಾರು? ಸ್ಫೋಟಕ ಮಾಹಿತಿಕೊಟ್ಟ ಸಿದ್ದು ಪುತ್ರ

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮೇಯರ್ ಹುದ್ದೆಯನ್ನು ನಾವೇ ಪಡೆದುಕೊಳ್ಳಬೇಕೆಂದು ಹೇಳಿದ್ದರು. ಅಷ್ಟು ಮಾತ್ರವಲ್ಲದೆ ,ಅಯೂಬ್ ಖಾನ್ ಕಚೇರಿಯಲ್ಲಿ ಜೆಡಿಎಸ್ ಪಕ್ಷದವರೊಂದಿಗೆ ಸಭೆ ನಡೆಸಲಾಯಿತು. ಈ ಬಾರಿ ನಮಗೆ ಮೇಯರ್ ಬಿಟ್ಟುಕೊಡುವಂತೆ ಮನವಿ ಮಾಡಿಕೊಂಡಿದ್ದೆ ಎಂದು ಹೇಳಿದರು. 

ಈ ಬಗ್ಗೆ ನಗರ ಜೆಡಿಎಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದೆ. ಫಲಿತಾಂಶದ ಮುನ್ನ ದಿನ, 11.30ಕ್ಕೆ ಸಿದ್ದರಾಮಯ್ಯ ಕಾಲ್ ಮಾಡಿದರು. ಯಾವುದೇ ಕಾರಣಕ್ಕೂ ಮೇಯರ್ ಸ್ಥಾನ ಬಿಡದಂತೆ ಹೇಳಿದ್ದರು. 12 ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ಮಾಡಿ, ಜೆಡಿಎಸ್ ನವರು ಮೇಯರ್ ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ ಎಂದರು ಈ ವಿಷಯ ತಿಳಿದು ಬಹಳ ಖುಷಿಯಾಗಿತ್ತು‌ ಎಂದು ಧ್ರುವನಾರಾಯಣ್ ವಿವರಿಸಿದರು.

ಡಿಕೆಶಿ ಸಿದ್ದರಾಮಯ್ಯ ಹೇಳಿದಂತೆ ನಾನು ವೀಕ್ಷಕನಾಗಿ ಕೆಲಸ ಮಾಡಿದ್ದೇನೆ: ಧ್ರುವ ನಾರಾಯಣ್

ಜೆಡಿಎಸ್ ನವರಿಗೆ ಮೆಸೇಜ್ ತಲುಪಿಸಿ ಎಂದೇ. ಜೆಡಿಎಸ್ ನವರು ನಮಗೆ ಮೆಸೇಜ್ ಬಂದಿಲ್ಲ ಅಂದರು. ಈ ಬಗ್ಗೆ ತಕ್ಷಣ ನಾನು ಡಿ.ಕೆ.ಶಿವಕುಮಾರ್ ಗೆ ಕರೆ ಮಾಡಿ ತಿಳಿಸಿದೆ. ಡಿ.ಕೆ.ಶಿವಕುಮಾರ್ ಸಾ.ರಾ. ಮಹೇಶ್ ಗೆ ಕರೆ ಮಾಡಿದ್ದಾರೆ. ಆ ಸಂಧರ್ಭದಲ್ಲಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದೇ ಸಂದರ್ಭದಲ್ಲಿ ತನ್ವೀರ್ ಸೇಠ್ ಮುಖಾಂತರ ಪಾಲಿಕೆ ಸದಸ್ಯರು ತೆಗೆದುಕೊಂಡ ನಿರ್ಧಾರದಿಂದ ಸ್ವಲ್ಪ ಗೊಂದಲ ಆಗಿದೆ ಎಂದು ಸ್ಪಷ್ಟಪಡಿಸಿದರು.

ಒಂದು ವೇಳೆ ಜೆಡಿಎಸ್ ಶಾಸಕ ಸಾರಾ ಮಹೇಶ್ ಅವರು ಬೇಕಂತಲೇ ಫೋನ್ ಸ್ವಿಚ್ ಮಾಡಿದ್ರೋ..? ಅಥವಾ ನಿಜವಾಗಿ ಸ್ವಿಚ್ ಆಫ್ ಆಗಿತ್ತೋ..? ಒಂದು ವೇಳೆ ಸಾರಾ ಮಹೇಶ್ ಫೋನ್ ಸ್ವಿಚ್ ಆಫ್ ಆಗದಿದ್ದರೇ ಕಾಂಗ್ರೆಸ್‌ ಅಭ್ಯರ್ಥಿ ಮೇಯರ್ ಆಗ್ತಿದ್ರಾ ಅಂತ. 

Follow Us:
Download App:
  • android
  • ios