Asianet Suvarna News Asianet Suvarna News

ಅಮಿತ್ ಶಾ ಬೆದರಿಕೆಗೆ ಹೆದರಿದ ಕುಮಾರಸ್ವಾಮಿ ಪಾದಯಾತ್ರೆಯಲ್ಲಿ ಭಾಗಿ: ಭಂಡಾರಿ

ಪೆನ್ ಡ್ರೈವ್ ಪ್ರಕರಣದಲ್ಲಿ ತಮ್ಮ ಕುಟುಂಬದ ಸರ್ವನಾಶ ಮಾಡಿದವರ ಜತೆ ನಾವು ಪಾದಯಾತ್ರೆ ಹೋಗಬೇಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು. ಆದರೆ ಸಚಿವ ಸ್ಥಾನ ಕಿತ್ತುಕೊಳ್ಳುವುದಾಗಿ ಅಮಿತ್ ಶಾ ಬೆದರಿಕೆ ಹಾಕಿದ್ದರಿಂದ ಬೆಳಗಾಗುವುದರೊಳಗೆ ನಿಲುವು ಬದಲಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಇಂತಹವರನ್ನು ನಂಬುವುದು ಹೇಗೆ? ಎಂದು ಕಿಡಿ ಕಾರಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ 

kpcc spokesperson manjunath bhandari slams union minister hd kumaraswamy grg
Author
First Published Aug 6, 2024, 6:00 AM IST | Last Updated Aug 6, 2024, 9:39 AM IST

ಬೆಂಗಳೂರು(ಆ.06):  'ಕೇಂದ್ರ ಸಚಿವ ಸ್ಥಾನ ಕಿತ್ತುಕೊಳ್ಳುವುದಾಗಿ ಅಮಿತ್ ಶಾ ಅವರು ಬೆದರಿಕೆ ಹಾಕಿದ್ದರಿಂದ ಎಚ್.ಡಿ. ಕುಮಾರಸ್ವಾಮಿ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಟೀಕಿಸಿದ್ದಾರೆ.

ಪೆನ್ ಡ್ರೈವ್ ಪ್ರಕರಣದಲ್ಲಿ ತಮ್ಮ ಕುಟುಂಬದ ಸರ್ವನಾಶ ಮಾಡಿದವರ ಜತೆ ನಾವು ಪಾದಯಾತ್ರೆ ಹೋಗಬೇಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು. ಆದರೆ ಸಚಿವ ಸ್ಥಾನ ಕಿತ್ತುಕೊಳ್ಳುವುದಾಗಿ ಅಮಿತ್ ಶಾ ಬೆದರಿಕೆ ಹಾಕಿದ್ದರಿಂದ ಬೆಳಗಾಗುವುದರೊಳಗೆ ನಿಲುವು ಬದಲಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಇಂತಹವರನ್ನು ನಂಬುವುದು ಹೇಗೆ? ಎಂದು ಕಿಡಿ ಕಾರಿದರು. ಬಿಜೆಪಿ-ಜೆಡಿಎಸ್‌ನ ಮೈಸೂರು ಚಲೋ ಪಾದಯಾತ್ರೆ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, 'ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಇಂತಹ ದ್ವಂದ್ವ ನಿಲುವಿನಿಂದಾಗಿಯೇ ಎರಡೂ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ' ಎಂದು ಹೇಳಿದರು.

ಪಾದಯಾತ್ರೆ ಪಾಲಿಟಿಕ್ಸ್ ನಿಂದ ಗೆದ್ದವರಾರು..? ಸೋತವರಾರು?

ಚುನಾವಣೆ ಗೆಲ್ಲುವವರೆಗೆ ಕುಮಾರಸ್ವಾಮಿ ಅವರು ಮೇಕೆದಾಟು ಸಮಸ್ಯೆ ಬಗೆಹರಿಸುತ್ತೇನೆ, ಕಾವೇರಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳುತ್ತಿದ್ದರು. ಇದೀಗ * 'ನಾನೆಲ್ಲಿ ಹೇಳಿದ್ದೆ' ಎನ್ನು ಎನ್ನುತ್ತಿದ್ದಾರೆ. ಘಳಿಗೆಗೊಂದು ನಾಟಕ ಆಡುವುದು ಅವರ ಪ್ರವೃತ್ತಿ. ಇದೀಗ ಉಪ ಚುನಾವಣೆಯಲ್ಲಿ ಬಿಜೆಪಿ, ಸಿ.ಪಿ. ಯೋಗೇಶ್ವರ್‌ಗೆ ಟೋಪಿ ಹಾಕಲು ಕಾಯುತ್ತಿದ್ದಾರೆ ಎಂದು ಮಂಜುನಾಥ ಭಂಡಾರಿ ದೂರಿದರು. ಯಡಿಯೂರಪ್ಪ ತನ್ನ ಮಗನ ನಾಯಕತ್ವಕ್ಕಾಗಿ ಹೋರಾಡು ತ್ತಿದ್ದರೆ, ಕುಮಾರಸ್ವಾಮಿ ತನ್ನ ಮಗನನ್ನು ನಾಯಕ ಎಂದು ಬಿಂಬಿಸಲು ಹೋರಾಡುತ್ತಿದ್ದಾರೆ. ಮೈಸೂರು ಚಲೋ ಪಾದ ಯಾತ್ರೆಯು ಎರಡೂ ಪಕ್ಷಗಳ ಬಣ್ಣ ಬಯಲು ಮಾಡುತ್ತಿದೆ. ಇವರ ಸ್ವಾರ್ಥದ ನಡುವೆ ಬಡವಾಗುತ್ತಿರುವ ಕಾರ್ಯಕರ್ತರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎಂದರು.

Latest Videos
Follow Us:
Download App:
  • android
  • ios