Asianet Suvarna News Asianet Suvarna News

ಜಮೀರ್ ಮನೆಗೆ ಕೆಪಿಸಿಸಿ ಅಧ್ಯಕ್ಷ: ಇದನ್ನೇ ಮಿತ್ರತ್ವಕ್ಕೆ ಅಸ್ತ್ರ ಮಾಡಿಕೊಂಡ್ರಾ ಡಿಕೆಶಿ?

* ಜಮೀರ್ ಅಹ್ಮದ್ ನಿವಾಸಕ್ಕೆ ಕೆಪಿಸಿಸಿ ಡಿಕೆ ಶಿವಕುಮಾರ್ ಭೇಟಿ
* ಇಡಿ ದಾಳಿ ಬೆನ್ನಲ್ಲೇ  ಜಮೀರ್ ಅಹ್ಮದ್ ಮನೆಗೆ ಭೇಟಿ ಡಿಕೆಶಿ
*ಜಮೀರ್ ಜತೆ ಮಿತ್ರತ್ವ ಸಾಧಿಸಲು ಮುಂದಾದರಾ ಕೆಪಿಸಿಸಿ ಅಧ್ಯಕ್ಷ 

KPCC President DK Shivakumar Visits zameer Ahmed khan house In bengaluru rbj
Author
Bengaluru, First Published Aug 10, 2021, 10:47 PM IST

ಬೆಂಗಳೂರು, (ಆ.10): ನಗರದ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮಿರ್ ಅಹ್ಮದ್ ಖಾನ್ ಅವರ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿದರು.

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು (ಆ.10) ಜಮೀರ್ ಅಹ್ಮದ್ ಮನೆಗೆ ಭೇಟಿ ನೀಡಿದರು.

ಬಿಜೆಪಿ ಆಯ್ತು ಈಗ ಕಾಂಗ್ರೆಸ್ ಸರದಿ, ಜಮೀರ್‌ಗೆ ಖಡಕ್ ಎಚ್ಚರಿಕೆ ಕೊಟ್ಟ ಡಿಕೆಶಿ

 ಜಮೀರ್ ಮನೆಗೆ ಬಂದು ಹೂಗುಚ್ಛ ಕೊಟ್ಟು ಡಿ.ಕೆ. ಶಿವಕುಮಾರ್ ಅಪ್ಪಿಕೊಂಡಿದ್ದಾರೆ. ಅಲ್ಲದೇ ಜಮೀರ್ ಜೊತೆಗೆ ಆಪ್ತ ಸಮಾಲೋಚನೆಯನ್ನೂ ನಡಸಿದ್ದಾರೆ ಎಂದು ತಿಳಿದುಬಂದಿದೆ.

ಇಡಿ ದಾಳಿಯಾದ ಬಳಿಕ ಜಮೀರ್ ಅಹ್ಮದ್ ಖಾನ್ ತಮ್ಮ ಗುರು ಸಿದ್ದರಾಮಯ್ಯನವರನ್ನ ಭೇಟಿಯಾಗಿಲ್ಲ. ಸಿದ್ದರಾಮಯ್ಯ ಸಹ ಜಮೀರ್ ಅಹ್ಮದ್ ಭೇಟಿಯಾಗಿ ಧೈರ್ಯ ಸಹ ಹೇಳಿಲ್ಲ.ಆದ್ರೆ, ಇದೀಗ ದಿಢೀರ್ ಅಂತ ಡಿಕೆ ಶಿವಕುಮಾರ್ ಅವರು ಜಮೀರ್ ನಿವಾಸಕ್ಕೆ ಭೇಟಿ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. 

ಎಚ್ಚರಿಕೆ ಕೊಟ್ಟ ಡಿಕೆ ಶಿವಕುಮಾರ್‌ಗೆ ಜಮೀರ್ ಅಹ್ಮದ್ ಖಾನ್ ಡಿಚ್ಚಿ

ಯಾಕಂದ್ರೆ ಸಿದ್ದರಾಮಯ್ಯನವರ ಶಿಷ್ಯರಾಗಿರುವ ಜಮೀರ್, ಮುಂದಿನ ಮುಖ್ಯಮಂತ್ರಿ ಹೇಳಿಕೆ ಕೊಟ್ಟು ಡಿಕೆಶಿ ಕೆಂಗಣ್ಣಿಗೆ ಗುರಿಯಾದ್ದರು. ಅಲ್ಲದೇ ಈ ಬಗ್ಗೆ ಡಿಕೆಶಿ, ಜಮೀರ್ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿ, ಶೋಕಾಸ್ ನೋಟಿಸ್ ಕೊಡಿಸಿದ್ದರು. ಇದಾದ ಬಳಿಕ ಇಬ್ಬರು ನಡುವೆ ಮುಸುಕಿನ ಗುದ್ದಾಟ ಶುರುವಾಗಿತ್ತು.

ಈಗ ಡಿಕೆಶಿ ಅದನೆಲ್ಲಾ ಮರೆತು ಇ.ಡಿ. ಕೇಸನ್ನೇ ಬಳಸಿಕೊಂಡು ಜಮೀರ್ ಜತೆ ಮಿತ್ರತ್ವ ಸಾಧಿಸಲು ಮುಂದಾದರಾ ಎಂಬ ಚರ್ಚೆ ಶುರುವಾಗಿದೆ.

ಅಲ್ಲದೇ ಇತ್ತ ಸಿದ್ದರಾಮಯ್ಯ ಇಡಿ ದಾಳಿ ನಂತರ ಜಮೀರ್​ರಿಂದ ಅಂತರ ಕಾಯ್ದುಕೊಂಡ ಬೆನ್ನಲ್ಲೇ ಇತ್ತ ಡಿ.ಕೆ. ಶಿವಕುಮಾರ್​ ಹತ್ತಿರವಾಗಲು ಮನೆಗೇ ಬಂದಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
 

Follow Us:
Download App:
  • android
  • ios