ತುಮಕೂರು, (ಜುಲೈ.05): ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿ ಕಾಡಸಿದ್ದೇಶ್ವರ ಮಠಕ್ಕೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶನಿವಾರ ಭೇಟಿ ನೀಡಿದ್ದು, ಕಾಡಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. 

ಈ ವೇಳೆ ಡಾ.ಶ್ರೀಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಯವರನ್ನು ಭೇಟಿ ಮಾಡಿದ ಅವರು, ಆಶೀರ್ವಾದ ಪಡೆದುಕೊಂಡರು. 

ಡಿಕೆಶಿ ಪಟ್ಟಾಭಿಷೇಕ ನೇರ ಪ್ರಸಾರ ನೋಡಿದವ್ರು 56 ಲಕ್ಷ ಜನ

ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಶ್ರೀಮಠಕ್ಕೆ ಭೇಟಿ ನೀಡಿದ ಡಿಕೆಶಿ, ಪಕ್ಷದ ಸಂಘಟನೆ ಮತ್ತು ಪಕ್ಷವನ್ನು ಹೇಗೆ ಅಧಿಕಾರಕ್ಕೆ ತರಬೇಕೆಂಬುದರ ಬಗ್ಗೆ ಶ್ರೀಗಳಿಂದ ಸಲಹೆ, ಮಾರ್ಗದರ್ಶನ ಪಡೆದುಕೊಂಡರು. 

ಇದೇ ಜುಲೈ 2ರಂದು ಕೆಪಿಸಿಸಿ ನೂತನ ಸಾರಥಿಯಾಗಿ ಡಿಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ್ದು, ವಿಶ್ವದಾಖಲೆಯ ಹಾಗೂ ಇಡೀ ರಾಷ್ಟ್ರವೇ ತಿರುಗಿ ನೋಡುವಂತಹ ವರ್ಚುಯಲ್ ರ್ಯಾಲಿ ಮೂಲಕ ಡಿಕೆಶಿ ಪಟ್ಟಾಭಿಷೇಕ ನಡೆದಿತ್ತು.