Asianet Suvarna News Asianet Suvarna News

ಎಲ್ಲಾ ಕೈ ಶಾಸಕರನ್ನು ಬಿಜೆಪಿಗೆ ಕರೆಸಿಕೊಳ್ಳಿ : ಡಿ.ಕೆ ಶಿವಕುಮಾರ್

ಎಲ್ಲಾ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆಯಾಗಲಿ ಹೀಗೆಂದು ಡಿಕೆ ಶಿವಕುಮಾರ್ ಹೇಳಿದ್ದಾರೆ

KPCC President DK Shivakumar Taunt To Laxman Savadi snr
Author
Bengaluru, First Published Oct 25, 2020, 7:00 AM IST

ಬೆಂಗಳೂರು(ಅ.25):  ‘ಐವರು ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಬರಲು ಸಿದ್ದರಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಐವರಷ್ಟೇ ಏಕೆ ಒಬ್ಬರನ್ನೂ ಬಿಡೋದು ಬೇಡ ಎಲ್ಲರನ್ನೂ ಕರೆದುಕೊಳ್ಳಲು ಹೇಳಿ’ ಎಂದು ಲೇವಡಿ ಮಾಡಿದ್ದಾರೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ವಿವಿಧ ವಾರ್ಡುಗಳಲ್ಲಿ ಶುಕ್ರವಾರ ತಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಪ್ರಚಾರ ಸಭೆ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ನ ಐವರು ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರಲ್ಲಾ’ ಎಂಬ ಪ್ರಶ್ನೆಗೆ, ‘ಅವರಿಗೆ ಹೇಳಿ ತಡ ಮಾಡಲು ಹೋಗಬೇಡಿ. 

ಜಾತಿಗಳನ್ನ ಒಡೆದು ಆಳಿದ್ರೆ ಡಿಕೆಶಿ ಸಿಎಂ ಆಗ್ತಾರಾ..? ಸಖತ್ ಟಾಂಗ್ ಕೊಟ್ಟ ಮುನಿರತ್ನ ...

ಯಾರಾರ‍ಯರು ಬರುತ್ತಾರೋ ಅವರೆಲ್ಲರನ್ನೂ ಬೇಗ ಕರೆದುಕೊಂಡು ಹೋಗಲು ಹೇಳಿ. 5 ಜನ ಅಷ್ಟೇ ಅಲ್ಲ ಕಾಂಗ್ರೆಸ್‌ನಲ್ಲಿ ಒಬ್ಬರನ್ನೂ ಬಿಡುವುದು ಬೇಡ ಎಲ್ಲರನ್ನೂ ಕರೆದುಕೊಳ್ಳಲು ಹೇಳಿ’ ಎಂದರು.

Follow Us:
Download App:
  • android
  • ios