ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮೈತ್ರಿ ಸರ್ಕಾರ : ಡಿ.ಕೆ.ಶಿವಕುಮಾರ್
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅವರ ಹೇಳಿಕೆ ಹಿಂದಿನ ವಿಚಾರವೇನು..?
ಮೈಸೂರು (ಜ.26): ‘ಇದು ಕಾಂಗ್ರೆಸ್- ಬಿಜೆಪಿ ಮೈತ್ರಿ ಸರ್ಕಾರ. ನಮ್ಮ ಸದಸ್ಯರನ್ನು ಕರೆದುಕೊಂಡು ಹೋಗಿ ಸರ್ಕಾರ ರಚಿಸಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರವಲ್ಲ. ಕಾಂಗ್ರೆಸ್- ಬಿಜೆಪಿ ಸರ್ಕಾರ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಸೋಮವಾರ ನಗರದಲ್ಲಿ ಮಾತನಾಡಿದ ಅವರು, ನಮ್ಮವರನ್ನು ಕರೆದುಕೊಂಡು ಹೋಗಿ ಗಿಫ್ಟ್ ಕೊಟ್ಟಿದ್ದಾರೆ.
'ಈ ಸರ್ಕಾರ ಬಲಿಷ್ಠವಾಗಿದೆ, ಎಲ್ಲರೂ ಒಗ್ಗಟ್ಟಾಗಿದ್ದಾರೆ'
ರಾಜ್ಯ ಸರ್ಕಾರ ಸುಭದ್ರವಾಗಿದೆ. ಎಲ್ಲರೂ ಅತ್ಯಂತ ಒಗ್ಗಟ್ಟಿನಿಂದ ಸಹಕಾರ ಕೊಡುತ್ತಿದ್ದಾರೆ ಎಂದು ಕುಟುಕಿದರು. ಈ ಸರ್ಕಾರ ಬಲಿಷ್ಠವಾಗಿದೆ. ಸರ್ಕಾರಕ್ಕೆ ಬಹಳಷ್ಟುಸಂಖ್ಯಾ ಬಲವಿದೆ. ಸರ್ಕಾರದಲ್ಲಿರುವವರು ಎಲ್ಲರೂ ತುಂಬಾ ಒಗ್ಗಟ್ಟಾಗಿದ್ದಾರೆ. ಸರ್ಕಾರದಲ್ಲಿ ಏನೂ ಗೊಂದಲವಿಲ್ಲ.
ಇನ್ನು ಮುಖ್ಯಮಂತ್ರಿಗಳೋ ಬಹಳ ದೊಡ್ಡವರು ಎನ್ನುವ ಮೂಲಕ ಸರ್ಕಾರದ ಸಂಪುಟ ಪುನರಚನೆ ಹಾಗೂ ಖಾತೆ ಹಂಚಿಕೆ ಗೊಂದಲದ ಬಗ್ಗೆ ಲೇವಡಿ ಮಾಡಿದರು.