ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಮತ್ತು ದೆಹಲಿಯಲ್ಲಿ ಮೋದಿ ಮಂತ್ರ ನಡೆಯಲಿಲ್ಲ. ಕರ್ನಾಟಕವೇ ಬೇರೆ, ಉಳಿದ ರಾಜ್ಯಗಳೇ ಬೇರೆ. ನಮ್ಮಲ್ಲಿ ಪಕ್ಷದಲ್ಲಿ ಹಲವು ನಾಯಕರಿದ್ದಾರೆ ಎಂದ ಡಿ.ಕೆ.ಶಿವಕುಮಾರ್
ನವದೆಹಲಿ(ಡಿ.13): ರಾಜ್ಯದಲ್ಲಿ ಎಲ್ಲ ನಾಯಕರು ಒಂದಾಗಿ ಪ್ರಚಾರ ಮಾಡುತ್ತೇವೆ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸ್ಪಷ್ಟ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ದೆಹಲಿಯಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಮತ್ತು ದೆಹಲಿಯಲ್ಲಿ ಮೋದಿ ಮಂತ್ರ ನಡೆಯಲಿಲ್ಲ. ಕರ್ನಾಟಕವೇ ಬೇರೆ, ಉಳಿದ ರಾಜ್ಯಗಳೇ ಬೇರೆ. ನಮ್ಮಲ್ಲಿ ಪಕ್ಷದಲ್ಲಿ ಹಲವು ನಾಯಕರಿದ್ದಾರೆ ಎಂದರು.
ಇದೇ ವೇಳೆ, ಖರ್ಗೆ ಅವರಿಗೆ ಚುನಾವಣೆ ಮಾಡಿ ಸಾಕಷ್ಟು ಅನುಭವವಿದೆ. ರಾಜ್ಯದ ಪ್ರತೀ ಕ್ಷೇತ್ರ, ನಾಯಕರು ಅವರಿಗೆ ಗೊತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂಬ ಗುರಿ ಅವರಿಗಿದೆ. ಭಾರತ್ ಜೋಡೋ ರೀತಿಯಲ್ಲಿ ಪ್ರತಿಬೂತ್‌ನಲ್ಲಿ ರಾರಯಲಿ ಮಾಡುತ್ತೇವೆ. ಎಲ್ಲ ನಾಯಕರು ಒಟ್ಟಾಗಿ ಪ್ರಚಾರ ಮಾಡುತ್ತೇವೆ ಎಂದರು.
ಸಿದ್ದು, ಡಿಕೆಶಿ ಪ್ರತ್ಯೇಕ ಎಲೆಕ್ಷನ್ ಬಸ್ ಯಾತ್ರೆಗೆ ಖರ್ಗೆ ಬ್ರೇಕ್!
ಅಶೋಕ್‌ಗೆ ತಿರುಗೇಟು:
ಕಾಂಗ್ರೆಸ್‌ನ ಹಲವು ಮುಖಂಡರು ಬಿಜೆಪಿ ಸೇರಲಿದ್ದಾರೆಂಬ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ಕುರಿತು ವ್ಯಂಗ್ಯವಾಡಿದ ಅವರು, ಅವರು ವಿಳಂಬ ಮಾಡಬಾರದು. ಇಂದೋ, ನಾಳೆಯೋ ಈ ಕೆಲಸ ಮಾಡಿಬಿಡಲಿ. ಒಬ್ಬರು ಖಾಲಿಯಾದರೆ ಇನ್ನೊಬ್ಬರು ಪಕ್ಷಕ್ಕೆ ಬರುತ್ತಾರೆ. ಆದರೆ ನಾನು ಅಶೋಕ್ ರೀತಿ ಹೇಳಲ್ಲ, ಮುಂದೆ ನಾವು ಅವರಿಗೆ ಅಚ್ಚರಿ ಕೊಡಲಿದ್ದೇವೆ ನೋಡುತ್ತಿರಿ ಎಂದರು.
