ಸಾಹುಕಾರ್‌ಗಳೆಲ್ಲ ಭಿಕ್ಷುಕ ಆಗುತ್ತಿದ್ದಾರೆ; ರಮೇಶ್ ಜಾರಕಿಹೊಳಿಗೆ ಡಿಕೆಶಿ ಪರೋಕ್ಷ ಟಾಂಗ್!

* ತಮ್ಮ ರಾಜಕೀಯ ಬದ್ಧವೈರಿ ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೆ ಸಿಡಿದೆದ್ದ ಡಿಕೆಶಿ 

* ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೈಗೆ ಸಿಕ್ಕಿತು ಮತ್ತೊಂದು ಹೊಸ ಅಸ್ತ್ರ 

* ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾದ ಕಾಂಗ್ರೆಸ್

KPCC President   DK Shivakumar Mocks at Ramesh Jarkiholi pod

ಬೆಳಗಾವಿ(ಮೇ.08): ತಮ್ಮ ರಾಜಕೀಯ ಬದ್ಧವೈರಿ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೆ ಸಿಡಿದೆದ್ದಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೊಂದು ಅಸ್ತ್ರ ಡಿಕೆಶಿಗೆ ಸಿಕ್ಕಿದ್ದು ಮತ್ತೊಂದು ಸುತ್ತಿನ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದರು. 

ನೀರವ್ ಮೋದಿ, ವಿಜಯ್ ಮಲ್ಯ, ಮೇಕುಲ್ ಚೋಕ್ಸಿ ಪ್ರಕರಣದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಮಾಲೀಕತ್ವದ ಸಕ್ಕರೆ ಕಾರ್ಖಾನೆ 660 ಕೋಟಿ ಸಾಲ ಪಡೆದಿದ್ದು ರಾಜ್ಯ ಸರ್ಕಾರದಿಂದ ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಈ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,‌ 'ಸಾಹುಕಾರ್ ಭಿಕ್ಷುಕ ಆಗುತ್ತಿದ್ದಾರೆ ಅದಕ್ಕೆ ಸಿಎಂ, ಗೃಹಸಚಿವರು ಉತ್ತರಿಸಲಿ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ‌. 

ಸಾಹುಕಾರ್‌ಗಳೆಲ್ಲ ಪಾಪರ್‌ಗಳಾಗುತ್ತಿದ್ದಾರೆ. ನಮ್ಮನ್ನೆಲ್ಲ ಪಾಪರ್ ಮಾಡಿಕೊಳ್ಳಿ ಅಂತಾ ಮ್ಯಾಚ್ ಫಿಕ್ಸಿಂಗ್ ನಡೀತಿದೆ.‌ ಯಾರೂ ಕೇಳುವರಿಲ್ಲ ಮಾಡೋರಿಲ್ಲ.‌ ಸಿಎಂ, ಸಹಕಾರ ಸಚಿವರು ಏನು ಮಾಡುತ್ತಿದ್ದಾರೆ? ಬಿಡಿಸಿಸಿ ಬ್ಯಾಂಕ್‌ಗೆ 300 ಕೋಟಿನೋ 600 ಕೋಟಿನೋ ಅದು ಎಷ್ಟು ಬರಬೇಕು ಗೊತ್ತಿಲ್ಲ. ದಿನಪತ್ರಿಕೆಯಲ್ಲಿ ಬಂದಿದ್ದ ಜಾಹೀರಾತು ನಾನು ನೋಡಿದೆ.‌ ನಮ್ಮ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ದಾಖಲೆ ಕಳಿಸೋದಾಗಿ ಹೇಳಿದ್ದಾರೆ. ನೋಡ್ತೀನಿ ಜಿಲ್ಲಾಧಿಕಾರಿ ಏನು ಮಾಡ್ತಾರೆ.‌ ನಾನು ಫಸ್ಟ್ ಆ ಪಾಪರ್ ಸಾಹುಕಾರ್ ಭಿಕ್ಷುಕ ಆಗಿದ್ದನ್ನ ಫಸ್ಟ್ ಸೋಮಶೇಖರ್, ಸಿಎಂ ಉತ್ತರ ಕೊಡಲಿ ಆಮೇಲೆ ನಾನು ಮಾತನಾಡ್ತೀನಿ. ನೀವೆಲ್ಲ ಸಾಹುಕಾರ್ ಅಂತಿದ್ರಿ, ಈಗ ಪೇಪರ್‌ನಲ್ಲಿ ಅದ್ಯಾವುದೋ ಫ್ಯಾಕ್ಟರಿ ಬಗ್ಗೆ ಜಾಹೀರಾತು ಕೊಟ್ಟಿದ್ದಾರೆ.‌ ಸಿಎಂ ಹಾಗೂ ಗೃಹಸಚಿವರು ಅದಕ್ಕೆ ಉತ್ತರ ಕೊಡಲಿ ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಅಪೆಕ್ಸ್ ಬ್ಯಾಂಕ್ ನವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 600 ಕೋಟಿಗೂ ಅಧಿಕ ಹಣ ಬ್ಯಾಂಕ್‌ಗೆ ಬೆಳಗಾವಿ ಜಿಲ್ಲೆಯ ಮಾಜಿ ಮಂತ್ರಿ ಕಟ್ಟಬೇಕು. ಡಿಸಿಗೆ ಪತ್ರ ಬರೆದು ಎರಡು ವರ್ಷ ಆದ್ರೂ ಏನೂ ಕ್ರಮ ಕೈಗೊಂಡಿಲ್ಲ. ರೈತರಿಗೆ ಐವತ್ತು ಕೋಟಿ ರೂಪಾಯಿ ಕೊಡಬೇಕು. ಇದನ್ನ ಕೊಡಿಸುವುದು ಜಿಲ್ಲಾಡಳಿತದ ಕರ್ತವ್ಯ.‌ ಅವರಿಗೆ ರಕ್ಷಣೆ ಮಾಡಿಕೊಂಡು ಮುಖ್ಯಮಂತ್ರಿಗಳು ಅವರ ಬೆನ್ನಿಗೆ ನಿಂತಿದ್ದಾರೆ. ಮುಖ್ಯಮಂತ್ರಿಗೆ ಗೊತ್ತಿದ್ದರೂ ಕೂಡ ಅವರು ಏನೂ ಮಾಡಿಲ್ಲ.‌ ಸಹಕಾರಿ ಸಚಿವರು ಎನೂ ಮಾಡಿದ್ದಾರೆ, ಏನೂ ಕ್ರಮ ಕೈಗೊಂಡಿದ್ದಾರೆ.‌ಅಪೆಕ್ಸ್ ಬ್ಯಾಂಕ್ ನಿಂದ ಒಂದು ಖಾತೆ ಬರೆಯಿಸಿಬಿಟ್ಟು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಒಂದು ಸಣ್ಣ ಸೊಸೈಟಿಯಲ್ಲಿ ಇಪ್ಪತ್ತು ಕೋಟಿ ದಿವಾಳಿ ಅಂತಾ ಹಾಕಿಕೊಂಡು ಕುಳಿತಿದ್ದಾರೆ. 

ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಬೇನಾಮಿ ಹೆಸರಲ್ಲಿ ಇಸ್ಕೊಂಡು ಈಗ ಇವರೇ ಕಾರ್ಖಾನೆ ನಡೆಸುವ ಕೆಲಸ ಆಗುತ್ತಿದೆ.ಕೂಡಲೇ ಮುಖ್ಯಮಂತ್ರಿ ಮತ್ತು ಸಹಕಾರಿ ಸಚಿವರು ಇದಕ್ಕೆ ಉತ್ತರ ಕೊಡಬೇಕು. ಕೇಂದ್ರ ಸಚಿವರಿಗೂ ಈ ವಿಚಾರವನ್ನ ತಿಳಿಸಬೇಕು. ಹಣ ವಸೂಲಿ ಮಾಡಿಕೊಳ್ಳಲು ಆಸ್ತಿ ಪಾಸ್ತಿ ಜಪ್ತಿ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ರಕ್ಷಣೆ ಕೊಟ್ಟ ಅಧಿಕಾರಿಗಳನ್ನ ಕೂಡಲೇ ಅಮಾನತು ಮಾಡಬೇಕು.‌ ಸೌಭಾಗ್ಯ ಲಕ್ಷ್ಮೀ ಕಾರ್ಖಾನೆಯವರೇ ಕೇಳಿಕೊಂಡಿದ್ದಾರೆ. 

ನಾವು ದಿವಾಳಿಯಾಗಿದ್ದೇವೆ, ಬರ್ಬಾದ್ ಆಗಿದ್ದೇವೆ, ನಾವು ಭಿಕ್ಷುಕರಾಗಿದ್ದೇವೆ ಅಂತಾ ಅವರೇ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ‌ ಹೆಸರು ಹೇಳದೇ ಸಾಹುಕಾರ್ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ. ರೈತರ ಹಣ ಸಿಗಬೇಕು, ಬ್ಯಾಂಕ್ ಗೆ ಹಣ ಸಿಗಬೇಕು‌, ಟ್ಯಾಕ್ಸ್ ಕಟ್ಟಬೇಕು.ಮಂಗಳೂರು, ತುಮಕೂರು, ವಿಜಯಪುರ ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಎಲ್ಲಾ ವಸೂಲಿ ಆಗಬೇಕು. ಮುಖ್ಯಮಂತ್ರಿಗಳು, ಸಹಕಾರಿ ಸಚಿವರು ರಕ್ಷಣೆ ಕೊಟ್ರೇ ನಮ್ಮ ಹೋರಾಟ ಏನಿದೆ ತಿಳಿಸುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios