* ಮೇಕುದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ* ಕಾಂಗ್ರೆಸ್ ಪಾದಾಯತ್ರೆ ವ್ಯಂಗ್ಯವಾಡಿದ ಕುಮಾರಸ್ವಾಮಿ*ಕುಮಾರಸ್ವಾಮಿ ತಿರುಗೇಟು ಕೊಟ್ಟ ಕುಮಾರಸ್ವಾಮಿ

ಬೆಂಗಳೂರು, (ಡಿ.29): ಕೆಪಿಸಿಸಿ​ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ(HD Kumaraswamy) ನಡುವಿನ ವಾಕ್ಸಮರ ಮುಂದುವರೆದಿದೆ.

ಹೌದು...ಇಷ್ಟು ದಿನ ಸಿದ್ದರಾಮಯ್ಯನನವರ ವಿರುದ್ಧ ಗುಡುಗುತ್ತಿದ್ದ ಕುಮಾರಸ್ವಾಮಿ, ಇದೀಗ ಡಿಕೆ ಶಿವಕುಮಾರ್‌ ಅವರನ್ನ ಟಾರ್ಗೆಟ್ ಮಾಡಿದ್ದು, ತೀವ್ರ ವಾಗ್ದಾಳಿ ಮುಂದುವರೆಸಿದ್ದಾರೆ.

ಮೇಕೆದಾಟು ಯೋಜನೆ (mekedatu project)ಆಗ್ರಹಿಸಿ ಕಾಂಗ್ರೆಸ್(Congress) ಪಾದಯಾತ್ರೆಗೆ ಕುಮಾರಸ್ವಾಮಿ 83 ತಾಲೂಕುಗಳ ಜನರಿಗೆ ‘ಮೇಕೆದಾಟು ಮಕ್ಮಲ್ ಟೋಪಿ’ ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ಡಿಕೆ ಶಿವುಮಾರ್ ಸಹ ಸೂಕ್ಷ್ಮವಾಗಿ ತಿರುಗೇಟು ಕೊಟ್ಟಿದ್ದಾರೆ.

"

Mekedatu Project: ಮೇಕೆದಾಟು ಮಕ್ಮಲ್ ಟೋಪಿ, ಕಾಂಗ್ರೆಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಬೆಂಗಳೂರಿನಲ್ಲಿ ಇಂದು(ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಈಗ ವಯಸ್ಸಾಗಿದೆ. ಗಡ್ಡ ಬೆಳ್ಳಗಾಗಿದೆ. ನಮ್ಮದೊಂದು ರಾಷ್ಟ್ರೀಯ ಪಕ್ಷ 100 ವರ್ಷ ದಾಟಿದೆ. ಅವರ ಪಕ್ಷ ಹಾಗಲ್ಲ.. ಯಾವಾಗ ಬೇಕಾದ್ರು ಉದಯವಾಗುತ್ತೆ. ಪಾಪ ಅವರಿಗೆ ಇನ್ನೂ ಕೂಡ ವಯಸ್ಸಿದೆ. ನಾನು ಕಲ್ಲು ನುಂಗಿದಿನಿ..ಕಬ್ಬಿಣ ನುಂಗಿದಿನಿ.. ಎಲ್ಲಾ ಮಾಡಿದಿನಿ.. ಅವರ ಕೂಡ ತನಿಖೆ ಮಾಡಿದ್ದಾರೆ. ಪಾಪಾ. ಮೊನ್ನೆ ದೆಹಲಿಗೆ ಹೋಗಿ ಏನೆಲ್ಲಾ ಮಾಡಿದ್ದಾರೆ ಪಾಪಾ. ನನ್ನ ವಿರುದ್ದ ದೊಡ್ಡ ಷಡ್ಯಂತ್ರ ಮಾಡ್ತಾ ಇದ್ದಾರೆ ಎಂದು ಡಿಕೆಶಿ ಎಚ್‌ಡಿಕೆ ವಿರುದ್ಧ ಗಂಭೀರ ಆರೋಪ ಮಾಡಿದರು.

ಕುಮಾರಸ್ವಾಮಿ ಬಿಜೆಪಿ ಎರಡು ರಾಜಕೀಯ ಪಕ್ಷಗಳು ಸೇರಿ ಮಾಡ್ತಾ ಇವೆ. ದೆಹಲಿಗೆ ಹೋಗಿ ಏನೇನು ಮಾಡ್ತಿದ್ದಾರೆ ಎಲ್ಲಾ ಗೊತ್ತಿದೆ. ಇನ್ನೊಂದು ದಿನ ಎಲ್ಲವನ್ನ ಹೇಳ್ತೇನೆ. ನಮಗೆ ಯಾರ ಅನುಮತಿ ಬೇಕಿಲ್ಲ ನನ್ನ ಕಾಲು ಅವರ ಕಾಲು ನಡೆಯುತ್ತೇವೆ ಎಂದು ಅಚ್ಚರಿ ಹೇಳಿಕೆ ನೀಡಿದರು.

ಕುಮಾರಣ್ಣ ಏನು ಬೇಕಾದರು ಹೇಳಲಿ. ನಮ್ಮನ್ನ ತಿದ್ದಲಿ. ಅವರು ಪ್ರಮಾಣವಚನಕ್ಕೆ ಹಾಕಿದ ಪಂಚೆಯ ಮಾದರಿ ಪಂಚೆಯನ್ನೇ ನಾನು ಹಾಕಿದ್ದೆ. ಹಿಂದೆ ಕುಮಾರಸ್ವಾಮಿ ಜೊತೆ ಪೂಜೆಯೂ ಮಾಡಿದ್ದೆ. ನಾನು ನಟನೆ ಮಾಡಲು‌ ಬರಲ್ಲ. ನಾನು ಕೂಡ ಥಿಯೇಟರ್ ಮಾಲೀಕ ಎಂದರು.

ಮತ ಯಾತ್ರೆನಾ.. ಒಳ್ಳೆ ಹೇಳಿಕೆ ಕೊಟ್ಟಿದ್ದಾರೆ. ಚನ್ನಾಗಿದೆ ಅದು. ನಾನು ಕುಮಾರಸ್ವಾಮಿ ಜೊತೆ ಕಾಂಪೀಟ್ ಮಾಡುವ ಶಕ್ತಿ ನನಗಿಲ್ಲ. ರಾಜಕಾರಣದಲ್ಲಿ ಯಾರು ಬೇಕಾದರು ಮಾಡಬಹುದು. ಕುಮಾರಸ್ವಾಮಿ ಏನೇ ಹೇಳಿದರು ನನ್ನ ತಿದ್ದಲು ಹೇಳ್ತಾ ಇದಾರೆ. ನನ್ನ ಒಳ್ಳೆದಕ್ಕೆ ಹೇಳ್ತಾ ಇದ್ದಾರೆ ಎಂದು ಹೇಳಿದರು.

ಕಾಂಗ್ರೆಸ್​ನ 5 ವರ್ಷದ ಸರಕಾರವೇ ಇತ್ತು. ‘ಸಿದ್ದಹಸ್ತರೇ‘ ಸಿಎಂ ಆಗಿದ್ದರು. ಆಗ ಕೇಂದ್ರದ ಮುಂದೆ ಪ್ರತಾಪ ತೋರಬಹುದಿತ್ತು. ಬರೀ ಮಾತಿನ ಉತ್ತರ ಪೌರುಷ. ಹೌದು, ಜಾಣ ಮರೆವು ಕೂಡ ಒಂದು ರೋಗ. ಕಾಂಗ್ರೆಸ್ ಈಗ ಪವಿತ್ರ ಗಂಗೆಯನ್ನೂ ಮತಕ್ಕೆ ಬಳಸುತ್ತಿದೆ. ಆಗ ಏನೂ ಮಾಡದ ‘ಉತ್ತರಕುಮಾರ ಸಿದ್ದಸೂತ್ರಧಾರ’ ಅವರು. ರಾಜ್ಯದ ಹಿತದ ಪ್ರಶ್ನೆ ಬಂದಾಗ ಗೌಡರು ರಾಜಿಯಾದವರಲ್ಲ. ಅವರೊಬ್ಬರಿಂದಲೇ ಮೇಕೆದಾಟು ಯೋಜನೆ ಸಾಕಾರ ಸಾಧ್ಯ ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ರಾಜ್ಯದಲ್ಲಿ ಮೇಕೆದಾಟು ಯೋಜನೆ ವಿಳಂಬವಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಯೋಜನೆ ಜಾರಿಗೆ ಆಗ್ರಹಿಸಿ ಜನವರಿ 9 ರಿಂದ 19 ರ ವರೆಗೆ 10 ದಿನಗಳ ನೀರಿಗಾಗಿ ನಡಿಗೆ ಅಭಿಯಾನದ ಪಾದಯಾತ್ರೆ ಹಮ್ಮಿಕೊಂಡಿದೆ.