ಬೆಂಗಳೂರು, (ಮಾ.13): ರಮೇಶ್ ಜಾರಕಿಹೊಳಿ ಅವರ 'ಸಿಡಿ' ಬಿಡುಗಡೆ ಪ್ರಕರಣ ಬಿಜೆಪಿಗೆ ಇನ್ನಿಲ್ಲದ ಮುಜುಗುರವನ್ನು ತಂದಿಟ್ಟಿದೆ. ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರವನ್ನು ಲೇವಡಿ ಮಾಡುತ್ತಿದೆ.

ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿ ಆಡಳಿತದಲ್ಲಿ ಸದ್ದು ಮಾಡುವುದು ಎರಡೇ ಸಂಗತಿಗಳು. ಒಂದು ಲಂಚ, ಮತ್ತೊಂದು ಮಂಚ ಎಂದು ಟಾಂಗ್ ಕೊಟ್ಟಿದೆ. 

ಕಾಂಗ್ರೆಸ್ ನವರು ಶರ್ಟು, ಪ್ಯಾಂಟು ಬಿಚ್ಚಿ ಎಂದು ಹೇಳಿದ್ರಾ..? ಡಿಕೆಶಿ ಡಿಚ್ಚಿ

ಸಿಡಿ ನಿಜಕ್ಕೂ ನಕಲಿಯೇ ಆಗಿದ್ದರೆ ರಮೇಶ್ ಜಾರಕಿಹೊಳಿ ಅವರು ದೂರು ನೀಡಲು ಮಿನಾಮೇಷ ಎಣಿಸುತ್ತಿರುವುದೇಕೆ? ಖಾಸಗಿ ಏಜೆನ್ಸಿಗಳ ಮೊರೆ ಹೋಗುವುದೇಕೆ? ಸರ್ಕಾರಿ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲವಾ ಅಥವಾ ಬಿಜೆಪಿ ತಿಕ್ಕಾಟದಲ್ಲಿ ತಾವೇ ಬಲಿಯಾಗುವ ಭಯ ರಮೇಶ್ ಜಾರಕಿಹೊಳಿ ಅವರನ್ನು ಕಾಡುತ್ತಿದೆಯಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

ಬಿಜೆಪಿ ಆಳ್ವಿಕೆಯಲ್ಲಿ ಅಸ್ಪೃಶ್ಯತೆಯನ್ನು ಮರುಸ್ಥಾಪಿಸುತ್ತಿದೆ. ಸಂಸದ ಎ ನಾರಾಯಣಸ್ವಾಮಿ ಅವರೇ ಇಂತ ಸ್ಥಿತಿಗೆ ಎದುರಿಸಿದ್ದು ಬಿಜೆಪಿ ಆಡಳಿತಕ್ಕೆ ಕನ್ನಡಿ. ಬಿಜೆಪಿ ತನ್ನ ಮನುವಾದಿ ಸಿದ್ಧಾಂತವನ್ನು ಸಮಾಜದೊಳಗೆ ವ್ಯವಸ್ಥಿತವಾಗಿ ಮತ್ತೆ ಸ್ಥಾಪಿಸುತ್ತಿದೆ. ಜನಪ್ರತಿನಿಧಿಗಳ ಪಾಡೇ ಹೀಗಾದರೆ ಸಾಮಾನ್ಯರ ಸ್ಥಿತಿ ಏನು? ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕಟೀಲ್‌ಗೆ ಬೆನ್ನುಮೂಳೆ ಇಲ್ಲ ಎಂದ ಕೈ
ಕರ್ನಾಟಕ ಬಿಜೆಪಿ  ರಾಜ್ಯಾಧ್ಯಕ್ಷ ಕಾಮಿಡಿ ಕಿಂಗ್ ನಳಿನ್ ಕುಮಾರ್ ಕಟೀಲ್ ಅವರಿಗೆ ಬೆನ್ನುಮೂಳೆ ಇಲ್ಲ ಎನ್ನುವುದನ್ನ ಬಿಜೆಪಿ ಅರ್ಥೈಸಿಕೊಂಡಂತಿದೆ! #BSYmuktaBJP ಮಾಡುವ ಸಲುವಾಗಿ ಬಿ.ಲ್ ಸಂತೋಷ್ ನೇಮಿಸಿಕೊಂಡ ಕೀಲಿಗೊಂಬೆ ಕಟೀಲ್. ತಮ್ಮ ದುರಾಡಳಿತದಿಂದ ಮುಂದೆ ಸೋಲು ಖಚಿತ ಎಂದು ಮನಗಂಡಿರುವ ಬಿಜೆಪಿ ಏನೇನೋ ಸರ್ಕಸ್ ನಡೆಸುತ್ತಿದೆ ಟ್ವೀಟ್‌ನಲ್ಲಿ ಬರೆದುಕೊಂಡಿದೆ.