Asianet Suvarna News Asianet Suvarna News

ಅಲ್ಲಿನ ನನ್ನ ಆಸ್ತಿ ಅವನಿಗೆ ಗಿಫ್ಟ್ ಕೊಡುತ್ತೇನೆ : ಡಿಕೆಶಿ

  •  ಮೆಂಟಲ್‌ ಆಸ್ಪತ್ರೆಯಲ್ಲಿ ಇರಬೇಕಾದವರ ಹೇಳಿಕೆಗಳ ಬಗ್ಗೆ ನಾನು ಮಾತನಾಡುವುದಿಲ್ಲ.
  • ನನ್ನ ಬೇನಾಮಿ ಆಸ್ತಿ ಇದ್ದರೆ ಅವನಿಗೇ ಗಿಫ್ಟ್‌ ಕೊಡುತ್ತೇನೆ - ಡಿಕೆಶಿ ಗರಂ
KPCC Leader DK Shivakumar slams Sogadu Shivanna snr
Author
Bengaluru, First Published Oct 16, 2021, 7:54 AM IST
  • Facebook
  • Twitter
  • Whatsapp

ಬೆಂಗಳೂರು (ಅ.16): ಮೆಂಟಲ್‌ ಆಸ್ಪತ್ರೆಯಲ್ಲಿ (Mental hospital) ಇರಬೇಕಾದವರ ಹೇಳಿಕೆಗಳ ಬಗ್ಗೆ ನಾನು ಮಾತನಾಡುವುದಿಲ್ಲ. ತುಮಕೂರಿನಲ್ಲಿ (Tumakur) ನನ್ನ ಬೇನಾಮಿ ಆಸ್ತಿ ಇದ್ದರೆ ಅವನಿಗೇ ಗಿಫ್ಟ್‌ ಕೊಡುತ್ತೇನೆ ಎಂದು ಬಿಜೆಪಿ (BJP) ಮಾಜಿ ಸಚಿವ ಸೊಗಡು ಶಿವಣ್ಣ (Sogadu Shivanna) ವಿರುದ್ಧ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಏಕ ವಚನದಲ್ಲೇ ಕಿಡಿಕಾರಿದ್ದಾರೆ.

 ಡಿ.ಕೆ. ಶಿವಕುಮಾರ್‌ (DK Shivakumar) ಬೇನಾಮಿ ಆಸ್ತಿ ಮಾಡಿದ್ದಾರೆ. ಪಾವಗಡದ ಸೋಲಾರ್‌ ವಿದ್ಯುತ್‌ (Solar power) ಘಟಕದಲ್ಲಿಯೇ ಸಾವಿರಾರು ಕೋಟಿ ಅವ್ಯವಹಾರ ಆಗಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi hebbalkar) ಹೆಸರಿನಲ್ಲೂ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಶಿವಣ್ಣ ವಿರುದ್ಧ (Shivanna) ತುಮಕೂರಿನಲ್ಲಿ  ಆರೋಪ ಮಾಡಿದ್ದರು. 

ಡಿಕೆಶಿ ಮೇಲಿನ ಕಮಿಷನ್ ಮಾತು... ಪ್ರತಿಕ್ರಿಯೆ ಕೊಡದೆ ಜಾರಿಕೊಳ್ಳುತ್ತಿರುವ ಸಿದ್ದು!

ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌ , ಮೆಂಟಲ್‌ ಆಸ್ಪತ್ರೆಯಲ್ಲಿ ಇರಬೇಕಾದವರ ಬಗ್ಗೆ ನಾನೇನೂ ಮಾತನಾಡಲ್ಲ. ಮೊದಲು ಮೆಂಟಲ್‌ ಆಸ್ಪತ್ರೆಗೆ ಸೇರಿಸಿ. ನಾನು ಬೇನಾಮಿ ಆಸ್ತಿ ಹೊಂದಿದ್ದರೆ ಅವನಿಗೇ ಗಿಫ್ಟ್‌ ಕೊಡುತ್ತೇನೆ. ರಾಜಕೀಯವಾಗಿ ಅವನಿಗೆ ಜಾಗ ಇಲ್ಲ ಎಂದು ಕಾಣುತ್ತದೆ. ಮೊದಲು ರಾಜಕೀಯ ಜಾಗ ಹುಡುಕಿಕೊಳ್ಳಲಿ ಎಂದರು.

ಸೊಗಡು ಶಿವಣ್ಣ ಡಿಕೆ ಶಿವಕುಮಾರ್ ವಿರುದ್ಧದ ಹೇಳಿಕೆ :  ಕಾಂಗ್ರೆಸ್‌ನಲ್ಲೂ (Congress) ತಾಲಿಬಾನಿಗಳಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ (Sogadu Shivanna) ವಿವಾದಿತ ಹೇಳಿಕೆ ನೀಡಿದ್ದಾರೆ. ಜಮೀರ್ ಅಹಮದ್ (Zameer ahmed) ಓವೈಸಿ ತಾಲಿಬಾನಿಗಳಂತೆ,. ಡಿಜೆ ಹಳ್ಳಿ (DJ Halli) ಗಲಭೆಯಂತ ಘಟನೆ, ಪೊಲೀಸ್ ಠಾಣೆಗೆ (Police) ನುಗ್ಗಿ ಹೊಡೆಯುವುದು ಇದೆಲ್ಲಾ ತಾನಿಬಾನಿಗಳ ವರ್ತನೆ ಎಂದು ಶಿವಣ್ಣ ಹೇಳಿದ್ದಾರೆ. 

'ಕಾಂಗ್ರೆಸ್, ಕಮ್ಯುನಿಸ್ಟ್ ಮುಸ್ಲಿಮರ ದಾರಿ ತಪ್ಪಿಸ್ತಿದೆ'..!

ತುಮಕೂರಿನಲ್ಲಿಂದು ಮಾತನಾಡಿದ ಸೊಗಡು ಶಿವಣ್ಣ ಜಮೀರ್ ಅಹಮದ್ ಹಾಗು ಓವೈಸಿ ಅವರ ಹೆಸರು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Follow Us:
Download App:
  • android
  • ios