Asianet Suvarna News

ಪಕ್ಕದ ರಾಜ್ಯದಲ್ಲಿ ಹಸಿರು ಶಾಲು, ನಮ್ಮ ರಾಜ್ಯದಲ್ಲಿ ಕೇಸರಿ ಶಾಲು ಧರಿಸಿ ವಂಚಿಸ್ತಿದ್ದೀರಿ: ಸಿ.ಟಿ.ರವಿ ವಿರುದ್ಧ ಕಿಡಿ

* ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಸಚಿನ್ ಮೀಗಾ ಕಿಡಿ
* ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ವ್ಯಂಗ್ಯ
* ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್ ಮೀಗಾ

kpcc-kishan-president-sachin-miga-slams-ct-ravi-in-chikmagalur rbj
Author
Bengaluru, First Published Jun 22, 2021, 7:33 PM IST
  • Facebook
  • Twitter
  • Whatsapp

ಚಿಕ್ಕಮಗಳೂರು, (ಜೂನ್.22): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಸಿರು ಶಾಲು ಹಾಕಿಕೊಂಡಿದ್ದಕ್ಕೆ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ವ್ಯಂಗ್ಯವಾಡಿದ್ದಾರೆ. 
 
ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಕದ ರಾಜ್ಯಕ್ಕೆ ಹೋಗಿ ಹಸಿರು ಶಾಲು ಹಾಕಿಕೊಳ್ಳುತ್ತೀರಿ. ನಮ್ಮ ರಾಜ್ಯದಲ್ಲಿ ಕೇಸರಿ ಶಾಲು ಧರಿಸಿ ವಂಚಿಸುತ್ತಿದ್ದೀರಿ ಎಂದು ಸಚಿನ್ ಮೀಗಾ ಟೀಕಿಸಿದ್ದಾರೆ.

ಮೋಡ ಸೂರ್ಯನನ್ನು ಮರೆ ಮಾಡಲು ಸಾಧ್ಯವೇ?: ಸಿ.ಟಿ. ರವಿ ನಿಗೂಢ ಹೇಳಿಕೆ

ಚಿಕ್ಕಮಗಳೂರು ಜನರಿಗೆ ಕೇಸರಿ ಶಾಲು ತೋರಿಸಿ ಗೆಲುವು ಸಾಧಿಸಿದ್ದೀರಿ. ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ನೀವು ಗೆದ್ದಿದ್ದೀರಿ. ಗೋಸುಂಬೆ ತರ ಬಣ್ಣ ಬದಲಿಸಿ ರಾಜಕೀಯ ಮಾಡ್ತಿದ್ದೀರಿ. ನಮ್ಮಲ್ಲೂ ಹಸಿರು ಶಾಲು ಧರಿಸಿ ರೈತರಿಗೆ ನ್ಯಾಯ ಕೊಡಿಸಿ ಎಂದರು.

ನಮ್ಮ ಜಿಲ್ಲೆಯಲ್ಲಿ ಮಳೆಯಿಂದಾಗಿ ನೂರಾರು ಜನ ಮನೆ ಕಳೆದುಕೊಂಡಿದ್ದಾರೆ. ನೀವು ಹಸಿರು ಶಾಲು ಧರಿಸಿದ್ದಕ್ಕೆ ನಮಗೆ ಸಂತಸವಾಗುತ್ತಿದೆ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಿಸಿ ಎಂದು ಸಿ.ಟಿ.ರವಿಗೆ ಸಚಿನ್ ಮೀಗಾ ಆಗ್ರಹಿಸಿದ್ದಾರೆ.

Follow Us:
Download App:
  • android
  • ios