* ಸಿ.ಟಿ. ರವಿ ನಿಗೂಢ ಹೇಳಿಕೆ* ಮೋಡ ಸೂರ‍್ಯನನ್ನು ಮರೆ ಮಾಡಲು ಸಾಧ್ಯವೇ?* ಮರೆ ಮಾಚಿದರೂ ಕೆಲ ಕಾಲ ಮಾತ್ರ

ಬೆಂಗಳೂರು(ಜೂ.22): ‘ಮೋಡ ಸೂರ್ಯನನ್ನು ಮರೆ ಮಾಚಲು ಸಾಧ್ಯವೇ? ಮರೆ ಮಾಚಿದರೂ ಕೆಲಕಾಲ ಮಾತ್ರ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಿಗೂಢಾರ್ಥ ಸೂಚಿಸುವಂತೆ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಸೋಮವಾರ ಪಕ್ಷದ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಾತಿನ ಹಿಂದೆ ದುರುದ್ದೇಶವಿಲ್ಲ. ನನಗೆ ಯಾವುದೇ ಅಸಮಾಧಾನ ಇಲ್ಲ. ನಮಗೆ ಪಕ್ಷದ ಬೆಳವಣಿಗೆ ಹೊರತುಪಡಿಸಿ ಬೇರೆ ಯಾವುದೇ ಯೋಚನೆಯಿಲ್ಲ. ವೈಯಕ್ತಿಕ ಬೆಳವಣಿಗೆಗಾಗಿ ನಾವು ಪಕ್ಷವನ್ನು ತುಳಿಯಬೇಕು ಎಂಬ ಯೋಚನೆಯನ್ನು ಯಾವತ್ತೂ ಮಾಡಿಲ್ಲ ಎಂದರು.

ಪಕ್ಷ ಬೆಳವಣಿಗೆಯ ಜೊತೆಗೆ ನಾವು ಬೆಳೆಯಬೇಕು ಅಂತ ಆಸೆ ಪಡುತ್ತೇವೆ. ಪಕ್ಷ ಮುಗಿಸಿ ನಾವು ಬೆಳೆಯಬೇಕು ಅಂತಲ್ಲ. ನಾನು ಯಾವುದೇ ವಿಷಯವನ್ನು ಎತ್ತಿದ್ದರು ವಿಷಯಾಧಾರಿತವಾಗಿಯೇ ಹೊರತು ಪೂರ್ವಗ್ರಹದಿಂದಲ್ಲ. ಪ್ರೇಮದಿಂದಲ್ಲ. ನಾನು ಹೇಳಿದ್ದನ್ನು ಅವರವರು ಹೇಗೆ ಗ್ರಹಿಸುತ್ತಾರೋ ಹಾಗೆ. ಒಳ್ಳೆಯ ದೃಷ್ಟಿಯಿಂದ ಗ್ರಹಿಸಿದರೆ ಒಳ್ಳೆಯದು. ಕೆಟ್ಟದೃಷ್ಟಿಯಿಂದ ಗ್ರಹಿಸಿದರೆ ಕೆಟ್ಟದು. ನನ್ನ ಪ್ರತಿ ಮಾತಿನ ಉದ್ದೇಶ ಸದುದ್ದೇಶದಿಂದ ಕೂಡಿರುತ್ತದೆ. ಯಾವತ್ತೂ ದುರುದ್ದೇಶ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು.