'ಸಿಟಿ ರವಿ ಮಾಡಿದ ತಪ್ಪು ಬಿಜೆಪಿ ಮುಖಂಡರಿಗೆ ಕಾಣುತ್ತಿಲ್ಲವೇ?'
ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದ ಅದೇ ರವಿ ಇಂದು ಮಾಡಿದ್ದಾದರೂ ಏನು? ದೇವರ ಬಗ್ಗೆ ಅಪಾರ ಭಕ್ತಿ ಶ್ರದ್ಧೆ ಹೊಂದಿರುವ ಅವರು ಇದೀಗ ತಾವೇ ತಪ್ಪು ಮಾಡಿ ಸಮರ್ಥನೆ ಮಾಡಿಕೊಳ್ಳುತ್ತಿದ್ದು, ದೆವ್ವದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಆಗಿದೆ ಎಂದು ಲೇವಡಿ ಮಾಡಿದ ಟಿ. ಈಶ್ವರ.
ಲಕ್ಷ್ಮೇಶ್ವರ(ಫೆ.24): ರಾಜ್ಯದ ಬಿಜೆಪಿ ಮುಖಂಡ, ಪ್ರಖರ ಹಿಂದುತ್ವವಾದಿ ಎಂದು ಹೇಳಿಕೊಳ್ಳುವ ಸಿ.ಟಿ. ರವಿ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದನ್ನು ತಪ್ಪು ಎಂದು ಬಿಜೆಪಿಯ ಯಾವೊಬ್ಬ ನಾಯಕರು ಹೇಳದಿರುವುದು ಯಾಕೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಈಶ್ವರ ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದ ಅದೇ ರವಿ ಇಂದು ಮಾಡಿದ್ದಾದರೂ ಏನು? ದೇವರ ಬಗ್ಗೆ ಅಪಾರ ಭಕ್ತಿ ಶ್ರದ್ಧೆ ಹೊಂದಿರುವ ಅವರು ಇದೀಗ ತಾವೇ ತಪ್ಪು ಮಾಡಿ ಸಮರ್ಥನೆ ಮಾಡಿಕೊಳ್ಳುತ್ತಿದ್ದು, ದೆವ್ವದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಆಗಿದೆ ಎಂದು ಲೇವಡಿ ಮಾಡಿದರು. ತಪ್ಪು ಮಾಡಿದ್ದರೂ ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡುತ್ತಿರುವ ಸಿ.ಟಿ. ರವಿ ಅವರ ಭಂಡತನ ಎಲ್ಲ ಜನರಿಗೂ ತಿಳಿಯುತ್ತಿದೆ. ಅದರಲ್ಲೂ ಸುಳ್ಳು ಹೇಳುವವರು, ಭಂಡತನದ ಮಾತುಗಳನ್ನಾಡುವವರು ಇದ್ದರೆ ಅವರು ಬಿಜೆಪಿ ಮುಖಂಡರೇ ಆಗಿರುತ್ತಾರೆ. ಒಡೆದಾಳುವ ಮತ್ತು ಹೊಡೆದಾಳುವ ಬ್ರಿಟಿಷ್ ಸಂಸ್ಕೃತಿಯೇ ಬಿಜೆಪಿಯಲ್ಲಿದೆ ಎಂದು ಟೀಕಿಸಿದರು.
ಒಗ್ಗಟ್ಟು ಪ್ರದರ್ಶಿಸಿದ ರೋಣ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು..!
ಬಿಜೆಪಿಯ ಮುಖಂಡರು ಬೇರೆಯವರು ಇಂತಹವುಗಳನ್ನು ಮಾಡಿದರೆ ಅದಕ್ಕೆ ದೇವರು, ಭಯ, ಭಕ್ತಿ ಬಗ್ಗೆ ಮಾತನಾಡುತ್ತಾ ಭಗವದ್ಗೀತೆ ನುಡಿಯುತ್ತಾರೆ. ಆದರೆ ತಮ್ಮ ತಪ್ಪುಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು. ಸಿ.ಟಿ. ರವಿ ದೇವರ ಸನ್ನಿಧಿಗೆ ಮಾಂಸಾಹಾರವನ್ನು ಸೇವಿಸಿ ಹೋಗಿರುವುದು ತಪ್ಪು ಎಂದಾದರೆ ಬಿಜೆಪಿಯವರು ದೇವಸ್ಥಾನವನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿ, ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.