Asianet Suvarna News

ಜೈಲಿನಿಂದ ಬಂದ ಬಳಿಕ ಮೊದಲ ಬಾರಿಗೆ ಗಡ್ಡ ತೆಗೆಸಿದ ಡಿಕೆಶಿ, ಕಾರ್ಯ ಯಶಸ್ವಿ ಆಯ್ತಾ?

* ಜೈಲಿಗೆ ಹೋಗಿ ಬಂದ ಬಳಿಕ ಮೊದಲ ಬಾರಿಗೆ ಗಡ್ಡ ತೆಗೆಸಿದ ಡಿ.ಕೆ ಶಿವಕುಮಾರ್​
* ಜೈಲಿಗೆ ಹೋಗಿ ಬಂದಾಗಿನಿಂದ ಗಡ್ಡ ಬಿಟ್ಟಿದ್ದ ಡಿಕೆಶಿ
* ಗಡ್ಡ ಬಿಟ್ಟಿರೋದರ ಹಿಂದೆ ಒಂದು ಕಾರಣವಿದೆ ಎಂದು ಹೇಳಿದ್ದ ಡಿಕೆಶಿ
* ಡಿಕೆಶಿ ಗಡ್ಡದ ವಿಚಾರ ಎಲ್ಲರ ಕುತೂಹಲ ಮೂಡಿಸಿದ್ದರು

KPCC DK Shivakumar first time clean shave after Came from Jail rbj
Author
Bengaluru, First Published Jul 20, 2021, 3:19 PM IST
  • Facebook
  • Twitter
  • Whatsapp

ಬೆಂಗಳೂರು, (ಜು.20): ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ತಿಹಾರ್​​ ಜೈಲಿಗೆ ಹೋಗಿ ಬಂದ ಬಳಿಕ ಮೊದಲ ಬಾರಿಗೆ ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ತಮ್ಮ ಗಡ್ಡ ತೆಗೆಸಿದ್ದಾರೆ. 

2019 ಅಕ್ಟೋಬರ್ ನಿಂದ  ಬಿಟ್ಟಿದ್ದ ಗಡ್ಡವನ್ನ ತೆಗೆಸಿರುವುದು ಕುತೂಹಲ ಮೂಡಿಸಿದೆ. ಯಾಕಂದ್ರೆ ಈ ಹಿಂದೆ ನಾನು ಗಡ್ಡ ಬಿಟ್ಟಿರುವುದರ ಹಿಂದೆ ರಹಸ್ಯ ಇದೆ. ನಾನು ಅಂದುಕೊಂಡ ಕಾರ್ಯ ನೆರವೇರಿದಾಗ ಗಡ್ಡ ತೆಗೆಸುವೆ ಎಂದಿದ್ದರು.

ಸಿದ್ದರಾಮಯ್ಯರನ್ನ ಮನೆಗೆ ಆಹ್ವಾನಿಸಿದ ಡಿಕೆಶಿ : ಕೋಲ್ಡ್ ವಾರ್ ತಣಿಸುವ ಯತ್ನ..?

ಇದೀಗ  ಕಾಂಗ್ರೆಸ್​ ಹೈಕಮಾಂಡ್​ ರಾಹುಲ್​​ ಗಾಂಧಿಯವರನ್ನು ಭೇಟಿ ಮಾಡಲು ಡಿ.ಕೆ ಶಿವಕುಮಾರ್​​​ ಗಡ್ಡ ತೆಗೆಸಿದ್ದಾರೆ. ತಾವು ಅಂದುಕೊಂಡ ಕಾರ್ಯವೂ ಯಶಸ್ವಿಯಾದ್ದರಿಂದ ರಾಮನಗರದ ಬಂಡೆ ಗಡ್ಡ ಶೇವ್​​ ಮಾಡಿರಬಹುದು ಎಂದು ಹೇಳಲಾಗುತ್ತಿದೆ. 

ಹಾಗಾದ್ರೆ, ರಾಜಕೀಯ ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರು ಅಂದುಕೊಂಡಿದ್ದು ಈಡೇರಿದ್ಯಾ..? ಅದಕ್ಕೆ ಅವರು ಗಡ್ಡ ತೆಗೆಸುವ ಮೂಲಕ ಹರಕೆ ತೀರಿಸಿದ್ರಾ? ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

Follow Us:
Download App:
  • android
  • ios