ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಸೇರ್ತಾರಾ ಬಿಜೆಪಿ ಸಂಸದ..?

ನನ್ನ ರಾಜಕೀಯ ಗುರುವಾಗಿದ್ದ ಗಂಗಾವತಿಯ ಎಚ್‌.ಜಿ. ರಾಮುಲು ಮನೆಗೆ ಹೋಗಿ ಕುಶಲೋಪರಿ ವಿಚಾರಿಸಿರುವೆ. ಇದನ್ನೇ ಕೆಲ ಮಾಧ್ಯಮಗಳು ಊಹಿಸಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುತ್ತೇನೆ ಎಂದು ಸುದ್ದಿ ಪ್ರಕಟಿಸಿರುವುದು ಸತ್ಯಕ್ಕೆ ದೂರವಾದದು: ಸಂಸದ ಸಂಗಣ್ಣ ಕರಡಿ 

Koppal BJP MP Sanganna Karadi React to Join Congress grg

ಕನಕಗಿರಿ(ಜು.19): ಬಿಜೆಪಿ ಬಿಟ್ಟು ಕಾಂಗ್ರೆಸ್ಸಿಗೆ ಹೋಗುತ್ತೇನೆ ಎನ್ನುವ ಸುದ್ದಿ ಸುಳ್ಳು ಎಂದು ಸಂಸದ ಸಂಗಣ್ಣ ಕರಡಿ ಸ್ಪಷ್ಟಪಡಿಸಿದ್ದಾರೆ. ಅವರು ಪತ್ರಕರ್ತರ ಜತೆ ಮಾತನಾಡಿ, ನನ್ನ ರಾಜಕೀಯ ಗುರುವಾಗಿದ್ದ ಗಂಗಾವತಿಯ ಎಚ್‌.ಜಿ. ರಾಮುಲು ಮನೆಗೆ ಹೋಗಿ ಕುಶಲೋಪರಿ ವಿಚಾರಿಸಿರುವೆ. ಇದನ್ನೇ ಕೆಲ ಮಾಧ್ಯಮಗಳು ಊಹಿಸಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುತ್ತೇನೆ ಎಂದು ಸುದ್ದಿ ಪ್ರಕಟಿಸಿರುವುದು ಸತ್ಯಕ್ಕೆ ದೂರವಾದದು. ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಇದೆ. ಪಕ್ಷದಲ್ಲಿ ಹಲವರು ಆಕಾಂಕ್ಷಿಗಳಿದ್ದು, ಅದರಲ್ಲಿ ನಾನು ಸಹ ಒಬ್ಬ. ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡುತ್ತೋ ಅವರ ಪರವಾಗಿ ಕೆಲಸ ಮಾಡುವೆ ಎಂದಿದ್ದಾರೆ.

ಮುಖಂಡರಾದ ಶಿವಪ್ಪ ಕಲ್ಮನಿ, ಸಣ್ಣ ಕನಕಪ್ಪ, ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ಶಿವಾನಂದ ಬೆನಕನಾಳ, ಬಸವರಾಜ ಅಂಗಡಿ, ರಾಘವೇಂದ್ರ ಉಳ್ಳಾಗಡ್ಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

ಬಸ್ಸಲ್ಲಿ ಫ್ರೀ ಬೇಡ, ಪುರುಷ, ಸ್ತ್ರೀಯರಿಗೆ ಅರ್ಧ ಚಾರ್ಜ್‌ ಮಾಡಿ: ಸಂಸದ ಸಂಗಣ್ಣ

ಬಿಜೆಪಿ-ಕಾಂಗ್ರೆಸ್‌ ಎನ್ನುವುದಕ್ಕಿಂತ ನಾನು ತಳಮಟ್ಟದ ನಾಯಕರೊಂದಿಗೆ ಸಂಪರ್ಕ ಹೊಂದಿದ್ದು, ಅವರು ಅನಾರೋಗ್ಯ, ಅಪಘಾತವಾಗಿ ಚಿಕಿತ್ಸೆ ಪಡೆಯುತ್ತಿರುವಾಗ ನಾವು ಆರೋಗ್ಯ ವಿಚಾರಿಸುವುದು ನನ್ನ ಕರ್ತವ್ಯ. ಇಂತದ್ದೇ ಘಟನೆಗಳು ಕನಕಗಿರಿ, ಕಾರಟಗಿ ಪಟ್ಟಣಗಳಲ್ಲಿನ ಕಾಂಗ್ರೆಸ್‌ ನಾಯಕರ ಮನೆಗಳಲ್ಲಿ ನಡೆದಿದ್ದು, ಇವರು ಮನೆಗೆ ಹೋಗಿ ಆರೋಗ್ಯ ವಿಚಾರಿಸಿದ್ದೇನೆ. ಇದರಲ್ಲಿ ತಪ್ಪೇನಿದೆ? ಅಂತ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios