ಶಾಕ್ ಕೊಟ್ಟ ಕೋನರೆಡ್ಡಿ, ದೇವೇಗೌಡ್ರಿಗೆ ರಾಜೀನಾಮೆ ಸಲ್ಲಿಕೆ

* ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್​​ಗೆ ಹೀನಾಯ ಸೋಲು
* ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೀನಾಮೆ
* ನೈತಿಕ ಹೊಣೆ ಹೊತ್ತು ಕೋನರೆಡ್ಡಿ ರಾಜೀನಾಮೆ‌

konareddy resigns to Jds national-general-secretary Over Party defeat Dharwad corporation  Poll rbj

ಬೆಂಗಳೂರು, (ಸೆ.07): ಎನ್.ಎಚ್. ಕೋನರೆಡ್ಡಿ ಅವರು ತಮ್ಮ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಹೌದು...ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಸೋಲಿನ ಹೊಣೆಹೊತ್ತು ಇಂದು (ಸೆ.07) ರಾಜೀನಾಮೆ ನೀಡಿದ್ದಾರೆ. 

ಮಹಾನಗರ ಪಾಲಿಕೆ ಎಲೆಕ್ಷನ್ ರಿಸಲ್ಟ್: ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ನ ಹಿರಿಯ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೂ ನಿರೀಕ್ಷೆಗೆ ತಕ್ಕಂತೆ ಜೆಡಿಎಸ್ ಗೆಲುವು ಸಾಧಿಸಿಲ್ಲ ಎನ್ನುವ ಕಾರಣಕ್ಕೆ ಕೋನರೆಡ್ಡಿ ರಾಜೀನಾಮೆ ಕೊಟ್ಟಿದ್ದಾರೆ.

ಈ ಕುರಿತು ಕೋನರೆಡ್ಡಿ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು,25ನೇ ವಾರ್ಡ್ ನ ಜೆಡಿಎಸ್ ಅಭರ್ಥಿ ಲಕ್ಷ್ಮಿ ಮಾರುತಿ ಹಿಂಡಸಗೇರಿ ಓರ್ವರು ಮಾತ್ರ ಗೆಲುವು ಸಾಧಿಸಿದ್ದಾರೆ. ಅಭ್ಯರ್ಥಿಗಳ ಸೋಲು ನನ್ನ ಮನಸ್ಸಿಗೆ ನೋವು ತಂದಿದೆ. ಹಾಗಾಗಿ ಜೆಡಿಎಸ್​​ ರಾಷ್ಟ್ರೀಯ ಅಧ್ಯಕ್ಷರಾಗಿರುವ ದೇವೇಗೌಡ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿರೋದಾಗಿ ಸ್ಪಷ್ಟಪಡಿಸಿದ್ದಾರೆ.

ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: 82(42 ಮ್ಯಾಜಿಕ್ ನಂಬರ್) ವಾರ್ಡ್‌ ಪೈಕಿ ಬಿಜೆಪಿ : 39, ಕಾಂಗ್ರೆಸ್: 33, ಪಕ್ಷೇತರ: 6, ಎಐಎಂಐಎಂ: 3, ಹಾಗೂ ಜೆಡಿಎಸ್: 1ರಲ್ಲಿ ಗೆಲ್ಲುವಲ್ಲಿ ಮಾತ್ರ ಸಾಧ್ಯವಾಗಿದೆ.  ಇನ್ನು ಯಾವ ಪಕ್ಷಕ್ಕೂ ಸ್ಪಷ್ಟಬಹುಮತ ಸಿಕ್ಕಿಲ್ಲ. ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರ ಮತಗಳಿಂದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

Latest Videos
Follow Us:
Download App:
  • android
  • ios