ಬಿಎಸ್‌ವೈ ಜೊತೆಗಿನ ಮಾತುಕತೆ ಸಕ್ಸಸ್: ಬಿಜೆಪಿ ಸೇರುವುದಾಗಿ ಹೇಳಿದ ಶಾಸಕ
* ಮತ್ತೊರ್ವ ಶಾಸಕ ಬಿಜೆಪಿ ಸೇರುವುದು ಖಚಿತ
* ಮಾಜಿ ಸಿಎಂ ಯಡಿಯೂರಪ್ಪ ಜತೆ ಮಾತುಕತೆ ಬಳಿಕ ಘೋಷಿಸಿದ ಶಾಸಕ
* ಗುಂಡ್ಲುಪೇಟೆಗೆ ಭೇಟಿ ವೇಳೆ ಬಿಎಸ್‌ವೈ ಜೊತೆ ಚರ್ಚೆ ಮಾಡಿದ ಶಾಸಕ ಮಹೇಶ್
ಚಾಮರಾಜನಗರ, (ಜು.30): ಬಿಎಸ್ಪಿ ಪಕ್ಷದಿಂದ ಅಮಾನತುಗೊಂಡಿರುವ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಬಿಜೆಪಿ ಸೇರುವುದು ಖಚಿತವಾಗಿದೆ.
ಹೌದು...ಕಳೆದ ಹಲವು ದಿನಗಳಿಂದ ಬಿಜೆಪಿ ಸೇರುವ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಸೂಚನೆ ನೀಡಿದ್ದ ಎನ್.ಮಹೇಶ್ ಇಂದು (ಶುಕ್ರವಾರ) ಅಧಿಕೃತ ಹೇಳಿಕೆ ನೀಡಿದ್ದಾರೆ.
ಬಿಎಸ್‌ವೈ ಭೇಟಿ ಬಳಿಕ ಬಿಜೆಪಿ ಸೇರ್ಪಡೆ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಶಾಸಕ
ಗುಂಡ್ಲುಪೇಟೆಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಬಿಜೆಪಿ ಸೇರುವ ಬಗ್ಗೆ ಬಹಿರಂಗವಾಗಿ ಹೇಳಿದರು.
ಬಿಜೆಪಿಗೆ ಬರುವಂತೆ ಯಡಿಯೂರಪ್ಪ ಆಹ್ವಾನಿಸಿದ್ದಾರೆ. ಶೀಘ್ರದಲ್ಲೇ ಬಿಜೆಪಿ ಸೇರುವ ದಿನಾಂಕ ನಿಗದಿಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕಾರ್ಯಕರ್ತರ ಮನವಿ ಮೇರೆಗೆ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಎರಡು ವರ್ಷದಿಂದಲೂ ಬಿಎಸ್‌ವೈ ಬಿಜೆಪಿ ಸೇರುವಂತೆ ಹೇಳುತ್ತಿದ್ದರು. ಆದರೆ ಕಾರ್ಯಕರ್ತರ ಅಭಿಪ್ರಾಯ ಪಡೆಯಲು ಇಷ್ಟು ದಿನ ಬೇಕಾಯ್ತು. ಹೀಗಾಗಿ ಯಾವುದೇ ಷರತ್ತುಗಳಿಲ್ಲದೆ ಈಗ ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿದರು.