ಸಚಿವ ಎಂ.ಸಿ.ಸುಧಾಕರ್ ಅಭಿವೃದ್ದಿಯ ಹರಿಕಾರ: ಸಂಸದ ಮುನಿಸ್ವಾಮಿ
ರೋಗಿಗಳಿಗೆ ವೈದ್ಯರು ಸಮಯಕ್ಕೆ ಸರಿಯಾಗಿ ಸ್ಪಂದಿಸಬೇಕು. ಜವಾಬ್ದಾರಿಯುತವಾಗಿ ತಮ್ಮ ವೃತ್ತಿ ಧರ್ಮವನ್ನು ಪಾಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ/ಚಿಂತಾಮಣಿ (ಆ.20): ರೋಗಿಗಳಿಗೆ ವೈದ್ಯರು ಸಮಯಕ್ಕೆ ಸರಿಯಾಗಿ ಸ್ಪಂದಿಸಬೇಕು. ಜವಾಬ್ದಾರಿಯುತವಾಗಿ ತಮ್ಮ ವೃತ್ತಿ ಧರ್ಮವನ್ನು ಪಾಲಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಜಿಲ್ಲೆಯ ಚಿಂತಾಮಣಿ ನಗರದಲ್ಲಿರುವ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ (.8 ಕೋಟಿ ವೆಚ್ಚದ ಯೋಜನೆ) ಕಟ್ಟಡ ಕಾಮಗಾರಿಗೆ ಸದರಿ ಆಸ್ಪತ್ರೆ ಆವರಣದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸೌಲಭ್ಯಗಳೂ ಮೇಲ್ದರ್ಜೆಗೆ: ಕೇವಲ ಹಾಸಿಗೆಗಳನ್ನು ಹೆಚ್ಚಿಸುವುದಲ್ಲದೆ ಅದಕ್ಕೆ ತಕ್ಕುದಾದ ಎಲ್ಲಾ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಚಿಂತಾಮಣಿ ತಾಲ್ಲೂಕು ಆಸ್ಪತ್ರೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಅತ್ಯಾಧುನಿಕ ರೀತಿಯಲ್ಲಿ ಹೈಟೆಕ್ ಆಸ್ಪತ್ರೆಯಾಗಿ ಅಭಿವೃದ್ಧಿ ಪಡಿಸಲಾಗುವುದು. ಸರ್ಕಾರ ಏನೆಲ್ಲ ಸವಲತ್ತುಗಳನ್ನು ಕೊಟ್ಟರೂ ಆರೋಗ್ಯ ಸೇವೆಯನ್ನು ಸಮರ್ಪಕವಾಗಿ ತಲುಪಿಸುವವರು ವೈದ್ಯರು ಮತ್ತು ಆಸ್ಪತ್ರೆಯಲ್ಲಿನ ಸಿಬ್ಬಂದಿ ಮಾತ್ರ. ಜನರು ವೈದ್ಯರನ್ನು ದೇವರೆಂದು ಪರಿಗಣಿಸಿ, ಆಸ್ಪತ್ರೆಯನ್ನು ದೇವಸ್ಥಾನದಂತೆ ಕಾಣುತ್ತಾರೆ.
ಟೊಮೆಟೋ ಆಯ್ತು, ಈಗ ದಾಳಿಂಬೆ ಕಾವಲಿಗೆ ಬಂದೂಕು ಹಿಡಿದ ರೈತರು
ಅವರ ಭಾವನೆಗೆ ಚ್ಯುತಿಬಾರದಂತೆ ಎಲ್ಲರೂ ವೃತ್ತಿ ಧರ್ಮ ಪಾಲಿಸಬೇಕು. ಖಾಸಗಿ ವೈದ್ಯರು ಸಹ ಮಾನವಿಯತೆ ಮೆರೆದು ಆರೋಗ್ಯ ಸೇವೆ ಮಾಡಬೇಕು ಎಂದು ಮನವಿ ಮಾಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಮಂತ್ರಿಗಳನ್ನು ಈಗಾಗಲೇ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಹೆದ್ದಾರಿಗಳು ಅಭಿವೃದ್ಧಿಯಾದರೆ ಕೈಗಾರಿಕೆಗಳು ಬರುತ್ತವೆ ಜನರಿಗೆ ಉದ್ಯೋಗ ಸಿಗಲಿದೆ. ಚಿಂತಾಮಣಿ ನಗರಕ್ಕೆ ಬೈಪಾಸ್ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ ಎಂದು ಸಚಿವರು ಈ ವೇಳೆ ತಿಳಿಸಿದರು.
ಸಚಿವರನ್ನು ಹಾಡಿ ಹೊಗಳಿದ ಸಂಸದ: ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಕಾಂಗ್ರೆಸ್ ಸಚಿವ ಡಾ.ಎಂ.ಸಿ.ಸುಧಾಕರ್ ಅಭಿವೃದ್ದಿಯ ಹರಿಕಾರ. ಅವರ ಎಲ್ಲಾ ಅಭಿವೃದ್ದಿ ಕಾರ್ಯಗಳಿಗೆ ಕೈ ಜೋಡಿಸುವುದಾಗಿ ತಿಳಿಸಿ, ಹಿಂದಿನ ಶಾಸಕರು ರಸ್ತೆಯಲ್ಲಿದ್ದ ಗಿಡಗಳಿಗೆ ನೀರನ್ನೇ ಹಾಕಿಲ್ಲ. ಆದರೆ ಸುಧಾಕರ್ ಶಾಸಕರಾದ ನಂತರ ಆ ಗಿಡಗಳಿಗೆ ನೀರು ಹಾಕಿಸುತ್ತಿದ್ದು ಇದರಿಂದ ಚಿಂತಾಮಣಿ ನಗರ ಹಸಿರು ಮಯವಾಗಿ ಕಂಗೊಳಿಸುತ್ತಿದೆ ಎಂದು ಹೊಗಳಿ,ಚಿಂತಾಮಣಿ ನಗರದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಮೇಲ್ದರ್ಜೆಗೆ ಶಿಲಾನ್ಯಾಸ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ತಹಸೀಲ್ದಾರ್ ಸುರೇಶ್ ಯಾದವ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆನಂದ್, ತಾಲ್ಲೂಕು ಆರೋಗ್ಯಾಧಿಕಾರಿ ರಾಮಚಂದ್ರರೆಡ್ಡಿ, ಪೌರಾಯುಕ್ತ ಚಲಪತಿ ಸೇರಿದಂತೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಇದ್ದರು.
ಬದುಕಿರುವವರೆಗೆ ಬಿಜೆಪಿಯಲ್ಲಿರುವೆ ಕಾಂಗ್ರೆಸ್‌ಗೆ ಸೇರಲ್ಲ: ಶಾಸಕ ಶರಣು ಸಲಗರ ಸ್ಪಷ್ಟನೆ
ತಪ್ಪಿತಸ್ಥರ ವಿರುದ್ಧ ಕ್ರಮ: ಗೌರಿಬಿದನೂರು ತಾಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 10 ವರ್ಷದ ಬಾಲಕಿ ಭಾವನಾ ಸಾವು ಪ್ರಕರಣ ಕುರಿತು ಪ್ರಸ್ತಾಪಿಸಿದ ಸಚಿವ ಡಾ.ಸುಧಾಕರ್, ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಕಲುಷಿತ ನೀರು ಸೇವನೆ ಮಾಡಿ ಮೃತಪಟ್ಟಿದ್ದರೆ ಪಂಚಾಯ್ತಿ ಅಧಿಕಾರಿಗಳ ಮತ್ತು ಪಂಚಾಯ್ತಿಯವರ ನಿರ್ಲಕ್ಷ್ಯದ ಬಗ್ಗೆ ಸೂಕ್ತ ಕ್ರಮ ಗೈಗೊಳ್ಳುತ್ತೇನೆ. ಇಂತಿಷ್ಟುದಿನಕ್ಕೆ ಟ್ಯಾಂಕ್ ಗಳನ್ನು ಸ್ವಚ್ಛ ಮಾಡಬೇಕೆಂದು ತಿಳಿಸಿದ್ದೇವೆ .ಕೂಡಲೆ ವರದಿ ನೀಡುವಂತೆ ಜಿಲ್ಲಾಧಿಕಾರಿ, ಸಿಇಓ, ಡಿಎಚ್‌ಓ ಗೆ ಸೂಚನೆ ಕೊಟ್ಟಿದ್ದೇನೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.