Chikkaballapur: ಡಿ.ಕೆ.ಶಿವಕುಮಾರ್‌ ಹಿನ್ನಲೆ ಏನು: ಸಂಸದರ ಪ್ರಶ್ನೆ

ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಯಾರು, ಎಲ್ಲಿದ್ದರು, ಅವರ ಯಾರ ಶಿಷ್ಯರು ಎಂದು ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಪ್ರಶ್ನಿಸಿದರು. ಮೊದಲು ಅವರ ಹಿನ್ನೆಲೆ ತಿಳಿದುಕೊಂಡು ಬೇರೆಯವರ ಬಗ್ಗೆ ಮಾತನಾಡಲಿ ಎಂದು ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಟಾಂಗ್‌ ನೀಡಿದರು.

Kolar MP S Muniswamy Outraged Agianst DK Shivakumar At Chikkaballapur gvd

ಚಿಕ್ಕಬಳ್ಳಾಪುರ (ಡಿ.01): ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಯಾರು, ಎಲ್ಲಿದ್ದರು, ಅವರ ಯಾರ ಶಿಷ್ಯರು ಎಂದು ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಪ್ರಶ್ನಿಸಿದರು. ಮೊದಲು ಅವರ ಹಿನ್ನೆಲೆ ತಿಳಿದುಕೊಂಡು ಬೇರೆಯವರ ಬಗ್ಗೆ ಮಾತನಾಡಲಿ ಎಂದು ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಟಾಂಗ್‌ ನೀಡಿದರು.

ಜಿಪಂ ಸಭಾಂಗಣದಲ್ಲಿ ಬುಧವಾರ ದಿಶಾ ಸಭೆ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸದರು ರೌಡಿಗಳ ಜೊತೆ ವೇದಿಕೆ ಹಂಚಿಕೊಂಡಿರುವ ಕುರಿತು ಕೇಳಿದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಸಂಸದರು ರಕ್ತದಾನ ಶಿಬಿರವೆಂದು ಹೋಗಿದ್ದಾರೆ. ಆದರೆ ಸಂಘಟಕರ ಹಿನ್ನೆಲೆ ಅವರಿಗೆ ಗೊತ್ತಿರಲಿಲ್ಲ ಎಂದರು.

Chikkaballapur: ಜಲ ಜೀವನ್‌ ಮಿಷನ್‌ ಯೋಜನೆ: ಜಿಲ್ಲೆಗೆ 1050 ಕೋಟಿ ಬಿಡುಗಡೆ

ಕಾಂಗ್ರೆಸ್‌ದು ರೌಡಿಸಂ: 60 ವರ್ಷಗಳಿಂದ ಈ ದೇಶವನ್ನು ಆಳಿದ ಕಾಂಗ್ರೆಸ್‌ ನಾಯಕರು ರೌಡಿಸಂ ಯಾವ ರೀತಿ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಜನಪ್ರತಿನಿಧಿಗಳ ಬಳಿ ಸಾರ್ವಜನಿಕವಾಗಿ ಎಲ್ಲರೂ ಬರುತ್ತಾರೆ ಕೆಟ್ಟವರು, ಒಳ್ಳೆಯವರು ಬರುತ್ತಾರೆ. ಅವರ ಹಿನ್ನೆಲೆ ಬಗ್ಗೆ ಯಾರಿಗೆ ಏನು ಗೊತ್ತಿರುತ್ತೆ. ಮೊದಲನಿಂದಲೂ ರೌಡಿಸಂ ಸಂಸ್ಕೃತಿಯ ಹಿನ್ನಲೆ ಇರುವುದು ಕಾಂಗ್ರೆಸ್‌ ನಾಯಕರಿಗೆ, ಶಾಸಕರಾದ ಜಮೀರ್‌ ಅಹಮ್ಮದ್‌, ದೇವರಾಜ್‌, ಶಾಸಕ ಹ್ಯಾರೀಸ್‌ ಮಗ ನಲಪಾಡ್‌ ಯಾವ ಹಿನ್ನೆಲೆಯಿಂದ ಬಂದವರು ಎಂದು ಸಂಸದ ಎಸ್‌.ಮುನಿಸ್ವಾಮಿ ಕಾಂಗ್ರೆಸ್‌ ನಾಯಕರ ವಿರುದ್ದ ಕಿಡಿಕಾರಿದರು.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ತಮ್ಮ ಸಾಧನೆ ಹೇಳಿಕೊಂಡು ಹೋಗುವುದು ಬಿಟ್ಟು ಈ ರೀತಿ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಮತದಾರರ ಮಾಹಿತಿ ಕಳುವು ಮಾಡಲಾಗಿದೆಯೆಂದು ಹೇಳಲಾಗುತ್ತಿದೆ. ಕೋವಿಡ್‌ ಸಂಕಷ್ಟದಲ್ಲಿ ಸಾಕಷ್ಟುಕುಂಟುಬಗಳು ನಗರ ಬಿಟ್ಟು ಹಳ್ಳಿಗಳಿಗೆ ಬಂದವು. ಪರಿಶೀಲನೆ ವೇಳೆ ಅಲ್ಲಿ ಇಲ್ಲದವರ ಹೆಸರನ್ನು ತೆಗೆದು ಹಾಕಿದ್ದಾರೆ. ಜೊತೆಗೆ ಕೆಲವೊಂದು ಲೋಪದೋಷಗಳು ನಡೆದಿರಬಹುದು. ಇದರ ವಿರುದ್ಧ ಈಗಾಗಲೇ ಸಿಎಂ ಕ್ರಮ ವಹಿಸಿ ಹಲವರ ಮೇಲೆ ಕಾನೂನು ಕ್ರಮ ಆಗಿದೆ ಎಂದರು.

Chikkaballapur: ಎಎಸ್‌ಐ ಮನೆ ದರೋಡೆ ನಡೆಸಿದ್ದ ಅಂತರಾಜ್ಯ ಕಳ್ಳರ ಬಂಧನ

ಮೋದಿಗೆ ಖರ್ಗೆ ಪ್ರಮಾಣ ಪತ್ರ ಬೇಡ: ಪ್ರಧಾನಿ ಮೋದಿರನ್ನು ರಾವಣನಿಗೆ ಹೋಲಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಮುನಿಸ್ವಾಮಿ, ಈ ಹಿಂದೆ ಕೂಡ ಈ ರೀತಿ ಹೇಳಿಕೆ ಕೊಟ್ಟು ಅವರು ತಮ್ಮ ಕ್ಷೇತ್ರದಲ್ಲಿ ಸೋತಿದ್ದಾರೆ. ಲೋಕಸಭೆ ಸಂಸದರಾಗಿದ್ದವರು ಈಗ ರಾಜ್ಯಸಭಾ ಸದಸ್ಯರಾಗಿದ್ದಾರೆ. ಇವರಿಂದ ಮೋದಿಗೆ ಪ್ರಮಾಣ ಪತ್ರ ಬೇಡ ಎಂದರು.

Latest Videos
Follow Us:
Download App:
  • android
  • ios