ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡುಹೊಡೆದ ಕೋಲಾರ ಪಕ್ಷೇತರ ಅಭ್ಯರ್ಥಿ!
ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆದು ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಕೋಲಾರ (ಮೇ 3): ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರ ಈ ಭಾರಿ ಜಿಲೆಯಲ್ಲೇ ಅತೀ ಹೆಚ್ಚು ಸೂಕ್ಮ ಹಾಗೂ ಗಮನಸೆಳೆದಿರುವ ಕ್ಷೇತ್ರವಾಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಬಿಜೆಪಿ ಟಿಕೆಟ್ ವಂಚಿತ ಅಭ್ಯರ್ಥಿ ಹೂಡಿ ವಿಜಯಕುಮಾರ್ ಸಾಕಷ್ಟೂ ಗಮನಸೆಳೆದಿದ್ದು ಸ್ವಾಭಿಮಾನಿ ಹೂಡಿ ವಿಜಯ ಕುಮಾರ್ ಪಕ್ಷ ಎಂದು ಸಂಚಲನ ಸೃಷ್ಟಿ ಮಾಡಿದೆ.
ಪತ್ನಿ ಶ್ವೇತಾ ಹಾಗೂ ಹೂಡಿ ವಿಜಯಕುಮಾರ್ ಸೇರಿದಂತೆ ಎಲ್ಲಾ ಬೆಂಬಲಿಗರು, ಕಾರ್ಯಕರ್ತರು ಕ್ಷಣ ಬಿಡದೇ ಕ್ಷೇತ್ರದಲ್ಲಿ ಪ್ರಚಾರ ಮಾಡ್ತಿದ್ದು, ತಮ್ಮ ಆಟೋ ಗುರುತಿನ ಚಿಹ್ನೆಗೆ ಮತ ಕೇಳ್ತಿದ್ದಾರೆ. ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಸಿಟಿ ರವಿ, ಶೋಭಾ ಕರಂದ್ಲಾಜೆ, ಡಾ.ಸುಧಾಕರ್ ಸೇರಿದಂತೆ ಹಲವಾರು ಮುಖಂಡರು ಎಷ್ಟೇ ಮನವೊಲಿಸಲು ಪ್ರಯತ್ನ ಮಾಡಿದ್ರು ಮಾತು ಕೇಳದೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧೆ ಮಾಡಿರುವ ಹೂಡಿ ವಿಜಯಕುಮಾರ್ ಅವರಿಗೆ ಈ ಬಾರಿ ಸ್ವಾಭಿಮಾನಿ ಅನ್ನೋ ಅನುಕಂಪ ಪ್ರತಿ ಹಳ್ಳಿಗಳಲ್ಲಿ ಶುರುವಾಗಿದೆ. ಇದರಿಂದಾಗಿ ಉಳಿದ ಪಕ್ಷಗಳ ಅಭ್ಯರ್ಥಿಗಳ ನಡುವೆ ವಿಭಿನ್ನವಾಗಿ ಕಾಣ್ತಿದ್ದಾರೆ.
ಮೇ 5 ರಂದು ಮಾಂಸ ಮಾರಾಟ ನಿಷೇಧ: ಮೇ 10ಕ್ಕೆ ನಂದಿ ಬೆಟ್ಟಕ್ಕೆ ಪ್ರವೇಶ ನಿಷೇಧ!
ಪ್ರಮುಖವಾಗಿ ಹೂಡಿ ವಿಜಯ ಕುಮಾರ್ ಮೂಲ ಬಿಜೆಪಿಗರು, ದಲಿತ ಸಮುದಾಯದವ, ಮುಸ್ಲಿಮರ, ಹಿಂದುಳಿತ ವರ್ಗಗಳ ಹಾಗೂ ಕ್ಷತ್ರಿಯಾ ಸಮುದಾಯದ ವೋಟುಗಳನ್ನು ಸೆಳೆಯುತ್ತಾರೆ ಅಂತ ಹೇಳಲಾಗ್ತಿದ್ದು, ಅತೀ ಹೆಚ್ಚಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ವೋಟು ಸೆಳೆಯುತ್ತಾರೆ ಅಂತ ಅಂದಾಜಿಸಲಾಗಿದೆ. ಇನ್ನು ಬಿಜೆಪಿ ಪಕ್ಷದಿಂದ ಟಿಕೇಟ್ ಕೈತಪ್ಪಿ ಆಟೋ ಗುರುತಿನಲ್ಲಿ ಸ್ಫರ್ಧೆ ಮಾಡ್ತಿರುವ ಹೂಡಿ ವಿಜಯ ಕುಮಾರ್ ಆಕ್ರೋಶ ಹೊರ ಹಾಕಿದ್ದರು. ನಮ್ಮ ಸ್ವಾಭಿಮಾನ ಹೋರಾಟಕ್ಕೆ ಯಾವುದೇ ಗ್ರಾಮಗಳಿಗೆ ಹೋದ್ರೂ ಪಕ್ಷೇತರವಾಗಿ ಬೆಂಬಲ ಸಿಗ್ತಿದೆ ಎಂದರು.
ಕಳೆದ ನಾಲ್ಕುವರೆ ವರ್ಷಗಳಿಂದ ಕೆಲಸ ಮಾಡಿಕೊಂಡ ಬಂದ ನನಗೆ ಟಿಕೇಟ್ ತಪ್ಪಿಸಿರಬಹುದು ಆದರೆ ಮಾಲೂರು ಜನರು ನನಗೆ ಅನ್ಯಾಯ ಆಗೋದಕ್ಕೆ ಬಿಡೋದಿಲ್ಲ. ಅಧಿಕಾರ ಅನುಭವಿಸಿ ಹೋದವರು ಸಹ ಕೋವಿಡ್ ವೇಳೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆ ವೇಳೆ ನಾನು ಮಾಡಿರುವ ಸೇವೆಯನ್ನು ಜನರು ಗುರುತಿಸುತ್ತಿದ್ದಾರೆ. ಪ್ರತಿ ಗ್ರಾಮಗಳಲ್ಲಿ ಸ್ವಾನಿಟೈಸ್ ಮಾಡಿದ್ದೇನೆ, ಫುಡ್ ಕಿಟ್ ಕೊಟ್ಟಿದ್ದೇನೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇನೆ ಈ ಎಲ್ಲಾ ವಿಚಾರ ಈ ಬಾರಿ ನನ್ನ ಕೈ ಹಿಡಿಯಲಿದೆ.
ಒಬಿಸಿಯವನೆಂದು ಬಿಜೆಪಿ ಟಿಕೇಟ್ ನೀಡಿಲ್ಲ: ನಾನು ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ಕೆಲವರು ನನಗೆ ಟಿಕೇಟ್ ತಪ್ಪಿಸಿದ್ದಾರೆ. ಅಷ್ಟೆಲ್ಲಾ ಸಂಘಟನೆ ಮಾಡಿಕೊಂಡು ಬಂದರು ಸಹ ಗುರುತಿಸಿಲ್ಲ, ಟಿಕೆಟ್ ಮಿಸ್ ಆಗಿದ್ದು ನನಗೆ ಒಂದೂ ರೀತಿ ಆಶೀರ್ವಾದ ಆಗಿದ್ದು, ಮುಸ್ಲಿಂ ಸಮುದಾಯ ಒಳಗೊಂಡಂತೆ ಜನರು ಪಕ್ಷಾತೀತವಾಗಿ ಬೆಂಬಲ ನೀಡ್ತಿದ್ದಾರೆ. ನನ್ನ ವಿರುದ್ದ ನಾಲ್ಕು ಜನ ವಿಜಯ್ ಕುಮಾರ್ ಎಂಬುವವರನ್ನು ಹಾಕಿಸಿದ್ರು, ನನಗೆ ಬೇಕಿದ್ದು ಆಟೋ ಗುರುತು ಸಹ ಲಾಟರಿ ಮೂಲಕ ಸಿಕ್ಕಿದ್ದು ಗೆಲುವಿಗೆ ಸಹಕಾರ ಆಗಲಿದೆ.
ಬಜರಂಗದಳ ಬ್ಯಾನ್: ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಕಾಂಗ್ರೆಸ್ ನಾಯಕರು!
ಸಂಸದ ಮುನಿಸ್ವಾಮಿ ವಿರುದ್ದ ಸ್ಥಳೀಯರ ಬೇಸರ: ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುವ ವೇಳೆ ಹೂಡಿ ವಿಜಯ್ ಕುಮಾರ್ ವಿರುದ್ದ ಸಂಸದ ಮುನಿಸ್ವಾಮಿ ವಾಗ್ದಾಳಿ ಮಾಡುವ ಮೂಲಕ ಟೀಕೆ ಮಾಡಿದ್ದರು. ಇದರಿಂದ ಶ್ವೇತಾ ವಿಜಯ್‌ಕುಮಾರ್ ಅವರು ಸಂಸದರ ಹೇಳಿಕೆಯನ್ನು ನೆನಪಿಸಿ ಕಣ್ಣೀರು ಹಾಕಿದರು. ಈ ಬಗ್ಗೆ ಮಾತನಾಡಿದ ಹೂಡಿ ವಿಜಯ್‌ಕುಮಾರ್ ಸಂಸದ ಮುನಿಸ್ವಾಮಿ ವಿರುದ್ದ ಎಲ್ಲಾ ಪಕ್ಷದವರು ಉಗಿಯುತ್ತಿದ್ದಾರೆ. ಅವರ ಬಗ್ಗೆ ಮಾತನಾಡಿ ಪ್ರಯೋಜನ ಇಲ್ಲ. ಇಲ್ಲಿ ಯಾರು ಕೆಲಸ ಮಾಡಿದ್ದಾರೆ ಎಂದು ಜನರೇ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಸಚಿವ ಸುಧಾಕರ್ ಜೊತೆ ಮಾತನಾಡಿದ ಆಡಿಯೋ ವೈರಲ್: ಚಿಕ್ಕತಿರುಪತಿ ದೇವಸ್ಥಾನದಲ್ಲಿ ನಾನು ಪೂಜೆ ಮುಗಿಸಿ ಹೊರ ಬಂದ ಬಳಿಕ ಆರೋಗ್ಯ ಸಚಿವ ಸುಧಾಕರ್ ಅವರು ಕರೆ ಮಾಡಿ ಕೆಲ ನಿಮಿಷ ಮಾತನಾಡಿದ್ದರು. ನನ್ನ ಜೊತೆ ಇದ್ದ 300 ಜನರ ಮಧ್ಯೆ ಮೊಬೈಲ್ ಸ್ಪೀಕರ್ ಆನ್ ಮಾಡಿ ಮಾತನಾಡಿದ್ದೇನೆ. ವಿಜಿ ಅವರೇ ನಿಮಗೆ ಅನ್ಯಾಯ ಆಗಿದೆ, ನಾವು ಸರಿಪಡಿಸುವ ಕೆಲಸ ಮಾಡುತ್ತೇವೆ ಮುಂದಿನ ದಿನಗಳಲ್ಲಿ ನಿಮ್ಮನ್ನು ಎಂಎಲ್‌ಸಿ ಮಾಡುತ್ತೇವೆ ನಿಮ್ಮ ನಾಮಪತ್ರ ವಾಪಸ್ಸು ಪಡೆದುಕೊಳ್ಳಿ ಎಂದು ಸುಧಾಕರ್ ಹೇಳಿದ್ದರು. ಶ್ರೀನಿವಾಸಪುರ ಕ್ಷೇತ್ರಕ್ಕೆ ಹೋಗಿ ಸ್ಪರ್ಧೆ ಮಾಡಿ ಎಂದು ಕೇಳಿಕೊಂಡರು. ಜಿಲ್ಲೆಯಲ್ಲಿ ಯಾರಿಗಾದರೂ ಒಕ್ಕಲಿಗ ಸಮುದಾಯಕ್ಕೆ ಟಿಕೇಟ್ ನೀಡಲೇಬೇಕು ಎಂದು ಮಂಜುನಾಥ್ ಗೌಡ ಅವರಿಗೆ ಟಿಕೇಟ್ ನೀಡಿದ್ದೇವೆ ಎಂದು ಹೇಳಿದರು.
ವೈರಲ್ ಆಡಿಯೋ ಬಗ್ಗೆ ಸ್ಪಷ್ಟನೆಕೊಟ್ಟ ವಿಜಯ್: ಇದಕ್ಕೆ ಪ್ರತಿಕ್ರಿಯೆ ನೀಡಿದ ನಾನು, ಆಗೊಲ್ಲ ಸಾರ್ ಕೆಲವೇ ಮತಗಳಿರುವ ಕೃಷ್ಣಯ್ಯ ಶೆಟ್ಟಿಅವರನ್ನು ಮಾಲೂರಿನ ಜನರು ಗೆಲ್ಲಿಸಿದ್ದಾರೆ. ನಾಗರಾಜ್ ಹಾಗೂ ಪಿಎನ್ ರೆಡ್ಡಿ ಅವರನ್ನು ಗೆಲ್ಲಿಸಿದ್ದಾರೆ. ಈಗಿರುವಾಗ ನಾನು ಹಿಂದುಳಿದ ಸಮುದಾಯಕ್ಕೆ ಸೇರಿದವನು ಎಂದು ನನಗೆ ಟಿಕೇಟ್ ತಪ್ಪಿಸಿದ್ದೀರಿ. ಈಗ ನಾನು ಗೆದ್ದುಕೊಂಡು ಬರುವುದಾಗಿ ಹೇಳಿದ್ದೇನೆ. ನಿಮ್ಮ ಕೈಯಲ್ಲಾದರೆ ಸಹಾಯ ಮಾಡಿ, ಆದರೆ ತೊಂದರೆ ಕೊಡಬೇಡಿ ಎಂದು ಹೇಳಿದ್ದೇನೆ. ಆದರೆ, ನಾನು ಮಾತನಾಡಿರುವ ಎಲ್ಲ ಆಡಿಯೀ ಕಟ್ ಮಾಡಿ ಗೆದ್ದುಕೊಂಡು ಬರುತ್ತೇನೆ ಎನ್ನುವುದನ್ನು ಮಾತ್ರ ಹಾಕಿದ್ದಾರೆ ಎಂದು ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿದರು.