ಬೆಂಗಳೂರು, (ಡಿ.11): ಕೋಡಿಹಳ್ಳಿ ಒಬ್ಬ ನಾಲಾಯಕ್ ಎಂದು ಹೇಳಿಕೆ ಕೊಟ್ಟಿದ್ದ ಬಿಜೆಪಿ ಶಾಸಕರು ಎಂ.ಪಿ ರೇಣುಕಾಚಾರ್ಯ ಅವರುಗೆ ಕೋಡಿಹಳ್ಳಿ ಚಂದ್ರಶೇಖರ್ ತಿರುಗೇಟು ಕೊಟ್ಟಿದ್ದಾರೆ. 

"

ಕೋಡಿಹಳ್ಳಿ ಚಂದ್ರಶೇಖರ್ ಸಂಘಟಿತ ದಲ್ಲಾಳಿಗಳ ಮುಖ್ಯಸ್ಥ. ಈತನಿಂದ ಸಾರಿಗೆ ನೌಕರರ ಸಮಸ್ಯೆ ಬಗೆಹರಿಯಲ್ಲ. ಅವರದ್ದೇನಿದ್ದರೂ ಬೆಂಕಿ ಹಚ್ಚುವ ಕೆಲಸ. ಸಾರಿಗೆ ಸಿಬ್ಬಂದಿಗೂ ಕೋಡಿಹಳ್ಳಿ ಚಂದ್ರಶೇಖರ್‌ಗೂ ಏನು ಸಂಬಂಧ. ಆತ ಒಬ್ಬ ನಾಲಾಯಕ್​ ಎಂದು ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದರು.

ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಇದಕ್ಕೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ಯಾವ ರೇಣುಕಾಚಾರ್ಯ? ಅದೇ ಆ ನರ್ಸ್ ಕೇಸ್? ಅವ್ರೇನಾ? ಕಚ್ಚೆ ಸರಿಯಿಲ್ಲ ಬಾಯಿ ಸರಿಯಿಲ್ಲ ಆ ವಯ್ಯನ ಬಗ್ಗೆ ಏನು ಹೇಳೋದು? ಎಂದು ತೀಷ್ಣವಾಗಿ ರೇಣುಕಾಚಾರ್ಯಗೆ ಟಾಂಗ್ ಕೊಟ್ಟರು. 

ಕಳೆದ ಮೂರು ದಿನಗಳಿಂದ ವಿವಿಧ ಬೇಡಿಕೆ ಈಡೇರಿವಂತೆ ರಾಜ್ಯ ಸಾರಿಗೆ ನೌಕರರು ಪ್ರತಿಭಟನೆ ಕೈಗೊಂಡಿದ್ದು, ಬಸ್‌ ಇಲ್ಲದೇ ಪ್ರಯಾಣಿಕರು ಸಾಕಷ್ಟು ಪರದಾಡಿದರು.

ಇನ್ನು ಈ ಪ್ರತಿಭಟನೆಯ ನೇತೃತ್ವವ ವಹಿಸಿಕೊಂಡಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಹ ಕೋಡಿಹಳ್ಳಿಗೆ ಈ ಸಾರಿಗೆ ನೌಕರರಿಗೆ ಏನ ಸಂಬಂಧ..? ಅವರೊಬ್ಬ ರೋಲ್‌ಕಾಲ್ ಮನುಷ್ಯ, ಹಾಗೇ ಹೀಗೆ ಅಂತೆಲ್ಲಾ ಬೈಯುತ್ತಿದ್ದಾರೆ.