ಹಾಸನದಲ್ಲಿ ಭವಾನಿ, ಸ್ವರೂಪ್‌ ಇಬ್ಬರನ್ನೂ ಬಿಟ್ಟು ರಾಜೇಗೌಡ?

ಈ ಹಿಂದೆ ಭವಾನಿ ರೇವಣ್ಣ ತಾವು ಹಾಸನದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಇದಕ್ಕೆ ಕುಮಾರಸ್ವಾಮಿಯವರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಸ್ವರೂಪ್‌ ಅವರನ್ನು ಕಣಕ್ಕಿಳಿಸಲು ಅವರು ಉತ್ಸುಕತೆ ತೋರಿದ್ದರು. ಇದಕ್ಕೆ ಸಡ್ಡು ಹೊಡೆದು, ಸ್ವರೂಪ್‌ ಬದಲಿಗೆ ರಾಜೇಗೌಡರನ್ನು ನಿಲ್ಲಿಸಲು ರೇವಣ್ಣ ಯತ್ನ. 

KM Rajegowda Likely Contest in Hassan in Karnataka Assembly Elections 2023 grg

ಹಾಸನ(ಮಾ.19):  ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ ಅವರು ಶುಕ್ರವಾರ ರಾತ್ರಿ ನಗರದಲ್ಲಿರುವ ಕೆ.ಎಂ.ರಾಜೇಗೌಡರ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ.

ಕೆಲ ನಂಬಿಕಸ್ಥ ಮುಖಂಡರ ಜತೆ ಆಗಮಿಸಿದ ರೇವಣ್ಣ, ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಅವರ ಜೊತೆ ಮಾತುಕತೆ ನಡೆಸಿದರು. ಮಾತುಕತೆ ವೇಳೆ, ನೀವು ಹಾಸನದಲ್ಲಿ ಅಭ್ಯರ್ಥಿಯಾಗುವುದಾದರೆ ನಮ್ಮದೇನು ತಕರಾರಿಲ್ಲ. ನಾವೂ ಸಹಕಾರ ನೀಡುತ್ತೇವೆ ಎಂದು ಆಶ್ವಾಸನೆ ನೀಡಿರುವುದಾಗಿ ತಿಳಿದು ಬಂದಿದೆ. ಹಾಗೆಯೇ ಮುಖಂಡರು ಕೂಡ ನಮಗೆ ಜೆಡಿಎಸ್‌ ಗೆಲ್ಲಬೇಕಷ್ಟೆ. ಅಭ್ಯರ್ಥಿ ಯಾರೇ ಅದರೂ ಸರಿ. ಹಾಗಾಗಿ ನಾವೂ ನಿಮ್ಮನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ. ಇದರ ಮಧ್ಯೆ ಕೆ.ಎಂ.ರಾಜೇಗೌಡರು ಕೂಡ ಎಲ್ಲರೂ ಒಗ್ಗಟ್ಟಿನಿಂದ ತಮ್ಮನ್ನು ಬೆಂಬಲಿಸುವಂತೆ ಕೈಮುಗಿದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯಗೆ ಗೆಲುವಿನ ಗ್ಯಾರಂಟಿ ಇಲ್ಲ, ಇತರರನ್ನು ಹೇಗೆ ಗೆಲ್ಲಿಸುತ್ತಾರೆ: ಎಚ್‌.ಡಿ.ಕುಮಾರಸ್ವಾಮಿ

ಈ ಹಿಂದೆ ಭವಾನಿ ರೇವಣ್ಣ ಅವರು ತಾವು ಹಾಸನದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಇದಕ್ಕೆ ಕುಮಾರಸ್ವಾಮಿಯವರು ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಸ್ವರೂಪ್‌ ಅವರನ್ನು ಕಣಕ್ಕಿಳಿಸಲು ಅವರು ಉತ್ಸುಕತೆ ತೋರಿದ್ದರು. ಇದಕ್ಕೆ ಸಡ್ಡು ಹೊಡೆದು, ಸ್ವರೂಪ್‌ ಬದಲಿಗೆ ರಾಜೇಗೌಡರನ್ನು ನಿಲ್ಲಿಸಲು ರೇವಣ್ಣ ಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios