KGF Election Results 2023: 2ನೇ ಬಾರಿಯೂ ಕೆಜಿಎಫ್‌ನಲ್ಲಿ ಕಾಂಗ್ರೆಸ್‌ನ ರೂಪಕಲಾ ಗೆಲುವು

ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕಿ ರೂಪಕಲಾಶಶಿಧರ್‌ ಜಯಗಳಿಸಿದ್ದಾರೆ. ಅವರು 81569 ಮತ ಪಡೆಯುವ ಮೂಲಕ ತಮ್ಮ ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಅಶ್ವಿನಿ ಸಂಪಂಗಿರನ್ನು ಸೋಲಿಸಿದ್ದಾರೆ.

KGF Election Results 2023 Roopakala of Congress wins in kgf constituency for the 2nd time gvd

ಕೆಜಿಎಫ್‌ (ಮೇ.14): ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಶಾಸಕಿ ರೂಪಕಲಾಶಶಿಧರ್‌ ಜಯಗಳಿಸಿದ್ದಾರೆ. ಅವರು 81569 ಮತ ಪಡೆಯುವ ಮೂಲಕ ತಮ್ಮ ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಅಶ್ವಿನಿ ಸಂಪಂಗಿರನ್ನು ಸೋಲಿಸಿದ್ದಾರೆ. 2018 ರ ಚುನಾವಣೆಯಲ್ಲಿ ಶಾಸಕಿ ರೂಪಕಲಾ ಶಶಿಧರ್‌ 71 ಸಾವಿರ ಮತಗಳನ್ನು ಪಡೆದಿದ್ದರು, 2023 ರಲ್ಲಿ ಇನ್ನೂ 10 ಸಾವಿರ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಕೆಜಿಎಫ್‌ ಜನತೆ ಅಭಿವೃದ್ದಿಪರವಾಗಿ ಮತವನ್ನು ನೀಡಿರುವುದಾಗಿ ಶಾಸಕರು ತಿಳಿಸಿದರು. ತಮ್ಮ ಸಮೀಪ ಸ್ಪರ್ಧಿ ಬಿಜೆಪಿ ಪಕ್ಷದ ಅಶ್ವಿನಿ ಸಂಪಂಗಿ 31102 ಮತಗಳನ್ನು ಪಡೆದಿಕೊಂಡರೆ, ಆರ್‌ಪಿಐನ ಎಸ್‌.ರಾಜೇಂದ್ರನ್‌ 29775 ಮತಗಳನ್ನು ಪಡೆದುಕೊಂಡು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ, ಶಾಸಕಿ ರೂಪಕಲಾಶಶಿಧರ್‌ 2018 ರಲ್ಲಿ 41 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು, 2023 ರಲ್ಲಿ 50174 ಮತಗಳ ಲೀಡ್‌ನಲ್ಲಿ ಜಯಗಳಿಸಿದ್ದಾರೆ.

ನನ್ನ ಗೆಲವು ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿಗೆ ಸಂದ ಜಯವಾಗಿದ್ದು, ಈ ಜಯವು ಎಲ್ಲಾ ನನ್ನ ಪ್ರೀತಿಯ ಮತಬಾಂದವರ ಪಾದಗಳಿಗೆ ಅರ್ಪಿಸುವುದಾಗಿ ಶಾಸಕಿ ರೂಪಕಲಾಶಶಿಧರ್‌ ಹೇಳಿದರು. ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ 2ನೇ ಬಾರಿಗೆ ಗೆಲುವು ಸಾಧಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ಕೆಜಿಎಫ್‌ ಜನರು ವಿದ್ಯಾವಂತರಾಗಿದ್ದು, ಕೆಜಿಎಫ್‌ ಜನರು ಶ್ರಮಜೀವಿಗಳಾಗಿ ಸ್ವಾಭಿಮಾನ ಬದುಕನ್ನು ನಡೆಸುತ್ತಿದ್ದಾರೆ, ಅಂತಹ ಮತದಾರರು ಯಾರನ್ನು ಆಯ್ಕೆ ಮಾಡಬೇಕೆಂದು ಚಿಂತನೆ ಮಾಡಿ ನಾನು ಮಾಡಿರುವ ಅಭಿವೃದ್ದಿ ಗುರುತಿಸಿ ಅತ್ಯಧಿಕ ಮತಗಳನ್ನು ನೀಡಿ ನನಗೆ ಶಕ್ತಿ ತುಂಬಿದ್ದಾರೆ.

ಇನ್ನೇನು ಸೋತಾಗಿದೆ, ಏನ್ ಮಾತಾಡ್ಲಿ, ಸೋತಾಯಿತಲ್ಲ: ವಿ.ಸೋಮಣ್ಣ

ಕಾಂಗ್ರೆಸ್‌ ಸರಕಾರಬಂದಿದ್ದು ಚಿನ್ನದ ಗಣಿಗಳ ಕಾರ್ಮಿಕರ ಮನೆಗಳ ಸಮಸ್ಯೆ ಮತ್ತು ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು, ಪ್ರತಿ ದಿನ 15 ಸಾವಿರ ಕಾರ್ಮಿಕರ ಕುಟುಂಬಗಳು ಕೆಲಸಕ್ಕೆ ಬೆಂಗಳೂರಿಗೆ ಹೋಗಿ ಬರುತ್ತಿದ್ದಾರೆ, ಇಂತಹ ಕಾರ್ಮಿಕರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ಗ್ರಾಮೀಣ ಭಾಗದ ರೈತರಿಗೆ ಗಡಿ ಭಾಗದಲ್ಲಿ 25 ಎಕರೆ ಜಾಗದಲ್ಲಿ ಬೃಹತ್‌ ಮಾರುಕಟ್ಟೆಸ್ಥಾಪನೆ ಮಾಡಿ ರೈತರ ನೆರವಿಗೆ ಧಾವಿಸಲಾಗುವುದು, ಇನ್ನೂ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದೆಂದು ತಿಳಿಸಿದರು.

Channapatna Election Results: ಸೈನಿಕನನ್ನು ಮಕಾಡೆ ಮಲಗಿಸಿದ ದಳಪತಿ: ಯೋಗೇಶ್ವರ್‌ ವಿರುದ್ಧ ಎರಡನೇ ಬಾರಿ ಗೆದ್ದ ಎಚ್‌ಡಿಕೆ

ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಶಾಸಕರು 13 ನಂತರ ಮಾಜಿ ಶಾಸಕರಾಗಲಿದ್ದಾರೆಂದು ಸಂಸದರು ಹೋದಡೆಯಲ್ಲಾ ಬೊಬ್ಬೆ ಹೊಡೆದಿದ್ದರು, ಪರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಸಿದ ಶಾಸಕಿ ಮಕ್ಕಳ ಸೇವೆಯೇ ಮಹೇಶನ ಸೇವೆ ಎಂದು ಉತ್ತರಿಸಿದರು ಕೆಜಿಎಫ್‌ ನಗರದಲ್ಲಿ ಬೆಮೆಲ್‌ ಕಾರ್ಖಾನೆಗೆ ನೀಡಿದ್ದ 974 ಎಕರೆ ಜಾಗವನ್ನು ಗುರುತಿಸಿ ಸಾರಕಾರದ ವಶಕ್ಕೆ ನೀಡಿದ್ದೇನೆ, ಕ್ಷೇತ್ರದಲ್ಲಿ ಅತ್ರ್ಯಾಧುನಿಕ ಮೂಲಬೂತ ಸೌಕರ್ಯಗಳನ್ನು ಕಲ್ಪಿಸಿ ಕೆಜಿಎಫ್‌ ನಗರಕ್ಕೆ ಬಂದವರೂ ಯಾರು ವಾಪಸ್ಸು ಹೋಗಬಾರದು ಆ ರೀತಿಯಲ್ಲಿ ಚಿನ್ನದ ಗಣಿಗಳ ನಗರದ ಇತಿಹಾಸ ಮರುಕಳಿಸುವ ರೀತಿ ಅಭಿವೃದ್ದಿಪಡಿಸುವುದಾಗಿ ತಿಳಿಸಿದರು. ದೇವನಹಳ್ಳಿ ನನ್ನ ಅಜ್ಜಿಯ ಊರಾಗಿದ್ದು, ನಮ್ಮ ತಂದೆಗೆ ದೇವನಹಳ್ಳಿಯಲ್ಲಿ ಸ್ಪರ್ಧೆ ಮಾಡುವ ಇಂಗಿತ ಪಕ್ಷದ ಹೈಕಮಾಂಡ್‌ ಮುಂದೆ ವ್ಯಕ್ತಪಡಿಸಿದ್ದರು, ಅದರಂತೆ ದೇವನಹಳ್ಳಿಯಲ್ಲಿ ನಮ್ಮ ತಂದೆ ಸ್ಪರ್ಧೆ ಮಾಡಿ ಜಯಗಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios