Asianet Suvarna News Asianet Suvarna News

ಸಿದ್ದರಾಮಯ್ಯ ಬಳಿ ನಾಲ್ಕ್‌ ಜೊತೆ ಬಟ್ಟೆನೂ ಇಲ್ಲ, ಅವರ ಮೇಲೆ ಆರೋಪ ಮಾಡೋದು ಎಷ್ಟು ಸರಿ: ಕೆಜಿಎಫ್‌ ಬಾಬು

ಸಿದ್ದರಾಮಯ್ಯ ಅವರ ಮೇಲೆ ಮುಡಾ ಅಕ್ರಮದ ಆರೋಪ ಮಾಡಿರುವ ಟಿಜೆ ಅಬ್ರಾಹಂ ವಿರುದ್ಧ ಕೆಜೆಎಫ್‌ ಬಾಬು ಕಿಡಿಕಾರಿದ್ದಾರೆ. ಟಿಜೆ ಅಬ್ರಾಹಂ ಒಬ್ಬ ಬ್ಲಾಕ್ ಮೇಲರ್, ರೌಡಿ, ಅಫಿಷಿಯಲ್ ಗುಂಡಾ ಎಂದು ಆರೋಪಿಸಿ, ತಮಗೆ ಐದು ಕೋಟಿ ಹಣ ನೀಡುವಂತೆ ಬ್ಲಾಕ್‌ಮೇಲ್‌ ಮಾಡಿದ್ದರು ಎಂದು ಕೆಜೆಎಫ್‌ ಬಾಬು ಹೇಳಿದ್ದಾರೆ.

kgf babu on cm siddaramaiah and tj abraham regard Muda Scam san
Author
First Published Sep 2, 2024, 1:13 PM IST | Last Updated Sep 2, 2024, 1:13 PM IST

ಬೆಂಗಳೂರು (ಸೆ.2): ಸಿದ್ದರಾಮಯ್ಯ ಅವರ ಬಳಿ ನಾಲ್ಕ್‌ ಜೊತೆ ಬಟ್ಟೆನೂ ಇಲ್ಲ. ಇಂಥವರ ಮೇಲೆ ಹಗರಣದ ಆರೋಪ ಮಾಡೋದು ಎಷ್ಟು ಸರಿ ಎಂದು ಕಾಂಗ್ರೆಸ್‌ ನಾಯಕ ಯೂಸುಫ್‌ ಶರೀಫ್‌ ಅಲಿಯಾಸ್‌ ಕೆಜೆಎಫ್‌ ಬಾಬು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಅವರ ಮೇಲೆ ಬಂದಿರುವ ಮುಡಾ ಅಕ್ರಮದಲ್ಲಿ ದೂರುದಾರನಾಗಿರುವ ಟಿಜೆ ಅಬ್ರಾಹಂ ವಿರುದ್ಧ ಕಿಡಿಕಾರಿರುವ ಕೆಜಿಎಫ್‌ ಬಾಬು, 'ಟಿಜೆ ಅಬ್ರಾಹಂ ಒಬ್ಬ ಬ್ಲಾಕ್ ಮೇಲರ್ , ರೌಡಿ, ಅಫಿಷಿಯಲ್ ಗುಂಡಾ ಎಂದು ಹೇಳಿದ್ದಾರೆ. ಈತನ ಹೆಸರು ಕೇಳಿದರೆ ಡಿಸಿಗಳು ಕೂಡ ಭಯ ಬೀಳ್ತಾರೆ. ಅಧಿಕಾರಿಗಳಿಗೆ ಭಯ ಬೀಳಿಸೋದು, ಧಮ್ಕಿ ಹಾಕೋದಕ್ಕೆ ಟಿಜೆ ಅಬ್ರಾಹಂ ಫೇಮಸ್‌. ನನಗೆ ಎಲೆಕ್ಷನ್ ಟೈಮ್ ನಲ್ಲಿ ಖಾಸಗಿ ಭೂಮಿ ವಿಚಾರವಾಗಿ ಧಮ್ಕಿ‌ ಹಾಕಿದ್ದರು. ಶ್ರೀನಿವಾಸ್ ಪುರ ಕೋಗಿಲು ಕ್ರಾಸ್‌ನಲ್ಲಿಯೇ ಧಮ್ಕಿ ಹಾಕಿದ್ದ ಎಂದು ಹೇಳಿದ್ದಾರೆ.

2008 ರಲ್ಲಿ ನಾನು ಬಿಡ್‌ನಲ್ಲಿ ಆಸ್ತಿ ತೆಗೆದುಕೊಂಡಿದ್ದೆ. 2012 ರಲ್ಲಿ ಇದು ನನ್ನ ವಶಕ್ಕೆ ಬಂದಿತ್ತು. ಒಟ್ಟು 7.5 ಎಕರೆ ಆಸ್ತಿ ವಿಚಾರವಾಗಿ ನನಗೆ ಬ್ಲಾಕ್‌ಮೇಲ್‌ ಮಾಡಿದ್ದರು. ಐದು ಕೋಟಿ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದರು. ಕೊಡದೇ ಇದ್ದಲ್ಲಿ ಈ ವಿಚಾರವಾಗಿ ಮೀಡಿಯಾ ಮುಂದೆ ಹೋಗ್ತಿನಿ ಎಂದಿದ್ದರು. ಅದಲ್ಲದೆ, ನಿಮ್ಮದು ಒಂದು ನೇಕೆಡ್ ವಿಡಿಯೋ ಇದೆ ಅದನ್ನು ರಿಲೀಸ್ ಮಾಡ್ತೀನಿ ಅಂತ ಬ್ಲಾಕ್ ಮೇಲ್ ಮಾಡಿದ್ದರು. ಯಾವುದಪ್ಪ ನನ್ನ ನೇಕೆಡ್ ಫೋಟೋ ಅಂತ ನನಗೆ ಭಯ ಆಗಿತ್ತು ಎಂದು ಕೆಜಿಎಫ್‌ ಬಾಬು ಹೇಳಿದ್ದಾರೆ.

ಮುಡಾ, ವಾಲ್ಮೀಕಿ ಕೇಸ್‌ ತೆಗೆದ ಬಿಜೆಪಿಗೆ ಕಾಂಗ್ರೆಸ್‌ ಡಿಚ್ಚಿ; ಕೋವಿಡ್‌ ಅಕ್ರಮ ಬಳಿಕ, ಬಿಟ್‌ಕಾಯಿನ್‌ ವರದಿಯೂ ಸಿದ್ದ!

ನಾನು ಚುನಾವಣೆಯ ಬ್ಯುಸಿಯಲ್ಲಿದ್ದೇನೆ. ನೀವು ಯಾರು ಅಂತ ಗೊತ್ತಿಲ್ಲ ನನಗೆ ತೊಂದರೆ ಕೊಡ ಬೇಡಿ ಅಂತ ಮನವಿ ಮಾಡಿದೆ. ಆದರೆ. ಅವರು ಅದನ್ನು ಕೇಳೋದಕ್ಕೆ ರೆಡಿ ಇರಲಿಲ್ಲ. ಐದು ಕೋಟಿ ಕೊಡಲಿಲ್ಲವಾದಲ್ಲಿ ನಿಮ್ಮ ಮರ್ಯಾದೆ ಕಳೆಯುತ್ತೇನೆ ಅಂತ ಬೆದರಿಕೆ ಹಾಕಿದ್ದರು. ಮೀಡಿಯಾಗಳ ಮುಂದೆ ಹೋಗಿ ನನಗೆ ಮರ್ಯಾದೆ ಕಳೆಯೋ ಕೆಲಸ ಮಾಡಿದ್ದರು. ಈ ತರಹದ ವ್ಯಕ್ತಿ ಸಿದ್ದರಾಮಯ್ಯ ಅಂತ ಉತ್ತಮ ರಾಜಕಾರಣಿ ಬಗ್ಗೆ ಮಾತನಾಡುತ್ತಾನೆ. ಸಿದ್ದರಾಮಯ್ಯ ಅವರ ಹತ್ರ ನಾಲ್ಕು ಜೊತೆ ಹೆಚ್ಚಗಿನ ಬಟ್ಟೆ ಇಲ್ಲ ಅಂತಹ ಮುಖ್ಯಮಂತ್ರಿ ವಿರುದ್ದ ಬ್ಲಾಕ್ ಮೇಲ್ ಗೆ ಇಳಿದಿದ್ದಾನೆ. ಪಬ್ಲಿಕ್ ಗೆ ಏನ್ ಒಳ್ಳೆಯದು ಮಾಡಿದ್ದಾನೆ ಈ ಮನುಷ್ಯ. ಅವನು ದುಬೈ ನಲ್ಲಿ ಆಸ್ತಿ ಮಾಡ್ತಾ ಇದ್ದಾನೆ. ಟಿಜೆ ಅಬ್ರಾಹಂ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇಮೆ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಟ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ತಪ್ಪು ಮಾಡಿಲ್ಲ ಅಂದ್ರೆ ಸಿದ್ದರಾಮಯ್ಯಗೆ ಭಯ ಏಕೆ?: ಸಿಎಂ ವಿರುದ್ಧ ಹರಿಹಾಯ್ದ ಸಚಿವ ಪ್ರಹ್ಲಾದ್ ಜೋಶಿ

Latest Videos
Follow Us:
Download App:
  • android
  • ios