Asianet Suvarna News Asianet Suvarna News

ಮುಡಾ, ವಾಲ್ಮೀಕಿ ಕೇಸ್‌ ತೆಗೆದ ಬಿಜೆಪಿಗೆ ಕಾಂಗ್ರೆಸ್‌ ಡಿಚ್ಚಿ; ಕೋವಿಡ್‌ ಅಕ್ರಮ ಬಳಿಕ, ಬಿಟ್‌ಕಾಯಿನ್‌ ವರದಿಯೂ ಸಿದ್ದ!

ಕೋವಿಡ್ ಅಕ್ರಮದ ನಂತರ ಈಗ ಬಿಟ್ ಕಾಯಿನ್ - ಡಾರ್ಕ್ ನೆಟ್ ಹಗರಣದ ವರದಿಯಿಂದ ಬಿಜೆಪಿ ನಾಯಕರಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸಿಐಡಿಯ ಎಸ್‌ಐಟಿ ವಭಾಗ ಸಿದ್ಧಪಡಿಸಿರುವ ಈ ವರದಿ ಈ ವಾರದ ಒಳಗಾಗಿ ಸಿಎಂಗೆ ಸಲ್ಲಿಕೆಯಾಗುವ ಸಾಧ್ಯತೆ ಇದೆ.

After Covid 19 scam Karnataka government is Ready With Bitcoin Scam Report san
Author
First Published Sep 2, 2024, 11:55 AM IST | Last Updated Sep 2, 2024, 11:58 AM IST

ಬೆಂಗಳೂರು (ಆ.2): ಕೋವಿಡ್ ಅಕ್ರಮದ ಕುರಿತ ತನಿಖಾ ವರದಿ ಸರ್ಕಾರದ ಕೈ ಸೇರಿದ ಬೆನ್ನಲ್ಲೇ ಮತ್ತೊಂದು ವರದಿ ಸಿದ್ಧವಾಗಿದೆ. ಅದರೊಂದಿಗೆ ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣದ ವಿಚಾರವನ್ನಿಟ್ಟುಕೊಂಡು ರಾಜ್ಯ ಸರ್ಕಾರಕ್ಕೆ ಸಂಕಷ್ಟಕ್ಕೆ ತಂದಿರುವ ಬಿಜೆಪಿ ನೇತೃತ್ವದ ವಿಪಕ್ಷದ ವಿರುದ್ಧ ನೇರ ಫೈಟ್‌ಗೆ ಕಾಂಗ್ರೆಸ್‌ ಸಜ್ಜಾಗಿದೆ. ಬಿಜೆಪಿ ಕಾಲದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ - ಡಾರ್ಕ್ ನೆಟ್ ಹಗರಣದ ವರದಿ ಶೀಘ್ರದಲ್ಲಿಯೇ ಸರ್ಕಾರದ ಕೈತಲುಪುವ ಸಾಧ್ಯತೆ ಇದೆ. ಬಿಟ್ ಕಾಯಿನ್ ಅಕ್ರಮದ ವರದಿಯನ್ನು ಈಗಾಗಲೇ ಸಿಐಡಿಯ ಎಸ್‌ಐಟಿ ವಭಾಗ ಸಿದ್ದಪಡಿಸಿದೆ. ಎಡಿಜಿಪಿ ಮನಿಷ್ ಖರ್ಬೀಕರ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು,  ಈ ವಾರದ ಒಳಗಾಗಿ ಸಿಎಂಗೆ ವರದಿ ಸಲ್ಲಿಕೆ ಆಗುವ ಸಾಧ್ಯತೆ ಇದೆ. ಈ ಮೂಲಕ ಬಿಜೆಪಿ ನಾಯಕರಿಗೆ ಮತ್ತಷ್ಟು ಚುರುಕು ಮುಟ್ಟಿಸಲು ಸರ್ಕಾರ ತೀರ್ಮಾನಿಸಿದೆ. ಈ ವರದಿ ಬಿಜೆಪಿ ನಾಯಕರಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.

ಮುಡಾ ಹಗರಣದಲ್ಲಿ ಸರ್ಕಾರ ಸಿಲುಕಿಸುವ ಮೂಲಕ ಸಿಎಂ ಹಾಗೂ ಕಾಂಗ್ರೆಸ್‌ಗೆ ಬಿಜೆಪಿ ಸಂಕಷ್ಟ ತಂದಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಬಿಜೆಪಿ ಕಾಲದ ಹಗರಣಗಳ ಕುರಿತು ತನಿಖೆ ಮಾಡಲು ತಾಕೀತು ಮಾಡಲಾಗಿತ್ತು. ಹೈ ಕಮಾಂಡ್ ನಾಯಕರ ಸೂಚನೆ ಮೇರೆಗೆ ತನಿಖೆ ಚುರುಕು ಮಾಡಲಾಗಿದೆ.  ಬಿಟ್‌ ಕಾಯಿನ್‌ ಹಗರಣ 2021ರಲ್ಲಿ ಬೆಳಕಿಗೆ ಬಂದಿತ್ತು. ಬಿಜೆಪಿ ಕಾಲದಲ್ಲಿ ನಡೆದಿದೆ ಎನ್ನಲಾದ ಪ್ರಮುಖ ಹಗರಣ ಇದಾಗಿತ್ತು. ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ ದೂರಿತ್ತು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌ ಸರ್ಕಾರ ಈ ಪ್ರಕರಣವನ್ನು ತನಿಖೆಗೆ ವಹಿಸಿತ್ತು.

ಬಿಟ್ ಕಾಯಿನ್ ಹಗರಣ: ಡಿವೈಎಸ್‌ಪಿ ಶ್ರೀಧರ್ ಪೂಜಾರ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್‌

ಸಿಐಡಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ಸರ್ಕಾರ ಇದಕ್ಕಾಗಿ ಎಸ್‌ಐಟಿಯನ್ನು ರಚನೆ ಮಾಡಿತ್ತು. 2023ರ ಜುಲೈ 3 ರಂದು ಸರ್ಕಾರ ಈ ಬಗ್ಗೆ ತೀರ್ಮಾನ ಮಾಡಿತ್ತು. ಸುಧೀರ್ಘ ವಿಚಾರಣೆ ಬಳಿಕ ತನಿಖಾ ವರದಿ ಈಗ ಸಿದ್ದಗೊಂಡಿದೆ.

ಇವೆಲ್ಲಾ ವಿಚಿತ್ರ,ವಿಕೃತ, ಅಸಹ್ಯ ಪಡುವ ಪ್ರಕರಣ, ಯಾರು ಮಾಡಿದ್ದಾರೆ ಅವರಿಗೆ ಏನೂ ಅನ್ನಿಸ್ತಿಲ್ಲ: ಪ್ರಿಯಾಂಕ್ ಖರ್ಗೆ

Latest Videos
Follow Us:
Download App:
  • android
  • ios