ಕಾವೇರಿ ಸಮಸ್ಯೆ ಕೇವಲ ರಾಜಕೀಯ ಹೋರಾಟವಲ್ಲ: ಸಂಸದೆ ಸುಮಲತಾ ಅಂಬರೀಶ್
ನಾನು ರಾಜಕೀಯವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದೇನೆ. ಆದರೆ, ನಾನು ಬಿಜೆಪಿ ಸಂಸದೆ ಅಲ್ಲ. ಬಿಜೆಪಿ ನಿರ್ಧಾರ ನನಗೆ ಅನ್ವಯವಾಗುವುದಿಲ್ಲ. ಇನ್ನು ನನಗೆ ರಾಜಕೀಯ ಅನಿವಾರ್ಯವೂ ಅಲ್ಲ, ಆಕಸ್ಮಿಕ ಎಂದಷ್ಟೆ ಹೇಳಿದ ಸುಮಲತಾ ಅಂಬರೀಶ್
ಮಂಡ್ಯ(ಆ.20): ಕಾವೇರಿ ಹೋರಾಟ ಎನ್ನುವುದು ಕೇವಲ ರಾಜಕೀಯ ಹೋರಾಟವಲ್ಲ. ಇದರಲ್ಲಿ ಜನಸಾಮಾನ್ಯರೆಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮಳೆ ಕೊರತೆ ಎದುರಾದಾಗಲೆಲ್ಲಾ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕೇಂದ್ರದಿಂದ ಹಿಡಿದು ಸುಪ್ರೀಂಕೋರ್ಚ್ವರೆಗೂ ತಮಿಳುನಾಡು ಪರವಾಗಿಯೇ ತೀರ್ಪುಗಳು ಹೊರಬೀಳುತ್ತಿವೆ. ಇದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ. ಈ ಹಂತದಲ್ಲಿ ಸರ್ಕಾರಗಳು ಜವಾಬ್ದಾರಿಯುತ ತೀರ್ಮಾನಗಳನ್ನು ಕೈಗೊಳ್ಳಬೇಕಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಮಿಳುನಾಡು ಎದುರು ದೈನೇಸಿಯಾಗಿ ಮಂಡಿಯೂರಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ : 10 ಟಿಎಂಸಿ ಕಾವೇರಿ ನೀರು
ಬಿಜೆಪಿ ಸಂಸದೆಯಲ್ಲ:
ನಾನು ರಾಜಕೀಯವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದೇನೆ. ಆದರೆ, ನಾನು ಬಿಜೆಪಿ ಸಂಸದೆ ಅಲ್ಲ. ಬಿಜೆಪಿ ನಿರ್ಧಾರ ನನಗೆ ಅನ್ವಯವಾಗುವುದಿಲ್ಲ. ಇನ್ನು ನನಗೆ ರಾಜಕೀಯ ಅನಿವಾರ್ಯವೂ ಅಲ್ಲ, ಆಕಸ್ಮಿಕ ಎಂದಷ್ಟೆ ಹೇಳಿದರು.
‘ಕೈ’ಗೆ ಆಹ್ವಾನವಿಲ್ಲ: ಕಾಂಗ್ರೆಸ್‌ನಿಂದ ನನಗೆ ಯಾವುದೇ ಆಫರ್ ಬಂದಿಲ್ಲ. ಎಲ್ಲವೂ ವದಂತಿ ಅಷ್ಟೇ. ಎಲ್ಲವೂ ಸರಿ ಎಂದಾದರೆ ಮಾತ್ರ ಮುಂದಿನ ಹೆಜ್ಜೆ ಇಡುತ್ತೇನೆ, ನಾನು ಸಂತೋಷವಾಗಿದ್ದೇನೆ ಎಂದರು.