Asianet Suvarna News Asianet Suvarna News

'ಅಂವ ದಿನಾ ಬೆಳಗಾದ್ರೆ ಸರ್ಕಾರದ ವಿರುದ್ಧ ಮಾತಾಡ್ತಿದ್ದ'; ಮಾಜಿ ರಾಜ್ಯಪಾಲರ ವಿರುದ್ಧ ಬೊಮ್ಮಾಯಿ ಏಕವಚನದಲ್ಲಿ ವಾಗ್ದಾಳಿ

ರಾಜ್ಯದಲ್ಲಿಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆಯೋ ಅದು ಅವರ ಆಂತರಿಕ ವಿಚಾರ ಆದರೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಅನ್ನೋದು ಮುಖ್ಯ. ರಾಜ್ಯದಲ್ಲಿ ಆಡಳಿತ ಸಂಪೂರ್ಣ  ಸ್ಥಗಿತಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

Karnatama former cm basavaraj bommai outraged against karnataka formers governor hansraj bhardwaj rav
Author
First Published Aug 25, 2024, 3:01 PM IST | Last Updated Aug 25, 2024, 3:01 PM IST

ಹುಬ್ಬಳ್ಳಿ (ಆ.25): ರಾಜ್ಯದಲ್ಲಿಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆಯೋ ಅದು ಅವರ ಆಂತರಿಕ ವಿಚಾರ ಆದರೆ ರಾಜ್ಯದಲ್ಲಿ ಏನು ನಡೆಯುತ್ತಿದೆ ಅನ್ನೋದು ಮುಖ್ಯ. ರಾಜ್ಯದಲ್ಲಿ ಆಡಳಿತ ಸಂಪೂರ್ಣ  ಸ್ಥಗಿತಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ವಿಚಾರದಲ್ಲಿ ಸಿದ್ದರಾಮಯ್ಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೇ ಅನ್ನೋದು ಅವರಿಗೆ ಬಿಟ್ಟದ್ದು. ವಿರೋಧ ಪಕ್ಷದ ಆರೋಪಗಳನ್ನು ನಿಭಾಯಿಸಲು ಸಿಎಂ ಸಭೆಗಳ ಮೇಲೆ ಸಭೆ ಮಾಡ್ತಿದಾರೆ. ಒಳ್ಳೆಯ ಆಡಳಿತ ನೀಡಲಿ ಅಂತ ಜನತೆ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದೆ. ಆದರೆ ಅಭಿವೃದ್ಧಿ ಮಾಡುವ ಬದಲು ಲೂಟಿ ಮಾಡಿ ಸರ್ಕಾರದಲ್ಲಿ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಬರಗಾಲ ಬಂದರೂ ಸರಿಯಾದ ಪರಿಹಾರ ಕೊಡಲಿಲ್ಲ. ಇದೀಗ ವಿಪರೀತ ಮಳೆಯಿಂದ  ಮುಳುಗಡೆಯಾದ ಪ್ರದೇಶಗಳಿಗೂ ಪರಿಹಾರ ಕೊಟ್ಟಿಲ್ಲ. ಒಂದು ವಿಡಿಯೋ ಕಾಲ್ ಬಿಟ್ಟರೆ ಬೇರೇನೂ ಮಾಡಿಲ್ಲ ಸಂಕಷ್ಟದಲ್ಲಿ ಜನರಿಗೆ ಸ್ಪಂದನೆ ಮಾಡದ ಸರ್ಕಾರ ರಾಜ್ಯದಲ್ಲಿದೆ ಇಂತಹ ಸರ್ಕಾರ ಬೇಕೆ ಎಂದು ಪ್ರಶ್ನಿಸಿದರು.]

ಮುಡಾ ಹಗರಣ ಮರೆಮಾಚಲು ದಿಲ್ಲಿಯಲ್ಲಿ ಶಾಸಕರ ಪರೇಡ್‌ಗೆ ಸಿಎಂ ತಯಾರಿ: ಬೊಮ್ಮಾಯಿ

ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೊಟ್ಟ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಈ ಹಿಂದೆ ಹಂಸರಾಜ್ ಭಾರದ್ವಾಜ್ ಒಬ್ಬ ರಾಜಕಾರಣಿ ಗವರ್ನರ್ ಆಗಿದ್ದ. ಅಂವ ರಾಜಕಾರಣಿ ಗವರ್ನರ್ ಆಗಿ ವರ್ತಿಸಿದ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು ಮುಂದುವರಿದು, ಹಂಸರಾಜ್ ಭಾರದ್ವಾಜ್ ರಾಜಕಾರಣ ಬಿಟ್ಟರೆ ಬೇರೇನೂ ಮಾಡಲಿಲ್ಲ. ದಿನ ಬೆಳಗಾದರೆ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದ. ಆ ಸಂದರ್ಭದಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಂಡಿತು?  ಅವತ್ತು ರಾಜ್ಯಪಾಲರ ಭಾಷೆ, ರಾಜ್ಯಪಾಲರ ನಿರ್ಧಾರ ಇವರಿಗೆ ಬೇಕಾಗಿತ್ತು. ಈಗ ಅದೇ ಪರಿಸ್ಥಿತಿ ಅವರಿಗೆ ಬಂದಾಗ ಈಗ ಅದೇ ಪರಿಸ್ಥಿತಿ ಅವರಿಗೆ ಬಂದಾಗ ರಾಜ್ಯಪಾಲರ ವಿರುದ್ಧ ಮಾತನಾಡುತ್ತಿದ್ದಾರೆ.

ಸರ್ಕಾರದ ನಿರ್ಲಕ್ಯದಿಂದ ಟಿಬಿ ಡ್ಯಾಮ್ ಸಮಸ್ಯೆ, ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ: ಬಸವರಾಜ ಬೊಮ್ಮಾಯಿ 

ಇದು ಸಂವಿಧಾನ ಮತ್ತು ರಾಜ್ಯಾಂಗದ ಪ್ರಶ್ನೆ ಇದೆ. ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿಗಳು. ಆ ಸ್ಥಾನ ಬಹಳ ಮುಖ್ಯವಾದದ್ದು. ಅವರ ಕಾರ್ಯವೈಖರಿ ಬಗ್ಗೆ ಭಿನ್ನಭಿಪ್ರಾಯವಿದ್ದರೆ ಹೇಳುವುದಕ್ಕೆ ರೀತಿ ನೀತಿ ಇದೆ ಆ ರೀತಿ ನಡೆದುಕೊಂಡರೆ ರಾಜ್ಯ ಸರ್ಕಾರಕ್ಕೆ ಗೌರವ ಸಿಗುತ್ತದೆ. ರಾಜ್ಯಪಾಲರನ್ನು ಬೈಯುವದರಿಂದ ಕಾಂಗ್ರೆಸ್‌ಗೆ ಏನೂ ಲಾಭ ಆಗಲ್ಲ  ಅಹಿಂದ ಸಂಘಟನೆಯಿಂದ ರಾಜಭವನ ಚಲೋ ಇದೆಲ್ಲವೂ ಕಾಂಗ್ರೆಸ್ ಪ್ರೇರಿತ ಹೋರಾಟ ಅಷ್ಟೆ ಎಂದರು..

Latest Videos
Follow Us:
Download App:
  • android
  • ios