ಮುಡಾ, ವಾಲ್ಮೀಕಿ ಹಗರಣದಲ್ಲಿ ರಾಜ್ಯದ ಜನತೆಗೆ ಎಲ್ಲಾ ರಾಜಕಾರಣಿಗಳಿಂದ ಮೋಸ: ಶಾಸಕ ಬಿ.ಪಿ.ಹರೀಶ್

ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಸ್ವಪಕ್ಷದ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು ಹೊಂದಾಣಿಕೆ ರಾಜಕಾರಣದ ಬಗ್ಗೆ ಕಿಡಿಕಾರಿದ್ದಾರೆ.
 

karnatakas people cheated by all politicians in Muda and Valmiki scam Says MLA BP Harish gvd

ರಿಪೋರ್ಟರ್: ವರದರಾಜ್

ದಾವಣಗೆರೆ (ಆ.12): ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಸ್ವಪಕ್ಷದ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು ಹೊಂದಾಣಿಕೆ ರಾಜಕಾರಣದ ಬಗ್ಗೆ ಕಿಡಿಕಾರಿದ್ದಾರೆ.

ಹೊಂದಾಣಿಕೆ ರಾಜಕಾರಣ ಇರುವುದು ಸತ್ಯ:  ಪ್ರಸ್ತುತ ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಹೊಂದಾಣಿಕೆ ರಾಜಕಾರಣ ಇರುವುದು  ಸತ್ಯ ಎಂದು ಗೊತ್ತಾಗಿದೆ.ಡಿಕೆ ಶಿವಕುಮಾರ್ ಹೇಳಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಕಾಂಗ್ರೆಸ್ ನವರು ಭಿಕ್ಷೆ ನೀಡಿದ್ದಾರೆ. ಆದ್ದರಿಂದ ಸನ್ಮಾನ್ಯ ವಿಜಯೇಂದ್ರ ಅವರು ಕಾಂಗ್ರೆಸ್ ಪಕ್ಷದ ಭಿಕ್ಷೆಯಲ್ಲಿ ಅವರು ಇರುವುದು ಬೇಡ  ರಾಜಿನಾಮೆ ನೀಡಿ ಮತ್ತೊಂದು ಬಾರಿ ಗೆದ್ದು ಬರಲಿ ಎಂದರು. ಡಿಕೆ ಶಿವಕುಮಾರ್ ಹೇಳಿಕೆ ನೋಡಿದರೆ‌ ಇದು ಹೊಂದಾಣಿ ರಾಜಕಾರಣಕ್ಕೆ  ಸಾಕ್ಷಿ ಅಲ್ಲವೇ ಎಂದರು.

ಕೆಆರ್‌ಎಸ್‌ ಅಣೆಕಟ್ಟೆಗೆ ಸ್ಟಾಪ್‌ಲಾಕ್ ಗೇಟ್ ಅಳವಡಿಕೆ ಅಗತ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಮುಡಾ ವಾಲ್ಮೀಕಿ ಹಗರಣದಲ್ಲಿ ರಾಜ್ಯದ ಜನತೆಗೆ ಎಲ್ಲಾ ರಾಜಕಾರಣಿಗಳು ಮೋಸ ಮಾಡಿದ್ದಾರೆ: ವಾಲ್ಮೀಕಿ ನಿಗಮ, ಮುಡಾ ಹಗರಣ ಮಾಡಿಲ್ಲ ಎನ್ನುವುದಕ್ಕಿಂತ ನೀವು ಸಹಭಾಗಿಯಾಗಿಲ್ಲವೇ ಎನ್ನುವ ಮಾತುಗಳೇ ಕೇಳಿ ಬರುತ್ತಿದೆ.ಎಲ್ಲಾ ರಾಜಕೀಯ ನಾಯಕರು ಜನರಿಗೆ ಮಾಡಿದ ದ್ರೋಹಿವಿದು ಎಂದರು. ಎಲ್ಲಾ ರಾಜಕೀಯ ನಾಯಕರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಇವರ ತಪ್ಪು ಅವರು ಮುಚ್ಚುತ್ತಾರೆ ಅವರದ್ದನ್ನು ಇವರು ಮುಚ್ಚುತ್ತಾರೆ ಇಂದು ಖಂಡನೀಯ.  ನಾಚಿಕೆಗೆಟ್ಟವರಂತೆ ಎಲ್ಲಾ ಪಕ್ಷದ ಮುಖಂಡರು ವರ್ತಿಸುತ್ತಿದ್ದಾರೆ.  

ರಾಜಕೀಯ ಎಂದರೆ ಜನಸಾಮಾನ್ಯರು  ಅಸಹ್ಯ ಪಡುವಂತೆ ಮಾಡಿದ್ದಾರೆ. ರಾಜ್ಯದಲ್ಲಿ ರಾಜಕಾರಣ ಅಸಹ್ಯದ ಪರಿಸ್ಥಿತಿಯಲ್ಲಿದೆ. ರಾಜಕೀಯ ಅಧಿಕಾರಕ್ಕಾಗಿ ಅಸಹ್ಯಪರಿಸ್ಥಿತಿಗೆ ರಾಜಕಾರಣಿಗಳು ಇಳಿದಿದ್ದಾರೆ‌.  ಇನ್ನು ಕೃಷ್ಣ ಮೃಗ ವಿಚಾರದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ.ಅಸಹಾಯಕ ಪರಿಸ್ಥಿತಿಯಲ್ಲಿ ಜಿಲ್ಲಾ ಸಚಿವರು ಇದ್ದರು.ಆದರೆ ಅವರನ್ನು ಅಂದಿನ‌  ಸಿಎಂ ಬೊಮ್ಮಾಯಿ ರಕ್ಷಣೆ ಮಾಡಿದರು.ಹೊಂದಾಣಿಕೆ ರಾಜಕೀಯ ಇರುವುದರಿಂದಲೇ ಒಬ್ಬರಿಗೊಬ್ಬರು ಕಚ್ಚಾಡುತ್ತಾ ಜನರಿಗೆ ತೋರಿಸುತ್ತಿದ್ದಾರೆಂದರು.

ಧಾರವಾಡ ಜಿಲ್ಲೆಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಮಗ್ರ ಪುಸ್ತಕ ಪ್ರಕಟಿಸುವ ಅಗತ್ಯವಿದೆ: ಶಾಸಕ ಅರವಿಂದ ಬೆಲ್ಲದ

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಹರಿಹಾಯ್ದ ಶಾಸಕ ಬಿ ಪಿ ಹರೀಶ್: ಜಿಲ್ಲಾ ಉಸ್ತುವಾರಿ ಸಚಿವರು ಹರಿಹರ ತಾಲ್ಲೂಕಿನ‌  ಗಡಿಭಾಗದ ಹಳ್ಳಗಳನ್ನು  ಮುಚ್ಚಿದ್ದಾರೆ.ಗಡಿಲೈನ್ ಅಳಿಸಿದ್ದಾರೆ.ಈ ರೀತಿ ಅಕ್ರಮವೆಸಗಿದ್ದರು.ಈ ಬಗ್ಗೆ ಅಧಿವೇಶನದಲ್ಲಿ‌  ದನಿ‌ಎತ್ತಿದಾಗ ಎಲ್ಲವೂ‌ ಸರಿಯಿದೆ ಎಂದು ಉತ್ತರ ನೀಡಿದ್ದಾರೆ. ಆದರೀಗ ನನ್ನ ಹೋರಾಟಕ್ಕೆ ಜಯ‌ದೊರೆತಿದೆ ಮೊದಲಿನಂತೆ ನೈಸರ್ಗಿಕ ಹಳ್ಳಗಳನ್ನು ಸರಿಪಡಿಸಲಾಗಿದೆ ಎಂದು‌ ಶಾಸಕ ಬಿ.ಪಿ‌ಹರೀಶ್ ಹೇಳಿದರು. ಜಿಲ್ಲಾ ಸಚಿವರು ಮುಚ್ಚಿರುವ ಹಳ್ಳಗಳನ್ನು ಈಗ ಮೊದಲ‌ಸ್ವರೂಪಕ್ಕೆ ತರಲಾಗಿದೆ .ಸರ್ಕಾರಕ್ಕೆ ಸೇರಿದ ಸುಮಾರು 30 - 40 ಎಕರೆ  ಗೋಮಾಳವನ್ನು ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ  ಕೆರೆ ಮಾಡಿ ಕೊಂಡಿ ದ್ದಾರೆಂದರು. ಇನ್ನು ಮುಂತಾದ ಹಗರಣಗಳನ್ನು ಮುಂದಿನ ದಿನಗಳಲ್ಲಿ ಬಿಚ್ಚಿಡುವೆ ಎಂದು ಬಿ ಪಿ ಹರೀಶ್ ಎಚ್ಚರಿಕೆ ನೀಡಿದ್ದಾರೆ.

Latest Videos
Follow Us:
Download App:
  • android
  • ios