ನೇತೃತ್ವದಲ್ಲಿ ಅ.9 ರಿಂದ ಬಿಜೆಪಿ ರಾಜ್ಯ ಪ್ರವಾಸ, ಬೆಂಗಳೂರಲ್ಲಿ ಅ.7ಕ್ಕೆ ಬಿಜೆಪಿ ಕಾರ್ಯಕಾರಿಣಿ, ಮುಂಬರುವ ಚುನಾವಣೆಗೆ ಕಾರ್ಯಕಾರಿಣಿ ದಿಕ್ಸೂಚಿ: ಟೆಂಗಿನಕಾಯಿ

ಹುಬ್ಬಳ್ಳಿ(ಸೆ.16):  ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸೆ. 27 ಹಾಗೂ ಅ. 9ರಿಂದ ಎರಡು ಪ್ರತ್ಯೇಕ ತಂಡಗಳು ರಾಜ್ಯದಲ್ಲಿ ಪ್ರವಾಸ ನಡೆಸಲಿವೆ. ಸೆ. 27ರಂದು ರಾಜ್ಯಾಧ್ಯಕ್ಷ ನಳಿನ ಕುಮಾರ್‌ ಕಟೀಲ್‌ ನೇತೃತ್ವದ ತಂಡ ಪ್ರವಾಸ ನಡೆಸಲಿದೆ. ಅ.9 ರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪ್ರವಾಸ ಕೈಗೊಳ್ಳಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ತಂಡವು 52 ಕ್ಷೇತ್ರಗಳಲ್ಲಿ ತನ್ನ ಪ್ರವಾಸ ನಡೆಸಲಿವೆ. ಫಲಾನುಭವಿಗಳ ಸಭೆ, ಪೇಜ್‌ ಪ್ರಮುಖರು, ಕಾರ್ಯಕರ್ತರ ಸಮಾವೇಶವನ್ನು ಈ ತಂಡ ನಡೆಸಲಿದೆ. ಈ ಮೂಲಕ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಲಿದೆ ಎಂದು ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ನೇತೃತ್ವದ ತಂಡ ಇದೇ ತಿಂಗಳ 29 ರಿಂದಲೇ ರಾಜ್ಯ ಪ್ರವಾಸ ಆರಂಭಿಸಲಿದೆ.

Anti Conversion Bill: ದಲಿತರ ಗೌರವಯುತ ಬಾಳ್ವೆಗಾಗಿ ಮತಾಂತರ ನಿಷೇಧ: ಸಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಮತ್ತೊಂದು ತಂಡವು ಅ. 9ರಿಂದ ಪ್ರವಾಸ ಕೈಗೊಳ್ಳಲಿದೆ. ಈ ತಂಡವೂ 52 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಇದು ಸಾರ್ವಜನಿಕರ ಸಮಾವೇಶ, ಪ್ರಮುಖ ಕಾರ್ಯಕರ್ತರ ಸಭೆಗಳನ್ನು ನಡೆಸಲಿದೆ. ಪ್ರತಿ ದಿನ 2 ಕ್ಷೇತ್ರಗಳಲ್ಲಿ ಇಂತಹ ಸಮಾವೇಶ ನಡೆಸಲಿದೆ ಎಂದರು.

ಸೋತಿರುವ ಹಾಗೂ ಗೆದ್ದಿರುವ ಕ್ಷೇತ್ರಗಳಲ್ಲೂ ಇದು ಸಂಚರಿಸಿ ಪಕ್ಷವನ್ನು ಇನ್ನಷ್ಟುಬಲಿಷ್ಠ ಮಾಡಲಿದೆ ಎಂದು ತಿಳಿಸಿದೆ. ಯಾವ್ಯಾವ ಕ್ಷೇತ್ರ ಎಂಬುದು ನಿರ್ಧಾರವಾಗಿದೆ. ಆದರೆ ದಿನಾಂಕ ಇನ್ನು ನಿಗದಿಯಾಗಿಲ್ಲ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲೂ ಸಮಾವೇಶ ನಡೆಸಲಿದೆ ಎಂದರು.

ಅ.7 ರಂದು ಬೆಂಗಳೂರಲ್ಲಿ ಕಾರ್ಯಕಾರಿಣಿ

ಬೆಂಗಳೂರಿನಲ್ಲಿ ಅ. 7ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಆಯೋಜಿಸಲಾಗಿದೆ ಎಂದು ಮಹೇಶ ಟೆಂಗಿನಕಾಯಿ ತಿಳಿಸಿದರು. ಮುಂಬರುವ ಚುನಾವಣೆಗೆ ಸಂಬಂಧಪಟ್ಟಂತೆ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ, ನಿರ್ಣಯ ನಡೆಯಲಿದೆ. ಹೀಗಾಗಿ ಈ ಕಾರ್ಯಕಾರಿಣಿ ಮಹತ್ವ ಪಡೆದಿದೆ ಎಂದು ತಿಳಿಸಿದರು.

NewsHour ಸದನದಲ್ಲಿ ಸಿದ್ದರಾಮಯ್ಯ ಮೇಷ್ಟ್ರ ವ್ಯಾಕರಣ ಪಾಠ, ನಮ್ ಕಡೆ ಹಿಂಗೆ ಎಂದ ಆರ್ ಅಶೋಕ್!

ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್‌, ಡಿ.ಕೆ. ಅರುಣಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದ ಅವರು, ಮುಂಬರುವ ಚುನಾವಣೆಗೆ ಈ ಕಾರ್ಯಕಾರಣಿ ದಿಕ್ಸೂಚಿ ಯಾಗಲಿದೆ ಎಂದರು. ಮೊದಲು ಕಮಿಷನ್‌ ದಾಖಲೆ ನೀಡಲಿ. ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಶೇ. 40ರಷ್ಟುಕಮಿಷನ್‌ ಪಡೆಯುತ್ತಿದೆ ಎಂದು ಆರೋಪಿಸುವ ಕಾಂಗ್ರೆಸ್‌, ಮೊದಲು ಕಮಿಷನ್‌ ಪಡೆದಿರುವ ದಾಖಲೆಗಳನ್ನು ಬಿಡುಗಡೆ ಮಾಡಲಿ. ಬರೀ ಗಾಳಿಯಲ್ಲಿ ಗುಂಡು ಹಾರಿಸಬಾರದು. ಒಂದೇ ಒಂದು ದಾಖಲೆ ಬಿಡುಗಡೆ ಮಾಡುತ್ತಿಲ್ಲ. ತಾಕತ್ತಿದ್ದರೆ ದಾಖಲೆ ಬಿಡುಗಡೆಗೊಳಿಸಲಿ ಎಂದು ಟೆಂಗಿನಕಾಯಿ ಸವಾಲೆಸೆದರು.

ರಾಹುಲ್‌ ಗಾಂಧಿ ಅವರು ಭಾರತ ಜೋಡೋ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ ಅದರ ನಾಯಕರು ಕಾಂಗ್ರೆಸ್‌ ಚೋಡೋ ಕೆಲಸದಲ್ಲಿ ತೊಡಗಿದ್ದಾರೆ. ಮೊದಲು ಕಾಂಗ್ರೆಸ್‌ ಜೋಡೋ ಕಾರ್ಯಕ್ರಮ ಮಾಡಲಿ ಎಂದು ಟೀಕಿಸಿದ ಅವರು, ಗೋವಾದಲ್ಲಿನ 11 ಶಾಸಕರ ಪೈಕಿ 8 ಜನರು ಬಿಜೆಪಿ ಸೇರಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಜೋಡೋ ಮಾಡಬೇಕು ಎಂದು ವ್ಯಂಗ್ಯವಾಡಿದರು.