ಬಿಜೆಪಿಯ ಆಪರೇಶನ್ ವಿಚಾರವನ್ನು ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ತಮ್ಮದೇ ರೀತಿಯಲ್ಲಿ  ವ್ಯಂಗ್ಯ ಮಾಡಿದ್ದಾರೆ. ರೇವಣ್ಣ ಏನಂದ್ರು?

ಮಂಗಳೂರು[ಫೆ.08]  ಕಳೆದ ಹತ್ತು ದಿನದಲ್ಲಿ ಒದ್ದಾಡಿದರೂ ಬಿಜೆಪಿಯವರಿಗೆ ಆಪರೇಷನ್ ಥಿಯೆಟರ್‌ ಸಿಕ್ಕಿಲ್ಲ. ಆಪರೇಷನ್‌ಗೆ ಡಾಕ್ಟರ್ ಗಳನ್ನು ಹುಡುಕಿದ್ರು. ಥಿಯೇಟರ್ ಕೂಡಾ ಸಿಕ್ಕಿಲ್ಲ‌, ಈಗ ಆಪರೇಷನ್ ಆಗದೆ ಪರದಾಡುತ್ತಿದ್ದಾರೆ ಎಂದು ಸಚಿವ ರೇವಣ್ಣ ವ್ಯಂಗ್ಯವಾಡಿದ್ದಾರೆ.

ಧರ್ಮಸ್ಥಳದಲ್ಲಿ ಮಾತನಾಡಿದ ರೇವಣ್ಣ, ರೈತರ ಸಾಲಮನ್ನಾ ಬಗ್ಗೆ ಮೋದಿಗೆ ಗೊತ್ತಿಲ್ಲ. ಪ್ರಧಾನಿ ಮೋದಿ ಅವರಿಗೆ ಕರ್ನಾಟಕದ ವಿಚಾರ ಗೊತ್ತಿಲ್ಲ. ರಾಜ್ಯದ ವಿಚಾರ ತಿಳಿದು ಲೋಕಸಭೆಯಲ್ಲಿ ಹೇಳಲಿ. ಮಾರ್ಚ್‌ನಲ್ಲಿ‌ ಸಾಲಮನ್ನಾದ ಹಣ ಬಿಡುಗಡೆಯಾಗುತ್ತದೆ‌. ಹಾಸನ, ಬೆಳಗಾವಿ, ಬಾಗಲಕೋಟೆಯಲ್ಲಿ ರಿಲೀಸ್ ಆಗುತ್ತದೆ ಎಂದರು.

42ಸಾವಿರ ಕೋಟಿ ಸಾಲ ಮನ್ನಾ ಆಗಿ ರೈತರನ್ನು ಋಣ ಮುಕ್ತ ಮಾಡುತ್ತೇವೆ. ಕುಮಾರಸ್ವಾಮಿ ಉತ್ತಮ ಬಜೆಟ್ ಮಂಡಿಸಿದ್ದಾರೆ. ರೈತರು ಬಡವರು ಮಧ್ಯಮ‌ ವರ್ಗಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಕರಾವಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಮೀನುಗಾರರಿಗೆ ಹಲವಾರು ಕಾರ್ಯಕ್ರಮ ತಂದಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು.