ಮೈಸೂರು[ನ.16]: ನಾನು ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಲು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಅವರೇ ಕಾರಣ ಎಂದು ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಶ್ರೀನಿವಾಸ ಪ್ರಸಾದ್‌ ಮೂಲಕ ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದರು. ಜೆಡಿಎಸ್‌ ಬಿಟ್ಟು ಬಿಜೆಪಿ ಅಧಿಕಾರಕ್ಕೆ ಬರಲು ನೀವೇ ಮುಂದೆ ನಿಲ್ಲಬೇಕು ಎಂದು ಪ್ರಸಾದ್‌ ಕೇಳಿದರು. ಅವರ ಮನೆಯಲ್ಲಿಯೇ ಎಲ್ಲವೂ ತೀರ್ಮಾನವಾಯಿತು. ಶ್ರೀನಿವಾಸ ಪ್ರಸಾದ್‌ ಹೊರತು ಬೇರೆ ಯಾರೇ ಹೇಳಿದರೂ ನಾನು ಬಿಜೆಪಿಗೆ ಒಪ್ಪುತ್ತಿರಲಿಲ್ಲ ಎಂದರು.

ಹುಣಸೂರು: ಸಿ. ಪಿ. ಯೋಗೇಶ್ವರ್ ಭಾವಚಿತ್ರವುಳ್ಳ 30 ಸಾವಿರ ಸೀರೆ ವಶ

ಗೆಲವೂ ನಮ್ಮದೆ, ಮಂತ್ರಿಯೂ ನಾನೇ:

ನಾವು ಪಕ್ಷಾಂತರಿಗಳಲ್ಲ. ನಾವು ಅಧಿಕಾರಕ್ಕಾಗಿ ಪಕ್ಷ ತ್ಯಾಗ ಮಾಡಲಿಲ್ಲ. ರಾಜ್ಯದಲ್ಲಿ ರಾಕ್ಷಸ ರಾಜಕಾರಣ, ಜಾತಿ ರಾಜಕಾರಣ ಹೆಚ್ಚಾದಾಗ ತ್ಯಾಗ ಮಾಡಬೇಕಾಯಿತು. ರಾಜಕೀಯ ಶುದ್ಧೀಕರಣಗೊಳಿಸುವ ಉದ್ದೇಶದಿಂದ ಈ ರಿಸ್ಕ್‌ ತೆಗೆದುಕೊಂಡಿದ್ದೇನೆ. ಈ ಉಪಚುನಾವಣೆಯಲ್ಲಿ ನಾವೇ ಗೆಲ್ಲಲಿದ್ದು, ಮಂತ್ರಿಯೂ ಆಗುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.

ಇದೇವೇಳೆ ಪ್ರಧಾನಿ ಮೋದಿ ಗುಣಗಾನ ಅವರು, ಮೋದಿಯನ್ನು ದೇವರಾಜ ಅರಸು ಅವರೊಂದಿಗೆ ಹೋಲಿಸಿದರು. ದೇವರಾಜ ಅರಸು ಅವರು ಹೇಗೆ ಜಾತಿ ಇಲ್ಲದ ಜಾತಿಯಿಂದ ಬಂದರೋ, ಹಾಗೆಯೇ ನರೇಂದ್ರಮೋದಿ ಅವರು ಜಾತಿ ಇಲ್ಲದ ಜಾತಿಯಿಂದ ಬಂದಿದ್ದಾರೆ ಎಂದರು.

ಸಿದ್ದು, ಹೆಚ್‌ಡಿಕೆ ಇಬ್ಬರೂ ಮುಗಿಬೀಳಲಿ, ಜನ ನಮ್ಮನ್ ಗೆಲ್ಲಿಸ್ತಾರೆ: ವಿಶ್ವನಾಥ್