ಬೆಂಗಳೂರು[ಜ.07]  ಕಾಂಗ್ರೆಸ್‌ನಲ್ಲಿ ಅಸಮಾಧಾನ ಎದ್ದಿರುವ ನಡುವೆಯೇ ಮಾಜಿ ಸಚಿವ ಎ.ಮಂಜು ನಿವಾಸದಲ್ಲಿ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದ್ದಾರೆ.

ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ, ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ಹುಣಸೂರು ಮಂಜುನಾಥ, ಪಿರಿಯಾಪಟ್ಟಣ ಮಾಜಿ ಶಾಸಕ ವೆಂಕಟೇಶ ಸೇರಿ 10ಕ್ಮೂ ಹೆಚ್ಚು ಮಾಜಿ ಶಾಸಕರು ಭಾಗಿಯಾಗಿದ್ದಾರೆ.

ಜನವರಿ 8 - 9 ರಂದು ಭಾರತ್ ಬಂದ್ : ಏನಿರುತ್ತೆ..? ಏನಿರಲ್ಲ..?

ದೋಸ್ತಿ ಸರ್ಕಾರದ ನಡೆ, ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರ ಅಬ್ಬರ ಮತ್ತು ದಬ್ಬಾಳಿಕೆ ಹಾಗೂ ಲೋಕಸಭೆ‌ ಚುನಾವಣೆಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಸೇರಿ ಇತರೆ ವಿಚಾರಗಳ ಬಗ್ಗೆ‌ ಚರ್ಚೆ ನಡೆದಿದೆ.

ಸಭೆ ಬಳಿಕ ಮಾತನಾಡಿದ  ಎ.ಮಂಜು, ಎಲ್ಲರ ಮನೆಯಲ್ಲೂ ಒಂದೊಂದು ದಿನ ಊಟ ಮಾಡ್ತೀವಿ. ಕಳೆದ ಬಾರಿ ಮಹದೇವಪ್ಪ ಮನೆಯಲ್ಲಿ ಊಟ ಮಾಡಿದ್ದೇವು. ಈಗ ನಮ್ಮ ಮನೆಯಲ್ಲಿ ಊಟಕ್ಕೆ ಸೇರಿದ್ದೇವು. ಪಕ್ಷದ ಆಗೋ ಹೋಗುಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.

ಪತ್ನಿಯೊಂದಿಗೆ ಅಂಬಿ ಡ್ಯಾನ್ಸ್..ವಿಡಿಯೋ ವೈರಲ್

ಲೋಕಸಭೆ ಚುನಾವಣಾ ಮೈತ್ರಿ ವಿಚಾರದ ಬಗ್ಗೆಯೂ ಮಂಜು ಮಾತನಾಡಿದ್ದಾರೆ. ಹಾಸನವನ್ನ ಜೆಡಿಎಸ್ ಕೇಳಿದ್ರೆ, ಮಂಡ್ಯವನ್ನ ಕಾಂಗ್ರೆಸ್ಸಿಗೆ ಬಿಟ್ಟು ಕೊಡಬೇಕು. ಅಂಬರೀಷ್ ಅವರ ಪುತ್ರನೇ ನಮ್ಮ ಪಕ್ಷದ ಅಭ್ಯರ್ಥಿಯಾಗಲಿ. ನಮ್ಮ ಪಕ್ಷ ಉಳಿಯೋದು ಬೇಡವಾ ? ಪ್ರಶ್ನೆ ಮಾಡಿದರು.