ಬೆಂಗಳೂರು(ಮೇ 30)  ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೊರೋನಾ ನಡುವೆಯೂ  ರಾಜಕಾರಣದ ಮಾತುಗಳನ್ನು ಆಡಿದ್ದಾರೆ. ರಮೇಶ್ ಜಾರಕಿಹೊಳಿ ಪಾಪ ಸುಳ್ಳು ಹೇಳುತ್ತಾರೆ.  ಕಾಂಗ್ರೆಸ್ ನವರು ಸಂಪರ್ಕದಲ್ಲಿದ್ದಾರೆ ಎಂದು ಸುಳ್ಳು ಹೇಳ್ತಿದ್ದಾರೆ. ಮಹೇಶ್ ಕುಮಟಳ್ಳಿ ಬಿಟ್ಟು ಬೇರೆಯವರು ಯಾರು ಹೋದರು? ಎಂದು ಪ್ರಶ್ನೆ ಮಾಡಿದ್ದಾರೆ.

ಕುಮಟಳ್ಳಿ ಬಿಟ್ಟು ರಮೇಶ್ ಜೊತೆ ಯಾರೂ ಇಲ್ಲ.  ಬಿಜೆಪಿಯಲ್ಲಿ ಬೆಂಕಿ ಹತ್ತಿಕೊಂಡಿದೆ. ಯಡಿಯೂರಪ್ಪ ನಮ್ಮ‌ ಲೀಡರ್ ಅಲ್ಲ ಅಂತ ಯತ್ನಾಳ್ ಹೇಳಿದ್ದಾರೆ. ಜೆ.ಪಿ.ನಡ್ಡಾ, ಅಮಿತ್ ಶಾ ನಮ್ಮ ನಾಯಕರು ಎಂದಿದ್ದಾರೆ.  ಯತ್ನಾಳ್ ಮಾತಿನಿಂದ ಏನು ಸಂದೇಶ ಹೋಗುತ್ತದೆ..? ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೊಂದು ವಾರದಲ್ಲಿ ಐವರು ಕಾಂಗ್ರೆಸ್ ಶಾಸಕರ ರಾಜೀನಾಮೆ ಪಕ್ಕಾ

ಅಲ್ಲಿ ಎಲ್ಲಿಯೂ ಯಡಿಯೂರಪ್ಪ ನಾಯಕ ಅಲ್ಲ. ಇದೊಂದು ಕೆಟ್ಟ ಸರ್ಕಾರ, ದರಿದ್ರ ಸರ್ಕಾರ. ನನ್ನ ಕ್ಷೇತ್ರಕ್ಕೆ (ಬಾದಾಮಿ ) 600 ಕೋಟಿ ಕೊಟ್ಟಿದ್ದಾರೆ ಎನ್ನುವುದು ಸುಳ್ಳು. ನನ್ನ ಕ್ಷೇತ್ರಕ್ಕೆ ಅನುದಾನ ಸ್ವಲ್ಪ ಪಡೆದುಕೊಂಡಿದ್ದೆ ಎಂದು ಹೇಳಿದರು.

ಉಮೇಶ್ ಕತ್ತಿ ನನ್ನ ಸ್ನೇಹಿತ. ಕತ್ತಿ ನಾನು ಜನತಾದಳದಲ್ಲಿ ಇದ್ದವರು. ಇಬ್ಬರೂ ಒಟ್ಟಿಗೆ ಸಚಿವರಾಗಿ ಕೆಲಸ ಮಾಡಿದ್ದೇವೆ. ಅವರ ಪಕ್ಷದ ಒಳಗೆ ನಡೆಯೋ ಬೆಳವಣಿಗೆಗೆ ನಾವು ತಲೆ ಹಾಕಲ್ಲ ಎಂದು ಸಿದ್ದರಾಮಯ್ಯ ಬಿಜೆಪಿ ಒಳಗಿನ ಇತ್ತೀಚಿನ ಬೆಳವಣಿಗೆ ಬಗ್ಗೆ ಹೇಳಿದರು.