ಪ್ರಜ್ವಲ್ ಫೋಟೊ ಹಾಕಿಕೊಂಡು ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಮತ ಕೇಳಲಿ: ಮಾಜಿ ಎಂಎಲ್‌ಸಿ ರಮೇಶ್ ಬಾಬು ಲೇವಡಿ

ನಾನು ಬಿಜೆಪಿ-ಜೆಡಿಎಸ್ ಮೈತ್ರಿಯನ್ನ ಸ್ವಾಗತ ಮಾಡುತ್ತೇನೆ. ಇದರ ಜೊತೆಗೆ ನನ್ನದೊಂದು ವಿನಂತಿ, ಹೇಗೋ ಚುನಾವಣೆಗೆ ಇನ್ನೂ ಟೈಂ ಇದೆ. ಪ್ರಜ್ವಲ್ ರೇವಣ್ಣ ಫೋಟೊ ಹಾಕಿಕೊಂಡು ಶಿಕ್ಷಕರ ಕ್ಷೇತ್ರದಲ್ಲಿ ಮತ ಕೇಳಲಿ ಎಂದು ಮಾಜಿ ಎಂಎಲ್‌ಸಿ ರಮೇಶ್ ಬಾಬು ಲೇವಡಿ ಮಾಡಿದರು.

Karnataka MLC polls 2024 Former MLC Ramesh babu press conference at tumakuru rav

ತುಮಕೂರು (ಮೇ.11): ನಾನು ಬಿಜೆಪಿ-ಜೆಡಿಎಸ್ ಮೈತ್ರಿಯನ್ನ ಸ್ವಾಗತ ಮಾಡುತ್ತೇನೆ. ಇದರ ಜೊತೆಗೆ ನನ್ನದೊಂದು ವಿನಂತಿ, ಹೇಗೋ ಚುನಾವಣೆಗೆ ಇನ್ನೂ ಟೈಂ ಇದೆ. ಪ್ರಜ್ವಲ್ ರೇವಣ್ಣ ಫೋಟೊ ಹಾಕಿಕೊಂಡು ಶಿಕ್ಷಕರ ಕ್ಷೇತ್ರದಲ್ಲಿ ಮತ ಕೇಳಲಿ ಎಂದು ಮಾಜಿ ಎಂಎಲ್‌ಸಿ ರಮೇಶ್ ಬಾಬು ಲೇವಡಿ ಮಾಡಿದರು.

ರಾಜ್ಯದ ವಿಧಾನ ಪರಿಷತ್ 3 ಶಿಕ್ಷಕರ ಕ್ಷೇತ್ರ ಸೇರಿ ಒಟ್ಟು 6 ಸ್ಥಾನಗಳಿಗೆ ಚುನಾವಣೆ ನಡೆಯಿರುವ ಹಿನ್ನೆಲೆ  ಇಂದು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿಗೆ ಈಗಾಗಲೇ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಪ್ರಬುದ್ಧ ಶಿಕ್ಷಕ ಮತದಾರರು ಉತ್ತರ ಕೊಟ್ಟಿದ್ದಾರೆ. ಇನ್ನುಳಿದ ಕ್ಷೇತ್ರಗಳಲ್ಲಿ ಪ್ರಜ್ವಲ್ ಪೋಟೋ ಹಾಕಿಕೊಂಡು ಕ್ಯಾಂಪೇನ್ ಮಾಡಲಿ, ನಮಗೇನು ಅಭ್ಯಂತರ ಇಲ್ಲ. ನಾವು ಚುನಾವಣೆಯನ್ನ ಫೇಸ್ ಮಾಡುತ್ತೇವೆ ಎಂದರು.

ಇನ್ನು ರಮೇಶ್ ಬಾಬು ಜೆಡಿಎಸ್‌ನಿಂದ ಬಂದವರು ಎಂಬ ಆರೋಪ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಮಾಹಿತಿ ತಪ್ಪು ಎಂದರು. ಹಾಗೆ ನೋಡಿದರೆ ದೇವೇಗೌಡರು ಸಹ ಕಾಂಗ್ರೆಸ್‌ ಪಾರ್ಟಿಯಿಂದ ಬಂದವರು. ಈ ದೇಶದಲ್ಲಿ ಎಲ್ಲ ಪಾರ್ಟಿಗಳಿಗೆ ಮೂಲ, ಮಾತೃ ಪಾರ್ಟಿ ಕಾಂಗ್ರೆಸ್ ಪಕ್ಷವೇ ಆಗಿದೆ. ಹಾಗಾಗಿ ದೇವೇಗೌಡರು ಸಹ ಕಾಂಗ್ರೆಸ್ ಪಾರ್ಟಿಯಿಂದ ಬಂದವರಾಗಿದ್ದಾರೆ ಎಂದು ತಿರುಗೇಟು ನೀಡಿದರು.

ನಾನು ರೀಸೆಂಟ್ ಆಗಿ ಅಲ್ಲ, ಕಾಂಗ್ರೆಸ್ ಬಂದು ಐದು ವರ್ಷ ಆಯ್ತು. ರಮೇಶ್ ಬಾಬು ಜೆಡಿಎಸ್ ಬಿಟ್ಟು ಹೊರಬಂದವರು, ಜೆಡಿಎಸ್‌ನಿಂದ ಆಚೆ ಬಂದಿಲ್ಲ. ನನ್ನಂತಹವರನ್ನು, ಡಿಟಿ ಶ್ರೀನಿವಾಸ, ಮಧು ಬಂಗಾರಪ್ಪರಂತಹವರನ್ನು, ಪಿ.ಜಿ.ಆರ್.ಸಿಂಧ್ಯಾ, ಎಂಸಿ ನಾಣಯ್ಯ.. ಅಂತವರನ್ನೆಲ್ಲ ಅವರೇ ಆಚೆ ಕಳಿಸಿದ್ದಾರೆ. ನಾವ್ಯಾರೂ ಜೆಡಿಎಸ್ ಬಿಟ್ಟು ಬಂದಿಲ್ಲ. ಜೆಡಿಎಸ್‌ನಲ್ಲಿ ಅಲ್ಲ, ಜನತಾದಳದಲ್ಲಿ ನಾನು ಕುಮಾರಸ್ವಾಮಿಗಿಂತ ಸೀನಿಯರ್. ಅವರು ನನ್ನನ್ನು ನಡೆಸಿಕೊಂಡ ರೀತಿ, ಬೇರೆ ಬೇರೆ ಸಂದರ್ಭಕ್ಕೋಸ್ಕರ ಅವರೇ ಬಿಟ್ಟುಹೋಗುವಂತಹ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ಶಿಕ್ಷಕರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷದ ಡಿಟಿ ಶ್ರೀನಿವಾಸ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

Latest Videos
Follow Us:
Download App:
  • android
  • ios