Asianet Suvarna News Asianet Suvarna News

MLC Election Result: ವಿಧಾನಪರಿಷತ್ ಚುನಾವಣಾ ಫಲಿತಾಂಶದ ಸಂಪೂರ್ಣ ಚಿತ್ರಣ ಇಲ್ಲಿದೆ

* ವಿಧಾನಪರಿಷತ್ ಚುನಾವಣಾ ಫಲಿತಾಂಶ ಪ್ರಕಟ
* 25 ಸ್ಥಾನಗಳಿಗೆ ನಡೆದಿದ್ದ ವಿಧಾನ ಪರಿಷತ್​ ಚುನಾವಣೆ
 * ಆಡಳಿತಾರೂಢ ಬಿಜೆಪಿ ಮೇಲುಗೈ
* ಸಮಬಲದ ಪೈಪೋಟಿ ನೀಡಿದ ಕಾಂಗ್ರೆಸ್
* ತೀವ್ರ ಹೀನಾಯ ಸೋಲುಕಂಡ ಜೆಡಿಎಸ್

Karnataka mlc election result 2021 Details Who Won Who Last rbj
Author
Bengaluru, First Published Dec 14, 2021, 3:40 PM IST

ಬೆಂಗಳೂರು, (ಡಿ.14: ತೀವ್ರ ಕುತೂಹಲ ಮೂಡಿಸಿದ್ದ 25 ಸ್ಥಾನಗಳಿಗೆ ನಡೆದಿದ್ದ ವಿಧಾನ ಪರಿಷತ್​ ಚುನಾವಣೆಯ ಫಲಿತಾಂಶ (Karnataka MLC Election Result) ಇಂದು (ಡಿ.14) ಪ್ರಕರಣವಾಗಿದೆ.

12 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ(BJP) ವಿಧಾನ ಪರಿಷತ್ತಿನಲ್ಲಿ ಬಹುಮತ ಪಡೆದುಕೊಂಡಿದ್ದು,.ಆಡಳಿತಾರೂಢ ಬಿಜೆಪಿಗೆ ಸಮಬಲ ಹೋರಾಟ ನೀಡಿದ ಕಾಂಗ್ರೆಸ್‌(Congress) 11ರಲ್ಲಿ ಗೆಲುವು ಸಾಧಿಸಿದೆ. ಇನ್ನು ಜೆಡಿಎಸ್(JDS) 1 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ.

ವಿಧಾನಪರಿಷತ್‍ನಲ್ಲಿ ತೆರವಾಗಿದ್ದ ಕಾಂಗ್ರೆಸ್‍ನ 14, ಬಿಜೆಪಿಯ 6, ಜೆಡಿಎಸ್ 4, ಪಕ್ಷೇತರ ಒಂದು ಸ್ಥಾನ ಸೇರಿದಂತೆ 25 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ ಇದೀಗ ಬಿಜೆಪಿ ಬಿಜೆಪಿ 6ರಿಂದ 12 ಸ್ಥಾನಗಳಿಗೆ ಹೆಚ್ಚಿಸಿಕೊಂಡಿದ್ರೆ, ಕಾಂಗ್ರೆಸ್ 14ರಿಂದ 11ಕ್ಕೆ ಕುಸಿದಿದೆ. ಇನ್ನು  4 ಸ್ಥಾನ ಹೊಂದಿದ್ದ ಜೆಡಿಎಸ್ ಈ ಬಾರಿ ಕೇವಲ ಒಂದರಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ  ಆಡಳಿತಾರೂಢ ಬಿಜೆಪಿ ಮೇಲುಗೈ ಸಾಧಿಸಿದ್ದು, ಪ್ರತಿಪಕ್ಷ ಕಾಂಗ್ರೆಸ್ ಸಮಬಲದ ಪೈಪೋಟಿ ನೀಡಿದೆ.

Council Election Result : ಹಾಸನ ಕ್ಷೇತ್ರದಲ್ಲಿ ಗೆದ್ದು ಬೀಗಿದ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ

ಜೆಡಿಎಸ್ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿದೆ. ಜೆಡಿಎಸ್ ಭದ್ರಕೋಟೆಯಾದ ಮಂಡ್ಯ, ತುಮಕೂರು, ಕೋಲಾರ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿದೆ.

* ಕೊಡಗು ಕ್ಷೇತ್ರದ ಫಲಿತಾಂಶ ಪ್ರಥಮವಾಗಿ ಪ್ರಕಟವಾಗಿದ್ದು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಜಯದ ನಗೆ ಬೀರಿದ್ದಾರೆ. ತಮ್ಮ ಸಮೀಪ ಪ್ರತಿಸ್ರ್ಪಧಿ ಕಾಂಗ್ರೆಸ್‍ನ ಡಾ.ಮಂತರ್ ಗೌಡ ವಿರುದ್ಧ 105 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

* ಹಾಸನದಲ್ಲಿ ನಿರೀಕ್ಷೆಯಂತೆ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಡಾ.ಸೂರಜ್ ರೇವಣ್ಣ ಮೊದಲ ಪ್ರಾಶಸ್ತ್ಯದಲ್ಲೇ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ್ ಅವರಿಗಿಂತ 1531 ಮತಗಳ ಅಂತರದಿಂದ ಭರ್ಜರಿ ಜಯ ಕಂಡಿದ್ದಾರೆ.

* ಚಿಕ್ಕಮಗಳೂರು ಕ್ಷೇತ್ರದಲ್ಲಿ ಎಂ.ಕೆ.ಪ್ರಾಣೇಶ್ ಅವರು ಕೇವಲ 6 ಮತಗಳ ಅಂತರದಿಂದ ರೋಚಕ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ 1182 ಮತಗಳನ್ನು ಪಡೆದರೆ ಪ್ರಾಣೇಶ್ ಅವರು 1188 ಮತಗಳನ್ನು ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ 39 ಮತಗಳು ಅಸಿಂಧುವಾಗಿವೆ. ಮತಗಳನ್ನು ಮರು ಎಣಿಕೆ ಮಾಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಎಣಿಕೆ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

* ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ನಗರ ವಿಧಾನಪರಿಷತ್ ಕ್ಷೇತ್ರದಲ್ಲಿ ಗೋಪಿನಾಥ್ ರೆಡ್ಡಿ ವಿಜಯದ ನಗೆ ಬೀರಿದ್ದಾರೆ. ಕಾಂಗ್ರೆಸ್‍ನ ಯೂಸೂಫ್ ಶರೀಫ್(ಕೆಜಿಎಫ್) ಬಾಬು ಅವರಿಗೆ ಸೋಲುಣ್ಣಿಸಿದ್ದಾರೆ. 

* ಉತ್ತರ ಕನ್ನಡದಲ್ಲಿ ಬಿಜೆಪಿಯ ಗಣಪತಿ.ಡಿ ಉಲ್ವೇಕರ್ ಅವರು ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೀದರ್‍ನಲ್ಲಿ ಕಾಂಗ್ರೆಸ್‍ನ ಭೀಮರಾವ್ ಪಾಟೀಲ್ ಅವರು ಬಿಜೆಪಿಯ ಪ್ರಕಾಶ್ ಖಂಡ್ರೆ ಅವರಿಗಿಂತ 220 ಮತಗಳ ಅಂತರದಿಂದ ಗೆಲುವು ಸಾಸಿದ್ದಾರೆ.

* ಕಲಬುರಗಿಯಲ್ಲೂ ಕೂಡ ಬಿಜೆಪಿ ಬಿ. ಜಿ. ಪಾಟೀಲ್ ಗೆಲುವು ಸಾಧಸಿದ್ದು, ಕಾಂಗ್ರೆಸ್‌ನ ಶಿವಾನಂದ ಪಾಟೀಲ್ ಮುಖಭಂಗವಾಗಿದೆ.

* ಬಳ್ಳಾರಿಯಲ್ಲಿ ಕಾಂಗ್ರೆಸ್‍ನ ನಿರೀಕ್ಷೆ ಹುಸಿಯಾಗಿದ್ದು, ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಅವರು ಬಿಜೆಪಿಯ ವೈ.ಎಂ.ಸತೀಶ್ ವಿರುದ್ಧ ಸೋಲುಕಂಡಿದ್ದಾರೆ.

* ಚಿತ್ರದುರ್ಗ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಎಸ್.ನವೀನ್ ಅವರು ಗೆಲುವಿನ ನಗೆ ಬೀರಿದ್ದಾರೆ.ಬೆಂಗಳೂರು ಮೂಲದ ಬಿ.ಸೋಮಶೇಖರ್ ಇಲ್ಲಿ ಕಾಂಗ್ರೆಸ್‍ನಿಂದ ಸ್ರ್ಪಧಿಸಿದ್ದು, ಜಯಗಳಿಸಲು ಸಾಧ್ಯವಾಗಿಲ್ಲ. 

* ಮಾಜಿ ಮಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿಯಿಂದ ಕಣಕ್ಕಿಳಿಸಿದ್ದ ಡಿ.ಎಸ್.ಅರುಣ್ ಅವರು ಜಯ ಸಾಸಿದ್ದಾರೆ. ಕಾಂಗ್ರೆಸ್‍ನಿಂದ ಹಾಲಿ ಸದಸ್ಯರಾಗಿದ್ದ ಪ್ರಸನ್ನಕುಮಾರ್ ಅವರನ್ನು ಕಣಕ್ಕಿಳಿಸಲಾಯಿತು. ಆದರೆ ಅವರು ಜಯ ಸಾಸುವಲ್ಲಿ ವಿಫಲರಾಗಿದ್ದಾರೆ.

* ಜೆಡಿಎಸ್ ಭದ್ರಕೋಟೆಯಾಗಿದ್ದ ತುಮಕೂರಿನಲ್ಲಿ ಕಾಂಗ್ರೆಸ್‍ನ ಆರ್.ರಾಜೇಂದ್ರಕುಮಾರ್ ಜಯ ಗಳಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಲೋಕೇಶ್ ಅವರು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಏರ್ಪಟ್ಟಿದ್ದ ತೀವ್ರ ಪೈಪೋಟಿ ನಡುವೆ ಕಾಂಗ್ರೆಸ್ ಜಯದ ನಗೆ ಬೀರಿದೆ.

*  ಭದ್ರಕೋಟೆ ಮಂಡ್ಯದಲ್ಲೂ ಸಹ ಜೆಡಿಎಸ್‌ಗೆ ಮುಖಭಂಗವಾಗಿದೆ. ಜಿಲ್ಲೆ 6ಕ್ಕೆ 6 ಜೆಡಿಎಸ್‌ ಶಾಸಕರಿದ್ದರೂ ಸಹ ಹಾಲಿ ಪರಿಷತ್ ಸದಸ್ಯರಾಗಿದ್ದ ಅಪ್ಪಾಜಿಗೌಡಗೆ ಸೋಲಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇತ್ತು. ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿ ಸಚಿವರಾದ ಸೋಮಶೇಖರ್ ಅವರ ವಿಶೇಷ ಕರ್ತವ್ಯಾಕಾರಿ ದಿನೇಶ್ ಗೂಳಿಗೌಡ ಅವರನ್ನು ಕಾಂಗ್ರೆಸ್‍ನಿಂದ ಇಲ್ಲಿ ಕಣಕ್ಕಿಳಿಸಲಾಗಿತ್ತು. ಹಾಲಿ ಪರಿಷತ್ ಸದಸ್ಯರಾಗಿದ್ದ ಅಪ್ಪಾಜಿ ಗೌಡ ಅವರನ್ನು ಜೆಡಿಎಸ್ ಮತ್ತೆ ಕಣಕ್ಕಿಳಿಸಿತ್ತು. ಬಿಜೆಪಿ ಬಿ.ಸಿ.ಮಂಜುಗೆ ಟಿಕೆಟ್ ನೀಡಿತ್ತು. ಜಿದ್ದಾಜಿದ್ದಿನ ಪೈಪೋಟಿಯಲ್ಲಿ ದಿನೇಶ್ ಗೂಳಿಗೌಡ ವಿಜಯದ ನಗೆ ಬೀರಿದ್ದಾರೆ.

* ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‍ನ ಎಸ್.ರವಿ ಗೆಲುವು ಸಾಸಿದ್ದಾರೆ. ಕೋಲಾರದಲ್ಲಿ ಕಾಂಗ್ರೆಸ್‍ನ ಅನಿಲ್‍ಕುಮಾರ್ ಜಯ ಸಾಧಿಸಿದ್ದಾರೆ. ಮೈಸೂರಿನಲ್ಲಿ ಡಾ.ಡಿ.ತಿಮ್ಮಯ್ಯ ಅವರು ವಿಜಯದ ನಗೆ ಬೀರಿದ್ದಾರೆ. ರಾಯಚೂರು-ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಪಾಟೀಲ್ ಗೆಲುವು ಕಂಡಿದ್ದಾರೆ.

ದ್ವಿಸದಸ್ಯ ಕ್ಷೇತ್ರ ಬಿಜಾಪುರದಲ್ಲಿ ಕಾಂಗ್ರೆಸ್‍ನ ಸುನೀಲ್‍ಗೌಡ ಪಾಟೀಲ್ ಮೊದಲ ಪ್ರಾಶಸ್ತ್ಯದ ಮತ ಪಡೆದು ಗೆಲುವು ಸಾಧಿಸಿದರೆ , ಬಿಜೆಪಿಯ ಅಭ್ಯರ್ಥಿ ಪ್ರಹ್ಲಾದ್ ಪೂಜಾರಿ 2ನೇ ಸ್ಥಾನದಲ್ಲಿದ್ದಾರೆ.

ಬೆಳಗಾವಿಯಲ್ಲಿ ಕೈ ಸುಟ್ಟುಕೊಂಡ ಬಿಜೆಪಿ
ಪ್ರಮುಖವಾಗಿ ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಬೆಳಗಾವಿಯಲ್ಲಿ  ದ್ವಿಸದಸ್ಯ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸದಸ್ಯ ಮಹಾಂತೇಶ್ ಕವಟಿಮಠ ಅವರು ಸೋತ್ತಿದ್ದಾರೆ. ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಅವರನ್ನ ಸೋಲಿಸಲೆಂದು ರಮೇಶ್ ಜಾರಕಿಹೊಳಿ ಅವರು ತಮ್ಮ ಸಹೋದರ ಲಖನ್ ಜಾರಕಿಹೊಳಿ ಅವರನ್ನ ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರು, ಆದ್ರೆ, ಫಲಿತಾಂಶದ ಲೆಕ್ಕಾಚಾರವೇ ಉಲ್ಟಾ ಹೊಡೆದಿದ್ದು, ಕಾಂಗ್ರೆಸ್‌ನ ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿದ್ದ ಲಖನ್ ಜಾರಕಿಹೊಳಿ ಗೆಲುವಿನ ನಗೆ ಬೀರಿದ್ದಾರೆ.ಬಿಜೆಪಿ ಪಕ್ಷದ ಮಹಾಂತೇಶ್ ಕವಟಗಿ ಮಠ ಮೂರನೇ ಸ್ಥಾನಕ್ಕೆ ಹೋಗಿದ್ದಾರೆ.

ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹಮ್ಮದ್ ಪ್ರಥಮ ಹಂತದಲ್ಲೇ ವಿಜಯದ ನಗೆ ಬೀರಿದ್ದು, ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ 2ನೇ ಹಂತದಲ್ಲಿ ಗೆಲುವು ಸಾಸಿದ್ದಾರೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಕೋಟಾಶ್ರೀನಿವಾಸ್ ಪೂಜಾರಿ, ಕಾಂಗ್ರೆಸ್‍ನ ಮಂಜುನಾಥ್ ಬಂಡಾರಿ ಗೆಲುವು ಸಾಸಿದ್ದಾರೆ. ಮೈಸೂರು ಕ್ಷೇತ್ರದಲ್ಲಿ ತಿಮ್ಮಯ್ಯ ಗೆದ್ದಿದ್ದಾರೆ.
"

Follow Us:
Download App:
  • android
  • ios