ವಕ್ಫ್ ಆಸ್ತಿ ಯಾರದ್ದು ಅಲ್ಲ, ಅದು ಹಿರಿಯರು ದಾನ ಕೊಟ್ಟಿದ್ದು: ಸಚಿವ ಜಮೀರ್ ಅಹ್ಮದ್
ರಾಜ್ಯಾದ್ಯಂತ ವಕ್ಫ್ ಆಸ್ತಿ ವಿವಾದ ಜೋರಾಗ್ತಿದೆ. ವಕ್ಫ್ ಆಸ್ತಿ ಯಾರ ಆಸ್ತಿ ಅಲ್ಲ, ಅದು ಹಿರಿಯರು ದಾನವಾಗಿ ಕೊಟ್ಟಿರುವ ಆಸ್ತಿ. ರೈತರ ಆಸ್ತಿಗೆ ನೋಟಿಸ್ ಕೊಟ್ಟಿದ್ರೆ ಅದನ್ನ ವಾಪಸ್ ಪಡೆಯುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ವಿಜಯನಗರ (ನ.1): ರಾಜ್ಯಾದ್ಯಂತ ವಕ್ಫ್ ಆಸ್ತಿ ವಿವಾದ ಜೋರಾಗ್ತಿದೆ. ವಕ್ಫ್ ಆಸ್ತಿ ಯಾರ ಆಸ್ತಿ ಅಲ್ಲ, ಅದು ಹಿರಿಯರು ದಾನವಾಗಿ ಕೊಟ್ಟಿರುವ ಆಸ್ತಿ. ರೈತರ ಆಸ್ತಿಗೆ ನೋಟಿಸ್ ಕೊಟ್ಟಿದ್ರೆ ಅದನ್ನ ವಾಪಸ್ ಪಡೆಯುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಇಂದು ವಿಜಯನಗರದಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸಾಹೇಬ್ರೇ ಹೇಳಿದ್ದಾರೆ. ರೈತರ ಆಸ್ತಿಗೆ ನೋಟೀಸ್ ಕೊಡಬೇಡಿ ಎಂದಿದ್ದಾರೆ. ಬಿಜೆಪಿ ಸರ್ಕಾರದಲ್ಲೂ ವಕ್ಫ್ ಆಸ್ತಿ ತೆಗೆದುಕೊಂಡವರಿಗೆ ನೂರಾರು ನೋಟೀಸ್ ಕೊಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪಿಸಿದರು.
ಲವ್ ಜಿಹಾದ್ ರೀತಿ ಲ್ಯಾಂಡ್ ಜಿಹಾದ್ ನಡಿತೀದೆ ಎಂದ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಟಿ ರವಿ ರಾಜಕಾರಣ ಮಾಡ್ತಾರೆ, ನಾವು ಅದನ್ನು ಎದುರಿಸ್ತೀವಿ. ಸಿಟಿ ರವಿ ಸಚಿವ ಇದ್ದಾಗ 2008 ರಲ್ಲೂ ವಕ್ಫ್ ನೋಟೀಸ್ ಕೊಟ್ಟಿದ್ದಾರೆ. ವಕ್ಫ್ ಆಸ್ತಿಯನ್ನ ಖಬರಸ್ತಾನಕ್ಕೆ, ಸ್ಮಶಾಸನಕ್ಕೆ ಕೊಡೋದಕ್ಕೆ ಅಭ್ಯಂತರ ಇಲ್ಲ ಎಂದರು.
ನಾವು ಕನ್ನಡದ ಕೀರ್ತಿ ಪತಾಕೆ ಹಾರಿಸುವ ಕೆಲಸ ಮಾಡಬೇಕು: ವಿಶ್ವ ಮಾನವ ಸಂದೇಶ ನೀಡಿದ ಡಿಕೆಶಿ
ಹಾವೇರಿಯಲ್ಲಿ ನಿನ್ನೆ ಗಲಾಟೆ ಆಗಿದೆ. ಗಲಾಟೆ ನಡೆಯಬಾರದಿತ್ತು. ಆಗಿದೆ. ಗಲಾಟೆ ಸಂಬಂಧ ಇಲ್ಲಿವರೆಗೆ ಯಾರೊಬ್ಬರು ದೂರು ಕೊಟ್ಟಿಲ್ಲ. ಸರ್ಕಾರ ಯಾವುದೇ ಪರಿಸ್ಥಿತಿ ಬಂದ್ರೂ ನಿಭಾಯಿಸುತ್ತದೆ ಎಂದರು.