ಚಿತ್ರದುರ್ಗ [ನ. 03]  ಸಿಎಂ ಬಿ.ಎಸ್.ಯಡಿಯೂರಪ್ಪ ಆಡಿಯೋ ತಿರುಚಲಾಗಿದೆ? ಸಿದ್ಧರಾಮಯ್ಯ ರಾಜಕೀಯ ನಿವೃತ್ತಿಯ ಮಾತಾಡಿದ್ದರು. ಈಗ ಮತ್ತೆ ಸಿಎಂ ಆಗಲು ಬಟ್ಟೆ ರೆಡಿ ಮಾಡಿಕೊಂಡಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಕುಟುಕಿದ್ದಾರೆ.

ಸಿದ್ಧರಾಮಯ್ಯ ಬಳಸುವ ಭಾಷೆ ಜನ ಗಮನಿಸುತ್ತಿದ್ದಾರೆ. ಅವರಪ್ಪನದಾ ಅನ್ನುವ ಮಾತು ತಿರುಗಿಸಿ ಕೇಳಿದರೆ ಹೇಗೆ? ಸಿದ್ಧರಾಮಯ್ಯ ಹೇಳಿದ್ದು ಯಾವುದು ಜೀವನದಲ್ಲಿ ಆಗಿಲ್ಲ. ಸಿದ್ಧರಾಮಯ್ಯಗೆ ಮಾಡಲು ಕೆಲಸವಿಲ್ಲದೆ ಮಾತಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು.

ಎಚ್.ಡಿ.ಕುಮಾರಸ್ವಾಮಿ ಸಿದ್ಧರಾಮಯ್ಯಗಿಂತ ಎಷ್ಟೋ ಮೇಲು. ಎಚ್ಡಿಕೆ ಹತ್ತು ಹಳ್ಳಿಗೆ ಹೆಚ್ಚು ಭೇಟಿ‌ ನೀಡಿದ್ದಾರೆ. ಸಿದ್ದರಾಮಯ್ಯ ಕೇವಲ ಭಾಷಣ ಮಾಡಿ ಬರುತ್ತಾರೆ ಎನ್ನುತ್ತ ಕುಮಾರಸ್ವಾಮಿ ಅವರನ್ನು ಹೊಗಳುತ್ತಲೇ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.

ಚಿಕ್ಕಬಳ್ಳಾಪುರದಲ್ಲಿ‌ ಬಿಜೆಪಿ ರಣಕಹಳೆ ನಡುವೆಯೇ  ಸುಧಾಕರ್ ವಿರುದ್ಧ ಭುಗಿಲೆದ್ದ ಬಂಡಾಯ

ಎಸ್.ಆರ್.ಪಾಟೀಲ್ ಗೆ ಆಕಸ್ಮಿಕವಾಗಿ ವಿಪಕ್ಷ ನಾಯಕ ಸ್ಥಾನ ಸಿಕ್ಕಿದೆ, ಕೆಲಸ ಮಾಡಲಿ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಿರಿಯ ನಾಯಕರು. ಸರ್ವಪಕ್ಷದವರನ್ನು ಕರೆದು ಅಭಿವೃದ್ಧಿಗೆ ಸಲಹೆ ನೀಡಿ ಆಶೀರ್ವದಿಸಲಿ. ಆಗ ದೊಡ್ಡಗೌಡರು ದೊಡ್ಡಗೌಡರಾಗಿ ಉಳಿಯುತ್ತಾರೆ ಎಂದು ಸೋಮಣ್ಣ ಹೇಳಲು ಮರೆಯಲಿಲ್ಲ.

ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮದುವೆ ಮನೆಯೊಂದರಲ್ಲಿ ಭೇಟಿಯಾಗಿದ್ದಾರೆ. ಇಬ್ಬರು ನಾಯಕರು ಕೈ ಕುಲುಕಿದ್ದಾರೆ ಎಂಬ ವಿಡಿಯೋ ಸುದ್ದಿ ಒಂದು ಕಡೆಯಾಗಿದರೆ ಇನ್ನೊಂದು ಕಡೆ  ಕೆಲ ಜೆಡಿಎಸ್ ನಾಯಕರೆ ಬಿಜೆಪಿಯೊಂದಿಗೆ ಹೋಗುವ ಮಾತುಗಳನ್ನು ಆಡಿದ್ದಾರೆ. ಇದೆಲ್ಲದರ ನಡುವೆ ಸೋಮಣ್ಣ ಈ ರೀತಿಯ ಹೇಳಿಕೆ ನೀಡಿರುವುದು ರಾಜಕಾರಣದ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಬಹುದು.